ಬೆಳಗಿನ ಜಾವ ಸಿಲಿಂಡರ್​ ಸ್ಫೋಟ: ತಾಯಿ, ಮಗಳು ಸಜೀವ ದಹನ

  • TV9 Web Team
  • Published On - 11:35 AM, 6 Jan 2020
ಬೆಳಗಿನ ಜಾವ ಸಿಲಿಂಡರ್​ ಸ್ಫೋಟ: ತಾಯಿ, ಮಗಳು ಸಜೀವ ದಹನ

ಬಳ್ಳಾರಿ: ಎಲ್​ಪಿಜಿ ಸಿಲಿಂಡರ್​ ಸ್ಫೋಟಗೊಂಡು ತಾಯಿ, ಮಗಳು ಸಜೀವ ದಹನವಾಗಿರುವ ದುರಂತದ ಘಟನೆ ಸಂಜೀವರಾಯನಕೋಟೆಯಲ್ಲಿ ನಡೆದಿದೆ. ಮನೆಯಲ್ಲಿ ತಾಯಿ ಪಾರ್ವತಿ ಮತ್ತು ಪುತ್ರಿ ಹುಲಿಗೆಮ್ಮ ಇಬ್ಬರೇ ಇದ್ದರು.

ಇಂದು ಬೆಳಗಿನ ಜಾವ ಸಿಲಿಂಡರ್ ರೂಪದಲ್ಲಿ ಯಮ ಬಂದಿದ್ದಾನೆ. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.