ಅನೈತಿಕ ಸಂಬಂಧ ಶಂಕೆ; ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ, ಅಪ್ರಾಪ್ತ ಮಗ ಅರೆಸ್ಟ್

ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಗಂಡ ಮತ್ತು ಮಗ ಕೊಲೆ ಮಾಡಿದ್ದರು. ಕೊಲೆ ಮಾಡಿ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ, ಮಗ ಗ್ರಾಮಸ್ಥರಿಗೆ ನಂಬಿಸಿದ್ದರು. ಬಳಿಕ ತರಾತುರಿಯಲ್ಲಿ ಮಹಾದೇವಿ ಅಂತ್ಯಕ್ರಿಯೆ ಮಾಡಿದ್ದರು.

ಅನೈತಿಕ ಸಂಬಂಧ ಶಂಕೆ; ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ, ಅಪ್ರಾಪ್ತ ಮಗ ಅರೆಸ್ಟ್
ಮಹಿಳೆ ಅತ್ಯಕ್ರಿಯೆ ಮಾಡಿದ ಸ್ಥಳ

ಬಾಗಲಕೋಟೆ: ತುಂಗಳ ಗ್ರಾಮದಲ್ಲಿ ಮಹಾದೇವಿ ವಡ್ರಾಲ(40) ಹತ್ಯೆ ಕೇಸ್ಗೆ ಸಂಬಂಧಿಸಿ ಸಾವಳಗಿ ಠಾಣೆ ಪೊಲೀಸರು ಪತಿ, ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಜೂನ್ 7 ರಂದು ಮಹಾದೇವಿ ಹತ್ಯೆಯಾಗಿತ್ತು.

ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಗಂಡ ಮತ್ತು ಮಗ ಕೊಲೆ ಮಾಡಿದ್ದರು. ಕೊಲೆ ಮಾಡಿ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ, ಮಗ ಗ್ರಾಮಸ್ಥರಿಗೆ ನಂಬಿಸಿದ್ದರು. ಬಳಿಕ ತರಾತುರಿಯಲ್ಲಿ ಮಹಾದೇವಿ ಅಂತ್ಯಕ್ರಿಯೆ ಮಾಡಿದ್ದರು. ಇಷ್ಟೆಲ್ಲಾ ಆದ ಬಳಿಕ ಗ್ರಾಮಸ್ಥರಿಗೆ ತರಾತುರಿಯ ಅಂತ್ಯಕ್ರಿಯೆ ನೋಡಿ ಅನುಮಾನ ಶುರುವಾಗಿತ್ತು. ಕೊನೆಗೆ ಕೊಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಅನಾಮಿಕ ಕರೆ ಬಂದಿದೆ. ಈ ಅನಾಮಿಕ ಕರೆ ಆಧರಿಸಿ ಪೊಲೀಸರು ಪ್ರಕರಣವನ್ನು ಬಯಲು ಮಾಡಿದ್ದಾರೆ. ಸಾವಳಗಿ ಪೊಲೀಸರು ಹಾಗೂ ಜಮಖಂಡಿ ಸಿಪಿಐ ತನಿಖೆ ನಡೆಸಿ ಪತಿ ಹನುಮಂತ ವಡ್ರಾಲ ಹಾಗೂ 14 ವರ್ಷದ ಮಗನನ್ನು ಅರೆಸ್ಟ್ ಮಾಡಿದ್ದಾರೆ.

ಖಚಿತತೆಗಾಗಿ ಶವದ ಮೂಳೆ ಡಿಎನ್ಎ ಟೆಸ್ಟ್ ಮಾಡಿಸಿ ಹಾಗೂ ಬಳೆ ಮೂಲಕ ಶವ ಮಹಾದೇವಿಯದ್ದೇ ಎಂದು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಕೊಲೆಗೈದ ಪತಿ ಹನುಮಂತ ವಡ್ರಾಲ ಹಾಗೂ ಅಪ್ರಾಪ್ತ ಮಗನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

bgk murder

ಹೆಂಡತಿಯನ್ನು ಕೊಲೆ ಮಾಡಿದ ಹನುಮಂತ ವಡ್ರಾಲ

ಇದನ್ನೂ ಓದಿ: ಕ್ರಿಕೆಟ್ ಆಟದಲ್ಲಿ ಮುನಿಸು, ಬುದ್ಧಿವಾದ ಹೇಳಿದ್ದಕ್ಕೆ ದ್ವೇಷ; ಕೊಲೆಗೆ ಯತ್ನಿಸಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ