ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಇವತ್ತು ಒಂದೇ ದಿನ 7,040 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 124 ಜನರು ಸಾವನ್ನಪ್ಪಿದ್ದಾರೆ.
ಇಂದಿನ ಕೊರೊನಾ ಸೊಂಕಿತರೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಈಗ 2,26,966ಕ್ಕೇರಿಕೆಯಾಗಿದೆ. ಹಾಗೇನೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ 3,947ಕ್ಕೇರಿಕೆಯಾಗಿದೆ.
ಬೆಂಗಳೂರಿನಲ್ಲಿ ಕೂಡ ಇಂದು ಒಂದೇ ದಿನ 2,131 ಜನರಿಗೆ ಸೋಂಕು ತಗುಲಿರೋದು ದೃಡವಾಗಿದೆ. ಹಾಗೇನೆ 49ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಸೋಂಕಿತರ ಪೈಕಿ 1,41,491 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ, 81,512 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
16-08-2020 HMB Kannada – Copy (1)