ಸವದತ್ತಿ ಸಮೀಪ ಬಸ್-ಕಾರು ಮುಖಾಮುಖಿ: ನಾಲ್ವರ ಸಾವು

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಚಚಡಿ ಕ್ರಾಸ್ ಬಳಿ ಕೆಎಸ್​​ಆರ್​ಟಿಸಿ ಬಸ್​ ಡಿಕ್ಕಿ ಮತ್ತು ಕಾರು ಮುಖಾಮುಖಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

  • TV9 Web Team
  • Published On - 16:29 PM, 24 Jan 2021
ಸವದತ್ತಿ ಸಮೀಪ ಬಸ್-ಕಾರು ಮುಖಾಮುಖಿ: ನಾಲ್ವರ ಸಾವು
ಬೆಳಗಾವಿ ಜಿಲ್ಲೆ ಚಚಡಿ ಕ್ರಾಸ್ ಸಮೀಪ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ಕೆಎಸ್​​ಆರ್​ಟಿಸಿ ಬಸ್​ ಡಿಕ್ಕಿ ಮತ್ತು ಕಾರು ಮುಖಾಮುಖಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕ್ರೇನ್ ಮೂಲಕ ಕಾರನ್ನು ಹೊರತಗೆಯುವ ಪ್ರಯತ್ನ ನಡೆಸಲಾಗುತ್ತಿದೆ. ಕಾರು ಯರಗಟ್ಟಿಯಿಂದ ಬೆಳಗಾವಿಯತ್ತ ಬರುತ್ತಿತ್ತು. ಬಸ್ಸು ಬೆಳಗಾವಿಯಿಂದ ಯರಗಟ್ಟಿಗೆ ಹೊರಟಿತ್ತು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ.

ಬೆಳಗಾವಿಯಿಂದ ಬಾಗಲಕೋಟೆಯತ್ತ ತೆರಳುತ್ತಿದ್ದ ಸಚಿವ ಮುರುಗೇಶ್ ನಿರಾಣಿ ಅಪಘಾತ ಸ್ಥಳದಲ್ಲಿ ಕಾರು ನಿಲ್ಲಿಸಿ ಪರಿಸ್ಥಿತಿ ಪರಿಶೀಲಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದರು.

ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು