ಚಿಕ್ಕೋಡಿ, ಅ.12: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತೆ ಕ್ಯಾತೆ ತೆಗೆದಿದೆ (Karnataka Maharashtra Border Issue). ನಾಡದ್ರೋಹಿ MES ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ವಿವಾದ ತಜ್ಞರ ಸಮಿತಿ ಸಭೆ ನಡೆದಿದೆ. ನಿನ್ನೆ (ಅ.11) ಮುಂಬೈನಲ್ಲಿ MES ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ (DhairyaSheel Mane) ಸಭೆ ನಡೆಸಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ ವಿಚಾರವಾಗಿ ಚರ್ಚೆ ನಡೆದಿದ್ದು ಗಡಿ ಭಾಗದಲ್ಲಿ ಭಾಷಾ ವೈಷಮ್ಯದ ಕಿಡಿ ಹೊತ್ತಿಸಲು ಎಂಇಎಸ್, ಮಹಾರಾಷ್ಟ್ರ ಸರ್ಕಾರ ಕುತಂತ್ರ ಮಾಡುತ್ತಿದೆ.
ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ ಲಾಭ ಪಡೆಯಲು ನಾಡದ್ರೋಹಿ MES ಕಚೇರಿಯ ಪತ್ರ ಅವಶ್ಯಕ. ಯೋಜನೆಯ ಲಾಭ ಪಡೆಯಲು ಮರಾಠಿ ಭಾಷಿಕ ಎಂದು ನಮೂದಿಸಬೇಕು. ಗಡಿ ಪ್ರದೇಶದ ಮರಾಠಿ ಭಾಷಿಕರಿಗಾಗಿ ಗಡಿಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆಗೂ ನಿರ್ಧಾರ ಮಾಡಲಾಗಿದೆ. ಪ್ರಾದೇಶಿಕ ಆಯುಕ್ತ ಶ್ರೇಣಿಯ ಅಧಿಕಾರಿ ನೇಮಿಸಿ ಕಚೇರಿ ಸ್ಥಾಪನೆಗೆ ನಿರ್ಧರಿಸಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಚಂದಗಡ್‌ನಲ್ಲಿ ಕಚೇರಿ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಈ ಮೂಲಕ ಗಡಿ ಭಾಗದಲ್ಲಿ ಭಾಷಾ ವೈಷಮ್ಯದ ಕಿಡಿ ಹೊತ್ತಿಸಲು ಎಂಇಎಸ್, ಮಹಾರಾಷ್ಟ್ರ ಸರ್ಕಾರ ಕುತಂತ್ರ ಮಾಡುತ್ತಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಗೋವಾ ರಾಜ್ಯದಿಂದ ಗಡಿ ಕ್ಯಾತೆ; ಕಾರವಾರದಲ್ಲಿ ಕೊಂಕಣಿ ಭಾಷೆಗೆ ಆದ್ಯತೆ ಕೊಡಬೇಕೆಂದು ಪ್ರಧಾನಿಗೆ ಪತ್ರ
ಕರ್ನಾಟಕದ 865 ಹಳ್ಳಿಗಳ ಮರಾಠಿ ಭಾಷಿಕರಿಗಾಗಿ ಮಹಾತ್ಮ ಪುಲೆ ಜನಾರೋಗ್ಯ ಯೋಜನೆಯಡಿ ಐದು ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡಲಾಗುತ್ತಿದೆ. ಮಹಾರಾಷ್ಟ್ರ ಅಷ್ಟೇ ಅಲ್ಲ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ಈ ಯೋಜನೆಯಡಿ ಸಿಗಲಿದೆ. ಯೋಜನೆ ಲಾಭಕ್ಕಾಗಿ ತಾವು ಮರಾಠಿ ಭಾಷಿಕರು ಅಂತಾ ಪ್ರಮಾಣ ಪತ್ರ ನೀಡುವುದು ಅತ್ಯಗತ್ಯ. ಈ ಪ್ರಮಾಣ ಪತ್ರ ಬಳಸಿ 865 ಹಳ್ಳಿಗಳಲ್ಲಿ ಅತಿಹೆಚ್ಚು ಮರಾಠಿ ಭಾಷಿಕರಿದ್ದಾರೆಂದು ಬಿಂಬಿಸಲು ಮಹಾರಾಷ್ಟ್ರ ಪ್ಲ್ಯಾನ್ ಮಾಡಿದೆ. ಇದೇ ದಾಖಲೆಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಕುತಂತ್ರ ಮಾಡುತ್ತಿದೆ.
ಕರ್ನಾಟಕದ 865 ಹಳ್ಳಿಗಳಲ್ಲಿ ಮರಾಠಿ ಭಾಷಿಕರಿದ್ದಾರೆಂದು ಸುಪ್ರೀಂಕೋರ್ಟ್‌ಗೆ ದಾಖಲೆ ಸಲ್ಲಿಸಲು ಮಹಾರಾಷ್ಟ್ರ ಕುತಂತ್ರ ಮಾಡುತ್ತಿದೆ. ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಮೌನವಾಗಿದೆ. ಕರ್ನಾಟಕ ಸರ್ಕಾರದ ನಡೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:48 am, Thu, 12 October 23