ಆಸ್ತಿ ವಿವಾದ: ಕೋರ್ಟ್ ಆವರಣದಲ್ಲೇ ಸಂಬಂಧಿ ಯುವಕನಿಂದ ಭೀಕರವಾಗಿ ಕೊಲೆಯಾದ ವಕೀಲ

ತಾರಿಹಳ್ಳಿ ನಿವಾಸಿ ವೆಂಕಟೇಶ್​ ಕೊಲೆಯಾದ ವಕೀಲರಾಗಿದ್ದು, ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲನನ್ನ ಕೊಂದಿರುವ ಶಂಕೆ ವ್ಯಕ್ತವಾಗಿದೆ.

  • TV9 Web Team
  • Published On - 14:30 PM, 27 Feb 2021
ಆಸ್ತಿ ವಿವಾದ: ಕೋರ್ಟ್ ಆವರಣದಲ್ಲೇ ಸಂಬಂಧಿ ಯುವಕನಿಂದ ಭೀಕರವಾಗಿ ಕೊಲೆಯಾದ ವಕೀಲ
ವೆಂಕಟೇಶ್,​ ಕೊಲೆಯಾದ ವಕೀಲ

ಬಳ್ಳಾರಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲೇ ವಕೀಲನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ನಡೆದಿದೆ.

ತಾರಿಹಳ್ಳಿ ನಿವಾಸಿ ವೆಂಕಟೇಶ್​ ಕೊಲೆಯಾದ ವಕೀಲರಾಗಿದ್ದು, ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲನನ್ನ ಕೊಂದಿರುವ ಶಂಕೆ ವ್ಯಕ್ತವಾಗಿದೆ. ವಕೀಲ ವೆಂಕಟೇಶ್​ನ ಸಂಬಂಧಿ ಯುವಕನಿಂದ ಈ ಕೃತ್ಯ ನಡೆದಿದ್ದು, ಲಾಂಗ್​ನಿಂದ ಮನಸೋ ಇಚ್ಛೆ ಕೊಚ್ಚಿ ಕೊಲ್ಲಲಾಗಿದೆ. ಹತ್ಯೆ ವೇಳೆ ವಕೀಲರು, ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಘಟನಾ ಸ್ಥಳಕ್ಕೆ ಹೊಸಪೇಟೆ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜಮೀನು ವಿಚಾರ: ಬಾಮೈದನ ಮೇಲೆ ಇಬ್ಬರು ಭಾವಂದಿರಿಂದ ಹಲ್ಲೆ, ಯಾವೂರಲ್ಲಿ?