Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾಟೂ, ಲಿಪ್‌ಸ್ಟಿಕ್​ ಬಳಿಕ ಮೆಹಂದಿ ಕೂಡ ಅಪಾಯಕಾರಿ, ಬೀಳುತ್ತಾ ಕಡಿವಾಣ?

ಕಳಪೆ ಗುಣಮಟ್ಟದ ಮೆಹಂದಿ, ಲಿಪ್‌ಸ್ಟಿಕ್ ಮತ್ತು ಟ್ಯಾಟೂ ಬಳಕೆಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಚರ್ಮದ ಸೋಂಕು, ಅಲರ್ಜಿ ಮತ್ತು ಕ್ಯಾನ್ಸರ್‌ನಂತಹ ಅಪಾಯಗಳನ್ನು ಎದುರಿಸಲಾಗುತ್ತಿದೆ. ಆರೋಗ್ಯ ಇಲಾಖೆ ಈ ಸಮಸ್ಯೆಗಳ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸಿದೆ ಮತ್ತು ಕ್ರಮ ಕೈಗೊಳ್ಳಲು ಮುಂದಾಗಿದೆ. ರಸ್ತೆ ಬದಿಯಲ್ಲಿ ಮಾರಾಟವಾಗುವ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸದಂತೆ ಜನರಿಗೆ ಸಲಹೆ ನೀಡಲಾಗಿದೆ.

ಟ್ಯಾಟೂ, ಲಿಪ್‌ಸ್ಟಿಕ್​ ಬಳಿಕ ಮೆಹಂದಿ ಕೂಡ ಅಪಾಯಕಾರಿ, ಬೀಳುತ್ತಾ ಕಡಿವಾಣ?
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Mar 01, 2025 | 9:42 AM

ಬೆಂಗಳೂರು, ಮಾರ್ಚ್​ 01: ಟ್ಯಾಟೂ (Tattoo), ಲಿಪ್​ಸ್ಟಿಕ್ (Lipstick) ಬಳಿಕ ಇದೀಗ ಮೆಹೆಂದಿ (Mehendi) ಯಲ್ಲೂ ಅಪಾಯಕಾರಿ ಅಂಶ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಮೆಹೆಂದಿಯಿಂದ ಚರ್ಮ ರೋಗ, ಸ್ಕಿನ್ ಅಲರ್ಜಿ, ಕಡಿತದಂತಹ ಸಮಸ್ಯೆಯಿಂದ ಜನರು ಬಳಲುತ್ತಿರುವುದರಿಂದ ಮೆಹೆಂದಿ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಮೆಹಂದಿ ಬಳಕೆ ವಿಚಾರವಾಗಿ ಈಗಾಗಲೇ ಸಾವಿರಾರು ದೂರುಗಳು ಆರೋಗ್ಯ ಇಲಾಖೆಗೆ ಬಂದಿವೆ. ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಮೆಹಂದಿಯನ್ನೂ ಕೂಡ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಆರೋಗ್ಯ ಇಲಾಖೆ ಈಗಾಗಲೆ ನಕಲಿ ಪ್ರಾಡೆಕ್ಟ್​ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ವಿಚಾರ ಬಹಿರಂಗಗೊಂಡಿದೆ. ರಸ್ತೆ ಬದಿ ಬ್ರ್ಯಾಂಡ್ ಹೆಸರಿನ ಪ್ರಾಡಕ್ಟ್ ಖರೀದಿಸದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದ್ದಾರೆ. ಇನ್ನು, ಅವಧಿ ಮುಗಿದ ಕಾಸ್ಮೆಟಿಕ್ಸ್​ಗಳನ್ನು ಬಳಸುವುದರಿಂದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ
Image
ಟ್ಯಾಟೂನಿಂದ ಎಚ್​ಐವಿ, ಕ್ಯಾನ್ಸರ್: ರಾಜ್ಯದಿಂದ ಹೊಸ ಕಾನೂನಿನ ಸುಳಿವು
Image
ಬೆಂಗಳೂರಿನಲ್ಲಿ ಆಪರೇಷನ್​ ಇಡ್ಲಿ: ಹೋಟೆಲ್​ಗಳ ಮೇಲೆ ಅಧಿಕಾರಿಗಳ ರೇಡ್​
Image
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
Image
ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ!

ಟ್ಯಾಟೂಗೆ ಬೀಳುತ್ತಾ ಕಡಿವಾಣ?

ಟ್ಯಾಟೂ ಹಾಕಲು ಬಳಸುವ ಬಣ್ಣ ಅಪಾಯಕಾರಿಯಾಗಿದೆ ಅಂತ ವರದಿಯಲ್ಲಿ ಬಹಿರಂಗಗೊಂಡಿದೆ. ಟ್ಯಾಟೂ ಬಣ್ಣದಲ್ಲಿ 22 ಹೆವಿ ಮೆಟಲ್ ಇದ್ದು, ಇದು ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಟ್ಯಾಟೂ ಹಾಕಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಆರೋಗ್ಯ ಇಲಾಖೆ ಮುಂದಾಗಿದೆ.

ಬ್ಯಾನ್ ಆಗುತ್ತಾ ಲಿಪ್​​ಸ್ಟಿಕ್​

ಲಿಪ್​​ಸ್ಟಿಕ್​ನಲ್ಲಿ ಕಳಪೆ ಗುಣಮಟ್ಟದ ಬಣ್ಣ, ವ್ಯಾಕ್ಸ್ ಬಳಕೆಯ ಆತಂಕ ಎದುರಾಗಿದೆ. ಕಳಪೆ ಲಿಪ್​ಸ್ಟಿಕ್​ನಿಂದ ಅಲರ್ಜಿಕ್ ರಿಯಾಕ್ಷನ್ ಜೊತೆಗೆ ತುಟಿಗಳ ನ್ಯಾಚುರಲ್ ಪಿಂಗ್ಮೆಂಟೇಷನ್ ಹಾಳಾಗುತ್ತದೆ. ರಾಜ್ಯದ ಎಲ್ಲ ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳ ದುರ್ಬಳಕೆ ಆಗಿರುವುದು ಪತ್ತೆಯಾಗಿದೆ.

ಮಾರಕವಾಯ್ತು ಹಸಿರು ಬಟಾಣಿ

ಹಸಿರು ಬಟಾಣಿ ಹಾಗೂ ಎಣ್ಣೆಯಲ್ಲಿ ಕರಿದ ಹಸಿರು ಬಟಾಣಿಯಲ್ಲಿ ಕಲರಿಂಗ್ ಏಜೆಂಟ್ ಬಳಸಿರುವುದು ಪತ್ತೆಯಾಗಿತ್ತು. 106 ಮಾದರಿಗಳನ್ನು ಸಂಗ್ರಹಿಸಿದ್ದು 31 ಸ್ಯಾಂಪಲ್ಸ್ ವಿಶ್ಲೇಷಣೆಗೆ ಒಳಪಡಿಸಿ ವರದಿ ಬಿಡುಗಡೆಯಾಗಿತ್ತು. ಈ 31 ಮಾದರಿಗಳಲ್ಲಿ 26 ಮಾದರಿಗಳು ಅಸುರಕ್ಷಿತ ಎಂಬುದು ಪತ್ತೆಯಾಗಿತ್ತು.

ಇದನ್ನೂ ಓದಿ: ಟ್ಯಾಟೂನಿಂದ ಬರುತ್ತೆ ಹೆಚ್​ಐವಿ, ಕ್ಯಾನ್ಸರ್​: ಆರೋಗ್ಯ ಇಲಾಖೆ ಅಲರ್ಟ್

ಆಹಾರ ಮತ್ತು ಆರೋಗ್ಯ ಇಲಾಖೆ 5 ಸಾವಿರ ಅಧಿಕ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ತಿಳಿದಿದೆ. ಜನವರಿ ತಿಂಗಳಲ್ಲಿ 3608 ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ 28 ಆಹಾರ ಪದಾರ್ಥಗಳು ಆರೋಗ್ಯ ಮಾರಕವಾಗಿದೆ ಎಂಬುದು ಗೊತ್ತಾಗಿದೆ. ಫೆಬ್ರವರಿ ತಿಂಗಳಲ್ಲಿ 2543 ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಇವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಎಂಬುದು ತಿಳಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 1 March 25

ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ