ಬೆಂಗಳೂರು: ರಾಜ್ಯದಲ್ಲಿ ಅಂಕೆ ತಪ್ಪಿದ ಕೊರೊನಾ ಮಹಾಮಾರಿಯ ಕಾಟದಿಂದ ಜೀವವಾಯು ಆಮ್ಲಜನಕಕ್ಕೆ ಭಾರೀ ಡಿಮ್ಯಾಂಡ್ ಇದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಅಂದಾಜು 50 ಸಾವಿರ ಕೋವಿಡ್ ಸೋಂಕಿತರು ಐಸಿಯುಗಳಲ್ಲಿ ಇದ್ದಾರೆ. ಇವರಿಗಾಗಿ ದಿನಕ್ಕೆ 1,643 ಟನ್ ಆಕ್ಸಿಜನ್ ಬೇಕಾಗಿದೆ! ಕರ್ನಾಟಕದಲ್ಲಿ ಆಕ್ಸಿಜನ್ ಬೇಡಿಕೆ ಮತ್ತು ಸರಬರಾಜು ಮೇಲೆ ಕಣ್ಗಾವಲು ಇಟ್ಟಿರುವ ಡ್ರಗ್ ಕಂಟ್ರೋಲರ್ ಕಚೇರಿಯು (drug controller office) ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ.. ನೊಡೋಣ.
ರಾಜ್ಯದಲ್ಲಿ ಪ್ರಮುಖವಾಗಿ ಆಮ್ಲಜನಕ ಉತ್ಪಾದನಾ ಘಟಕಗಳು ಇರುವುದು ಏಳು. ಆ ಏಳೂ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆಯಲ್ಲಿ ತೊಡಗಿದರೆ ಕೇವಲ 812 ಟನ್ಗಳಷ್ಟು ಮಾತ್ರವೇ ಆಮ್ಲಜನಕ ಉತ್ಪಾದಿಸಬಲ್ಲವು. ಆದರೆ ಪ್ರಸ್ತುತ ಏಳೂ ಕಂಪನಿಗಳು 600 ಟನ್ ಮಾತ್ರವೇ ಆಮ್ಲಜನಕ ಸರಬರಾಜು ಮಾಡುತ್ತಿವೆ ಎಂಬುದು ಆತಂಕಕಾರಿ ಸಂಗತಿ.
ಏಪ್ರಿಲ್ 14ರಂದು ಏನಾಯಿತೆಂದ್ರೆ ಇದೇ ಕರ್ನಾಟಕ ಡ್ರಗ್ ಕಂಟ್ರೋಲರ್ ಕಚೇರಿಯು ಸಕ್ರಿಯ ಕೊರೊನಾ ಕೇಸ್ಗಳ ಪೈಕಿ ಶೇ. 12 ರಷ್ಟು ಮಂದಿಗೆ ಮಾತ್ರವೇ ಆಮ್ಲಜನಕ ಬೇಕಾಗುತ್ತದೆ ಎಂದು ಅಂದಾಜಿಸಿತ್ತು. ಇದರ ಪ್ರಕಾರ ಏಪ್ರಿಲ್ 21ರ ವೇಳೆಗೆ 20,261 ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೇಕಿತ್ತು. ಅಂದ್ರೆ 600 ಟನ್ ಆಕ್ಸಿಜನ್ ಬೇಕಿತ್ತು. ಆದರೆ ವಿವಿಧ ಆಸ್ಪತ್ರೆಗಳ ಮೂಲಗಳ ಪ್ರಕಾರ ಕೋವಿಡ್ ಅಲ್ಲದ ಇತರೆ ನಾನಾ ರೋಗಿಗಳಿಗೂ ಭಾರೀ ಪ್ರಮಾಣದಲ್ಲಿ ಆಕ್ಸಿಜನ್ ಅಗತ್ಯವಿದೆ.
ರಾಜ್ಯದ ಪ್ರಮುಖ ಏಳು ಆಕ್ಸಿಜನ್ ತುಯಾರಿಕಾ ಕಂಪನಿಗಳಾದ ಭೊರೂಕಾ ಗ್ಯಾಸೆಸ್, ಪ್ರಾಕ್ಸೈರ್ ಇಂಡಿಯಾ ಕಂಪನಿಯ 2 ಘಟಕಗಳು, ಏರ್ ವಾಟರ್ಸ್ ಇಂಡಿಯಾ, ಬಳ್ಳಾರಿ ಆಕ್ಸಿಜನ್, ಯೂನಿರ್ಸಲ್ ಏರ್ ಪ್ರಾಡಕ್ಟ್ ಮತ್ತು ಜೆ ಎಸ್ ಡಬ್ಲ್ಯು ಇಂಡಸ್ಟ್ರಿಯಲ್ ಗ್ಯಾಸೆಸ್ ಕಂಪನಿಗಳು 5,780 ಟನ್ ಅನಿಲವನ್ನು ಮಾತ್ರವೇ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಈಗಿನ ದುರ್ಭರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕಂಪನಿಗಳು ದಿನದ 24 ಗಂಟೆಯೂ ಉತ್ಪಾದನೆಯಲ್ಲಿ ತೊಡಗಿವೆ.
ಆದರೆ ಮೂರು ಪ್ರಮುಖ ಕಂಪನಿಗಳಲ್ಲಿ ಶೇಖರಣಾ ಸಾಮರ್ಥ್ಯ ಕುಸಿದಿದೆ. ಅಲ್ಲಿರುವ ದಾಸ್ತಾನು ತುಂಬಾ ಕಡಿಮೆ ಪ್ರಮಾಣದಲ್ಲಿದೆ. ನಾವು ಉತ್ಪಾದಿಸುತ್ತಿರುವ ಅಷ್ಟೂ ಅನಿಲವನ್ನು ನೇರವಾಗಿ ಸಪ್ಲೈ ಮಾಡುತ್ತಿದ್ದೇವೆ. ದಾಸ್ತಾನು ಪ್ರಕ್ರಿಯೆಗೆ ಕೈಹಾಕುತ್ತಿಲ್ಲ. ಗಮನಾರ್ಹ ಸಂಗತಿಯೆಂದ್ರೆ ಘಟಕದ ಸುರಕ್ಷತೆಯ ದೃಷ್ಟಿಯಿಂದ ನಮ್ಮ ದಾಸ್ತಾನು ಘಟಕಗಳಲ್ಲಿ ಕನಿಷ್ಟ ಒಂದಷ್ಟು ಪ್ರಮಾಣದಲ್ಲಿ ದಾಸ್ತಾನು ಇರಲೇಬೇಕು ಎನ್ನುತ್ತಿದ್ದಾರೆ ಆ ಮೂರು ಪ್ರಮುಖ ಕಂಪನಿಗಳ ಮ್ಯಾನೇಜರ್ಗಳು. ಇದು ನಿಜಕ್ಕೂ ಆತಂಕದ ವಿಷಯವೇ ಸರಿ.
(all the seven major manufacturers operate at full steam but oxygen production storage supply in Karnataka is alarming )