ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್: ಮತದಾರರನ್ನು ಗಾಳಕ್ಕೆ ಬೀಳಿಸಲು ಟಿಕೆಟ್ ಅಕಾಂಕ್ಷಿಗಳಿಂದ ಭರ್ಜರಿ ಕಾರ್ಯಕ್ರಮಗಳು

ಖಾನಾಪುರ ಕ್ಷೇತ್ರದಲ್ಲಿ ಮಹಿಳಾ ಮತದಾರರ ಓಲೈಕೆಗೆ ಅರಿಶಿನ ಕುಂಕುಮ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್: ಮತದಾರರನ್ನು ಗಾಳಕ್ಕೆ ಬೀಳಿಸಲು ಟಿಕೆಟ್ ಅಕಾಂಕ್ಷಿಗಳಿಂದ ಭರ್ಜರಿ ಕಾರ್ಯಕ್ರಮಗಳು
ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್
TV9kannada Web Team

| Edited By: Ayesha Banu

Nov 24, 2022 | 10:29 AM

ಬೆಳಗಾವಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ 2023(Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನವೇ ತಯಾರಿ ಶುರುವಾಗಿದೆ. ರಾಜಕೀಯ ಪಕ್ಷಗಳು ತಮ್ಮದೇ ಸ್ಟೈಲಿನಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಜನ ಸಂಕಲ್ಪ ಯಾತ್ರೆ, ಪಂಚಯಾತ್ರೆ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ನಡುವೆ ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿಯರಿಬ್ಬರು ವಿನೂತನವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿಯ ನಾಲ್ಕು ಕ್ಷೇತ್ರಗಳಲ್ಲಿ ಈಗಿನಿಂದಲೇ ಗಿಫ್ಟ್ ಪಾಲಿಟಿಕ್ಸ್ ಆರಂಭವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ನಾನಾ ಬಗೆಯ ಗಿಫ್ಟ್ ನೀಡಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ 5 ತಿಂಗಳು ಬಾಕಿ ಇರುವಾಗಲೇ ಮತದಾರರ ಓಲೈಕೆಗೆ ಕಸರತ್ತು ಆರಂಭವಾಗಿದೆ. ಯುವ ಸಮೂಹ, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಲಂಚ್ ಬಾಕ್ಸ್, ಸೀರೆ, ಕನ್ನಡಕ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದೆ.

ಖಾನಾಪುರ ಕ್ಷೇತ್ರದಲ್ಲಿ ಮಹಿಳಾ ಮತದಾರರ ಓಲೈಕೆಗೆ ಅರಿಶಿನ ಕುಂಕುಮ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್‌ ಮಹಿಳೆಯರಿಗೆ ಉಚಿತ ಲಂಚ್ ಬಾಕ್ಸ್ ವಿತರಣೆ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿ ಎ.ದಿಲೀಪಕುಮಾರ್‌ ಮಹಿಳೆಯರಿಗೆ ಸೀರೆ ಗಿಫ್ಟ್ ಮಾಡುತ್ತಿದ್ದಾರೆ. ಅರಿಶಿನ ಕುಂಕುಮ ಕಾರ್ಯಕ್ರಮ ಏರ್ಪಡಿಸಿ ಸೀರೆ ಗಿಫ್ಟ್ ನೀಡುತ್ತಿದ್ದಾರೆ. ಮತ್ತೋರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸೋನಾಲಿ ಸೋನಬರ್ತ್, ಕಣ್ಣಿನ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಉಚಿತ ಕನ್ನಡಕ ಗಿಫ್ಟ್ ನೀಡಿದ್ದಾರೆ. ಮತ್ತೊಂದೆಡೆ ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದ ಶಾಸಕರು ಉಚಿತ ಪುಸ್ತಕ ವಿತರಿಸಿದ್ದಾರೆ. ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ಪಿಯುಸಿ ವಿದ್ಯಾರ್ಥಿಗಳಿಗೆ ನೆರವಾಗಲು ಉಚಿತ ಟೆಕ್ಸ್ಟ್ ಬುಕ್ ಹಂಚುತ್ತಿದ್ದಾರೆ.

ಇದನ್ನೂ ಓದಿ: ನೀ ಬೆರಕಿ ಇದೀಯಾ, ಬೇಲೂರು ಪಾಲಿಟಿಕ್ಸ್ ನನಗೆ ಗೊತ್ತು: ವೇದಿಕೆಯಲ್ಲೇ ಶಾಸಕ ಲಿಂಗೇಶ್​ ಕಾಲೆಳೆದ ಸಿಎಂ ಬೊಮ್ಮಾಯಿ

ಗಿಫ್ಟ್ ಪಾಲಿಟಿಕ್ಸ್​ಗೆ ಸಂಜಯ್ ಪಾಟೀಲ್ ವ್ಯಂಗ್ಯ

ಮತ್ತೊಂದೆಡೆ ಅರಿಶಿನ ಕುಂಕುಮ ಆಯೋಜಿಸಿ ಗಿಫ್ಟ್ ಹಂಚಿಕೆ ಆರೋಪ ವಿಚಾರಕ್ಕೆ ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ್ ವ್ಯಂಗ್ಯವಾಡಿದ್ದಾರೆ. ನಾನು ಗಂಡಸನಿದ್ದೀನಿ ಅರಿಶಿನ ಕುಂಕುಮ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಆಯೋಜಿಸುತ್ತಿರುವ ಅರಿಶಿನ ಕುಂಕುಮ ಕಾರ್ಯಕ್ರಮಕ್ಕೆ ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಗ್ರಾಮೀಣ ಕ್ಷೇತ್ರದಲ್ಲಿ ಟಿಫನ್ ಬಾಕ್ಸ್ ಹಂಚಿಕೆ ಗಮನಕ್ಕೆ ಇದೆ. ಬಿಜೆಪಿ ಕಾರ್ಯಕರ್ತರು ಟಿಫನ್ ಬಾಕ್ಸ್ ತೆಗೆದುಕೊಳ್ಳಲ್ಲ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಆಗಬೇಕು. ಮತವನ್ನು ಯಾರೊಬ್ಬರು ಮಾರಾಟ ಮಾಡಬಾರದು ಎಂದರು. ಇನ್ನು ಬಿಜೆಪಿ ಶಾಸಕರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಂಜಯ್ ಪಾಟೀಲ್, ನಾವೇನೂ ಸರಾಯಿ ಹಂಚುತ್ತಿಲ್ಲವಲ್ಲ, ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ ಮಾಡುತ್ತೀದ್ದೇವೆ. ಬಡವರ ಮಕ್ಕಳ ಕಲಿಕೆಗೆ ಪುಸ್ತಕ ಅನುಕೂಲ ಆಗಿದೆ. ಟಿಫಿನ್ ಬಾಕ್ಸ್ ಬಗ್ಗೆ ನಾನೇನು ಟೀಕೆ ಮಾಡಲ್ಲ. ಮತ ಹಾಕಬೇಕು ಎಂದು ಷರತ್ತು ವಿಧಿಸುವ ಪ್ರಕ್ರಿಯೆ ನಡೆದಿದೆ. ದೇವಸ್ಥಾನಕ್ಕೆ 50 ಲಕ್ಷ ಕೊಡ್ತೇವಿ ಬೇರೆ ಪಕ್ಷದ ಟೆಬಲ್ ಹಚ್ಚಬೇಡಿ ಈ ರೀತಿಯ ಕೆಲಸ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದಿದೆ. ಯಾರು ಅಭಿವೃದ್ಧಿ ಮಾಡುತ್ತಾರೆ ಅವರಿಗೆ ಆಮಿಷ ಒಡ್ಡುವ ಅವಶ್ಯಕತೆ ಇಲ್ಲ ಎಂದರು.

ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada