ಆ ವಸ್ತುಗಳು ಒಂದು ಕಾಲದಲ್ಲಿ ಪಟ್ಟಣ ಪ್ರದೇಶಗಳಲ್ಲಿ ಬೆಳಕು (light) ನೀಡ್ತಿದ್ದವು. ಯಾವುದೇ ಸಭೆ ಸಮಾರಂಭಗಳಿರಲಿ, ಸಂಭ್ರಮಗಳಿರಲಿ ಅಥವಾ ಸೂತಕದ ಛಾಯೆಯೆ ಇರಲಿ ಅವುಗಳ ಬೆಳಕೇ ಆಧಾರವಾಗಿದ್ವು. ಆದರೆ ಕಾಲ ಕಳೆದಂತೆ ಆಧುನಿಕತೆ ಭರಾಟೆಯಲ್ಲಿ ಅವು ಕತ್ತಲೆಡೆಗೆ ಸಾಗಿವೆ.ನಾಡಿಗೆ ಬೆಳಕು ನೀಡಿದ್ದ ದೀಪಗಳು ಈಗ ನೋಡುವ ವಸ್ತುಗಳಾಗಿವೆ.ಅಷ್ಟಕ್ಕೂ ಆ ವಸ್ತುಗಳು ಯಾವುವು ಏನವುಗಳ ಹಿನ್ನೆಲೆ ಇಲ್ಲಿದೆ ನೋಡಿ ಡಿಟೇಲ್ಸ್.. ನೋಡೋದಕ್ಕೆ ದೊಡ್ಡ ಕಪ್ಪು ಚಿಮಣಿಗಳಂತಿರುವ ಇವು ಚಿಮಣಿಗಳಲ್ಲ.ಈ ವಸ್ತುಗಳು ಒಂದು ಕಾಲದಲ್ಲಿ ರಾತ್ರಿ ಬೆಳಕಿನ ಕಿರಣಗಳಾಗಿದ್ವು.ಅಂಧಕಾರದಲ್ಲಿ ಕಣ್ಣಿಗೆ ಬೆಳಕಿನ ಸೊಬಗು ನೀಡಿದ್ವು.ಅಂದ ಹಾಗೆ ಇವುಗಳ ಹೆಸರು ಪೆಟ್ರೊಮ್ಯಾಕ್ಸ್ ೮೦-೧೦೦ ವರ್ಷಗಳ ಹಿಂದಿನ ಕಥೆ ಇದು.ಆ ಸಮಯದಲ್ಲಿ ಈ ಪೆಟ್ರೊಮ್ಯಾಕ್ಸ್ (Petromax)ಗಳು ಗ್ರಾಮ ಪಟ್ಟಣ ನಗರಕ್ಕೆ ಬೆಳಕು ನೀಡ್ತಿದ್ವು. ಬಾಗಲಕೋಟೆ (Bagalkot) ನಗರದ ಕಲಾಲ ಎಂಬುವ ಅಂಗಡಿಯಲ್ಲಿ ಇವು ಅಪರೂಪಕ್ಕೆ ಎಂಬಂತೆ ( museum) ಕಂಡುಬಂದಿವೆ.
ಬೈಕ್ ಗ್ಯಾರೇಜ್ ಮಾಲೀಕ ಮಲ್ಲಿಕಾರ್ಜುನ ಕಲಾಲ ಅವರ ಅಜ್ಜ ಮುತ್ತಜ್ಜರು ಈ ಪೆಟ್ರೊಮ್ಯಾಕ್ಷ್ ದೀಪದ ಟೆಂಡರ್ ಹಿಡಿಯುತ್ತಿದ್ದರು.ಸ್ಥಳೀಯ ಸಂಸ್ಥೆಗಳ ಮೂಲಕ ಪೆಟ್ರೊಮ್ಯಾಕ್ಸ್ ದೀಪ ಬೆಳಕು ನೀಡುವ ಕೆಲಸ ಮಾಡುತ್ತಿದ್ದರು.ಸಾರ್ವಜನಿಕ ಸ್ಥಳದಲ್ಲಿ ಬೀದಿ ಬೀದಿಯಲ್ಲಿ ಕಂಬಕ್ಕೆ ಇವುಗಳನ್ನು ನೇತು ಹಾಕಿ ಬಾಗಲಕೋಟೆ ಪಟ್ಟಣಕ್ಕೆ ಬೆಳಕು ನೀಡುತ್ತಿದ್ದರು.ಇವು ಮೇಡ್ ಇನ್ ಜರ್ಮನಿ ವಸ್ತುಗಳಾಗಿದ್ದು,ಮುಂಬೈನಿಂದ ಖರೀದಿಸಿ ತಂದು ಬಾಡಿಗೆಗೆ ಬಿಡುತ್ತಿದ್ದರು.
ಈ ಪೆಟ್ರೊಮ್ಯಾಕ್ಸ್ ಗಳು ಸೀಮೆ ಎಣ್ಣೆ ಮೂಲಕ ಉರಿಯುತ್ತಿದ್ದವು.ಬಹಳ ತೇಜವಾದ ಬೆಳಕನ್ನು ನೀಡುತ್ತಿದ್ದವು.ಇವುಗಳ ಬೆಳಕು ಇಡೀ ಓಣಿಗೆ ಆಗ್ತಿತ್ತು.ಯಾವುದೇ ಊರು ಸಭೆ ಸಮಾರಂಭಗಳಿರಲಿ ,ಕಾರ್ಯಕ್ರಮ ಗಳಿರಲಿ ಈ ಪೆಟ್ರೊಮ್ಯಾಕ್ಸ್ ಗಳ ಬೆಳಕೆ ಆಧಾರವಾಗಿತ್ತು.ನಂತರ ಕಾಲಕ್ರಮೇಣ ಕೈ ಗ್ಯಾಸ್ ಗಳು ಅಸ್ತಿತ್ವಕ್ಕೆ ಬಂದವು.ಮದುವೆ ಹಬ್ಬ ಹರಿದಿನ ಸಭೆ ಸಮಾರಂಭಕ್ಕೆ ಇವುಗಳು ಆಸರೆಯಾದವು.
ಆದರೆ ಈಗ ಎಲ್ಲ ಕಡೆ ಹೈಮಾಸ್ಟ್ ವಿದ್ಯುದ್ದೀಪ,ಎಲ್ ಇಡಿ ಬಲ್ಬ್ ಸೇರಿದಂತೆ ಹೈಟೆಕ್ನಾಲಜಿ ದೀಪಗಳು ಚಾಲ್ತಿಯಲ್ಲಿವೆ.ಇದರಿಂದ ಈಗ ಇವುಗಳ ನೆನಪು ಇತಿಹಾಸ ಮಾತ್ರ..ಆದರೆ ಅವುಗಳನ್ನು ಕಾದಿಟ್ಟಿರೋದು ಪ್ರಶಂಸನೀಯ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಅಂಧಕಾರ ಕಳೆಯುತ್ತಿದ್ದ ದೀಪಗಳು ಕತ್ತಲೆ ಕಡೆ ಸಾಗಿವೆ.ಏನೆ ಆಗಲಿ ಹಳೆ ವಸ್ತುಗಳ ನೋಡೋದೆ ಒಂದು ವಿಭಿನ್ನ ಅನುಭವ ಬಿಡಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ