ರಾಜ್ಯಮಟ್ಟದ ಇಲಾಖೆಗಳ ಕಚೇರಿ ಸುವರ್ಣಸೌಧಕ್ಕೆ ಸ್ಥಳಾಂತರ: ಈ ವಿಧಾನಸೌಧ ಹೇಗಿದೆ ಗೊತ್ತಾ?

ಈಗಾಗಲೇ ಸುವರ್ಣ ಸೌಧಕ್ಕೆ 1 ಕಚೇರಿ ಸ್ಥಳಾಂತರ ಮಾಡಿದ್ದು , ಇನ್ನು ಹಲವು ಕಚೇರಿಗಳ ಸ್ಥಳಾಂತರಕ್ಕೆ ಬೇಡಿಕೆ ಇದೆ. ಅವುಗಳನ್ನ ಕೂಡ ಸರ್ಕಾರ ಶೀಘ್ರದಲ್ಲಿ ಸ್ಥಳಾಂತರ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಾಜ್ಯಮಟ್ಟದ ಇಲಾಖೆಗಳ ಕಚೇರಿ ಸುವರ್ಣಸೌಧಕ್ಕೆ ಸ್ಥಳಾಂತರ: ಈ ವಿಧಾನಸೌಧ ಹೇಗಿದೆ ಗೊತ್ತಾ?
ಸುವರ್ಣಸೌಧದ ಹೊರಾಂಗಣ ದೃಶ್ಯ
preethi shettigar

| Edited By: Ayesha Banu

Dec 20, 2020 | 9:34 AM

ಬೆಳಗಾವಿ: ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹು ದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯ ಫಲ ನೀಡಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಪೀಠವು ಕಾರ್ಯಾರಂಭಿಸಿದೆ. ಅಷ್ಟಕ್ಕೂ ಹೇಗಿದೆ ಈ ವಿಧಾನಸೌಧ ಅಂತೀರಾ ನೀವೇ ನೋಡಿ.

ಹೌದು ಉತ್ತರ ಕರ್ನಾಟಕದ ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುವರ್ಣಸೌಧ ಕಚೇರಿಯನ್ನ ನಿರ್ಮಾಣ ಮಾಡಲಾಗಿದ್ದು, ವರ್ಷಕ್ಕೊಮ್ಮೆ ಅಧಿವೇಶನಕ್ಕೆ ಸೀಮಿತವಾಗಿದ್ದ ಈ ಸುವರ್ಣಸೌಧಕ್ಕೆ ಇನ್ನಿತರ ಸರ್ಕಾರಿ ಕಚೇರಿಗಳನ್ನ ಸ್ಥಳಾಂತರ ಮಾಡಬೇಕು ಎನ್ನುವ ವಿಚಾರಕ್ಕೆ ಈಗ ತೆರೆ ಬಿದ್ದಿದೆ. ಉತ್ತರ ಕರ್ನಾಟಕದ 7 ಜಿಲ್ಲೆಯ ಜನರಿಗೂ ಇದರಿಂದ ಅನುಕೂಲವಾಗಿದೆ.

ಕರ್ನಾಟಕ ಮಾಹಿತಿ ಆಯೋಗದ ಆಯುಕ್ತೆ ಗೀತಾ ಬಿ.ವಿ.

ಇದರ ಆರಂಭದ ಹಂತವಾಗಿ ಇದೀಗ ಸುವರ್ಣ ಸೌಧದಲ್ಲಿ ರಾಜ್ಯ ಮಟ್ಟದ ಮೊದಲ ಕಚೇರಿ ಆರಂಭವಾಗಿದೆ. ಇನ್ನು ರಾಜ್ಯ ಮಾಹಿತಿ‌ ಆಯೋಗ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂನ್ 22 ರಿಂದ ಆರಂಭಗೊಂಡಿದ್ದು, ಸದ್ಯ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತೆಯಾಗಿ ಗೀತಾ ಬಿ.ವಿ. ಕಾರ್ಯನಿರ್ವಹಿಸುತ್ತಿದ್ದಾರೆ. ಪೀಠದ ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ಅಧ್ಯಕ್ಷರಿಗೆ ಆಯುಕ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳು ಬರಲಿದ್ದು, ಪೀಠದ ವ್ಯಾಪ್ತಿಯಲ್ಲಿ ಒಟ್ಟಾರೆ 4000 ಪ್ರಕರಣಗಳು ಬಾಕಿ ಉಳಿದಿರುವುದಾಗಿ ತಿಳಿಸಿದ್ದಾರೆ. ಸದ್ಯ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಪೀಠ ನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.

ಸುವರ್ಣಸೌಧದ ಎದುರಿನ ಉದ್ಯಾನವನ

ಇನ್ನೂ ವರ್ಷಕ್ಕೊಮ್ಮೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ 30 ದಿನಗಳ ಕಾಲ ಮಾಹಿತಿ ಆಯೋಗದ ಬೆಳಗಾವಿ ಪೀಠದ ಕಾರ್ಯಕಲಾಪಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಪೀಠದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗುತ್ತದೆ.

ಈ ಕಾಯ್ದೆಯ ಬಗ್ಗೆ ಸಮರ್ಪಕ ತಿಳಿವಳಿಕೆ ನೀಡಲು ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು, ಅಧಿವೇಶನ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಲಾಪ ನಡೆಸಲಾಗುವುದು. ಇನ್ನು ಸುವರ್ಣಸೌಧ ಬೆಳಗಾವಿ ನಗರದಿಂದ ದೂರದಲ್ಲಿರುವುದರಿಂದ ಸದ್ಯಕ್ಕೆ ಪ್ರತಿದಿನ 3 ಬಸ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯಿಂದ ಕಲ್ಪಿಸಿದ್ದು, ಕಲಾಪಕ್ಕೆ ಬರಬೇಕಾದವರು ಸಮನ್ಸ್ ಪ್ರತಿಯನ್ನ ತೋರಿಸಿದರೆ ಮಾತ್ರ ಸುವರ್ಣ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತೆ ಗೀತಾ ಬಿ.ವಿ. ಹೇಳಿದ್ದಾರೆ.

ಸುವರ್ಣಸೌಧ

ಈಗಾಗಲೇ ಸುವರ್ಣ ಸೌಧಕ್ಕೆ 1 ಕಚೇರಿ ಸ್ಥಳಾಂತರ ಮಾಡಿದ್ದು , ಇನ್ನು ಹಲವು ಕಚೇರಿಗಳ ಸ್ಥಳಾಂತರಕ್ಕೆ ಬೇಡಿಕೆ ಇದೆ. ಅವುಗಳನ್ನ ಕೂಡ ಸರ್ಕಾರ ಶೀಘ್ರದಲ್ಲಿ ಸ್ಥಳಾಂತರ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸುವರ್ಣಸೌಧದ ಮುಂಭಾಗ

ಕರ್ನಾಟಕ ಮಾಹಿತಿ ಆಯೋಗ ಸುವರ್ಣಸೌಧಕ್ಕೆ ಶಿಪ್ಟ್ ಆಗುವ ಮೊದಲೇ ಬೆಳಗಾವಿ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಸರ್ಕಾರ ಸುವರ್ಣಸೌಧಕ್ಕೆ ಶಿಪ್ಟ್ ಮಾಡಿದ್ದು, ಈ ಕಚೇರಿ ಹೊರತುಪಡಿಸಿ ರಾಜ್ಯಮಟ್ಟದ ಇನ್ನು ಕೆಲವು ಕಚೇರಿಗಳನ್ನ ಶಿಪ್ಟ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮಕೈಗೊಂಡು ಕಚೇರಿ ಸ್ಥಳಾಂತರ ಮಾಡಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗುವ ಕೆಲಸ ಮಾಡಲಿ ಎಂದು ಪ್ರಕಾಶ್( ಸಾರ್ವಜನಿಕರು ) ಅಭಿಪ್ರಾಯಪಟ್ಟಿದ್ದಾರೆ.

‘ಯಡಿಯೂರಪ್ಪರನ್ನ ನಂಬಬೇಡಿ.. ಬಿಟ್ರೇ.. ಬೆಳಗಾವಿಯ ಸುವರ್ಣಸೌಧನೂ ಮಾರಿಬಿಡ್ತಾರೆ’

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada