ಬೆಳಗಾವಿ: ಯೋಧರ ಕುಟುಂಬಸ್ಥರ ಮೇಲೆ ಪಕ್ಕದ ಮನೆಯವರು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಸೋಮನಟ್ಟಿ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಸಪ್ಪ ನಂದ್ಯಾಗೋಳ ಮತ್ತು ಬಾಳಪ್ಪ ಯದ್ದಲಗುಡ್ಡರ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡದಿದೆ. ಗಲಾಟೆ ವೇಳೆ ಬಾಳಪ್ಪ ಯದ್ದಲಗುಡ್ಡರ ಕುಟುಂಬಸ್ಥರು ಬಸಪ್ಪ ನಂದ್ಯಾಗೋಳರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ ನಂದ್ಯಾಗೋಳರ ಮಗ
ಬಸಪ್ಪ ನಂದ್ಯಾಗೋಳರ ಇಬ್ಬರು ಮಕ್ಕಳು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನ ಮೊಮ್ಮಕ್ಕಳನ್ನು ಬೈದಿದ್ದನ್ನ ಪ್ರಶ್ನಿಸಿದ್ದಕ್ಕೆ ಬಾಳಪ್ಪ ಯದ್ದಲಗುಡ್ಡರ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಯೋಧರ ತಂದೆ, ತಾಯಿ ಮತ್ತು ತಮ್ಮನ ಮೇಲೆ ಹಲ್ಲೆ ನಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಸಂಬಂಧ ಬಾಳಪ್ಪ ಯದ್ದಲಗುಡ್ಡ ಸೇರಿದಂತೆ 9 ಜನರ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ ನಂದ್ಯಾಗೋಳರ ಮಗ
ಇದನ್ನೂ ಓದಿ: ಪ್ರೀತಿ ವಿಚಾರದಲ್ಲಿ ಮನೆಯವರ ತೀವ್ರ ವಿರೋಧ; ಹುಣಸೆಗಟ್ಟೆಪಾಳ್ಯದಲ್ಲಿ ಯುವತಿ ನೇಣಿಗೆ ಶರಣು