ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಆರೋಪ: ಮಹಿಳೆ ಬಂಧನ

ವಿಡಿಯೊವನ್ನು ಉದ್ಯಮಿಗೆ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಈಗ ಮಹಿಳೆಯನ್ನು ಬಂಧಿಸಲಾಗಿದೆ. ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

  • TV9 Web Team
  • Published On - 22:20 PM, 6 Mar 2021
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಆರೋಪ: ಮಹಿಳೆ ಬಂಧನ
ಬಂಧಿತ ಆರೋಪಿ ಗೀತಾ

ಬಳ್ಳಾರಿ: ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಜಿಲ್ಲೆಯ ಹೊಸಪೇಟೆಯಲ್ಲಿ ಗೀತಾ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆ ಕೊಪ್ಪಳ ಮೂಲದ ಉದ್ಯಮಿ ಸುಬ್ಬಾರೆಡ್ಡಿಯನ್ನು ಪರಿಚಯಿಸಿಕೊಂಡಿದ್ದರು. ಸುಬ್ಬಾರೆಡ್ಡಿಯನ್ನು ಪರಿಚಯಿಸಿಕೊಂಡು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ, ಚಹಾದಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ ಬಳಿಕ ತಮ್ಮ ನಗ್ನ ವಿಡಿಯೊ ಮಾಡಿದ್ದರು ಎಂದು ಉದ್ಯಮಿ ಆರೋಪಿಸಿದ್ದಾರೆ.

ಬಳಿಕ, ಆ ವಿಡಿಯೋವನ್ನು ಉದ್ಯಮಿಗೆ ತೋರಿಸಿದ ಗೀತಾ ಸುಬ್ಬಾರೆಡ್ಡಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ್ದರು ಎಂದು ಹೇಳಲಾಗಿದೆ. ಇದೀಗ, ಮಹಿಳೆಯನ್ನು ಬಂಧಿಸಲಾಗಿದೆ. ಹೊಸಪೇಟೆ ಬಡಾವಣೆ ಠಾಣಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಗೀತಾ
ಉದ್ಯಮಿ ಸುಬ್ಬಾರೆಡ್ಡಿಗೆ 30 ಲಕ್ಷ ನೀಡುವಂತೆ ಗೀತಾ ಬೇಡಿಕೆ ಇಟ್ಟಿದ್ದರಂತೆ. ಹಾಗಾಗಿ, ಸುಬ್ಬಾರೆಡ್ಡಿ ಆನ್​ಲೈನ್​ನಲ್ಲಿ 15 ಲಕ್ಷ ವರ್ಗಾಯಿಸಿದ್ದರು. ಈ ನಡುವೆ, ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಅವರ ನಿವಾಸಕ್ಕೆ ತೆರಳಿ ಗೀತಾ 4 ಬಂಗಾರದ ಬಳೆಗಳನ್ನು ಕದ್ದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಗೀತಾ ವಿರುದ್ಧ ಸುಬ್ಬಾರೆಡ್ಡಿ ದೂರು ದಾಖಲಿಸಿದ್ದರು. ಬಳಿಕ, ಗೀತಾ ಮನೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಗಾಂಜಾ ಸಹ ಪತ್ತೆಯಾಗಿತ್ತು. ಗೀತಾ ಮನೆಯಲ್ಲಿ 2.7 ಕೆ.ಜಿ ಗಾಂಜಾ ಪತ್ತೆ ಆಗಿತ್ತು. ಇದೀಗ ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಗೀತಾ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಆಕೆಯ ಪುತ್ರನನ್ನು ಬಂಧಿಸಲಾಗಿದೆ.

ಖೋಟಾನೋಟು ಮುದ್ರಿಸುವ ಯಂತ್ರ ವಶಕ್ಕೆ
ಏಪ್ರಿಲ್​ 6ಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಖೋಟಾನೋಟು ಮುದ್ರಿಸುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಅಮ್ಮಂಕುಲಂ ಸಮೀಪದ ಶಾರದಾ ನಗರದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 14 ಲಕ್ಷಕ್ಕೂ ಹೆಚ್ಚು ಖೋಟಾನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲೈಯರಸನ್, ತುಳಸಿ, ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೇ ವೇಳೆ ಕಳ್ಳಬಟ್ಟಿ ಸಾರಾಯಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: 6 ಮಂದಿ ಸಚಿವರು ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆಂದು ನನಗೆ ಗೊತ್ತಿಲ್ಲ: ದಿನೇಶ್ ಕಲ್ಲಹಳ್ಳಿ

ತಮಿಳುನಾಡು ವಿಧಾನಸಭಾ ಚುನಾವಣೆ: ಎಐಎಡಿಎಂಕೆ ಮೊದಲ ಪಟ್ಟಿ ಪ್ರಕಟ, ಸಿಎಂ ಪಳನಿಸ್ವಾಮಿ ಎಡಪ್ಪಾಡಿಯಿಂದ ಸ್ಪರ್ಧೆ