ಬೆಳಗಾವಿಯಲ್ಲಿ ಗ್ರಾಮೀಣ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್

ಮರಾಠಿ ಶಾಲೆಗಳನ್ನ ಕಡೆಗಣಿಸಲಾಗುತ್ತಿದ್ದಾರೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್​. ಸುರೇಶ್​ಕುಮಾರ್ ಬೆಳಗಾವಿ ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಿದ್ದಾರೆ.

  • TV9 Web Team
  • Published On - 18:18 PM, 8 Feb 2021
ಬೆಳಗಾವಿಯಲ್ಲಿ ಗ್ರಾಮೀಣ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್
ಸಚಿವ ಎಸ್. ಸುರೇಶ್ ಕುಮಾರ್

ಬೆಳಗಾವಿ: ಮರಾಠಿ ಶಾಲೆಗಳನ್ನ ಕಡೆಗಣಿಸಲಾಗುತ್ತಿದ್ದಾರೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್ ಇಂದು ಮರಾಠಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಶಾಲೆಗಳನ್ನು ಪರಿಶೀಲಿಸುವುದರ ಮೂಲಕ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಖಾನಾಪುರ ತಾಲೂಕಿನ ಗ್ರಾಮಗಳಾದ ಜಾಂಬೋಟಿ, ನಂದಗಡ, ಮಂಗೇನಕೊಪ್ಪ ಗ್ರಾಮದಲ್ಲಿರುವ ಶಾಲೆಗಳಿಗೆ ಎಸ್​. ಸುರೇಶ್​ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶಾಲಾ ಶಿಕ್ಷಕರು, ಮಕ್ಕಳ ಸಮಸ್ಯೆಯ ಕುರಿತು ವಿಚಾರಿಸಿದ್ದಾರೆ.

s suresh kumar

ತರುವಾಯ ಮರಾಠಿ ಶಾಲೆಗಳಲ್ಲಿ ನಾಡಗೀತೆಗಳನ್ನು ಹಾಡಿಸುವುದಿಲ್ಲ ಎಂಬ ಕನ್ನಡಪರ ಸಂಘಟನೆಗಳ ಆರೋಪಕ್ಕೆ ಎದುರಾಗಿ ವಿದ್ಯಾರ್ಥಿಗಳಲ್ಲಿ ನಾಡಗೀತೆ ಹಾಡಿಸಿ, ಅವರೊಡನೆ ಸುರೇಶ್ ಕುಮಾರ್​ ಕೂಡಾ ನಾಡಗೀತೆಯನ್ನು ಹಾಡಿದ್ದಾರೆ.

ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇನೆ – ಉದ್ಧಟತನ ಮಾತುಗಳನ್ನು ಉದುರಿಸಿದ ಉದ್ಧವ ಠಾಕ್ರೆ