ಅಳಿಯ ಅಂಬಿರಾವ್ ಪಾಟೀಲ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನೂ ರಮೇಶ್​ ಕೇಳಲ್ಲ: ಸತೀಶ್​ ಜಾರಕಿಹೊಳಿ

Ramesh Jarkiholi CD Controversy: ವಿಡಿಯೋ ಬಗ್ಗೆ ಮಾತನಾಡಿರುವ ಸತೀಶ್​ ಜಾರಕಿಹೊಳಿ, ಆ ವಿಡಿಯೋ ಓರಿಜನಲ್ ಅಥವಾ ಫೇಕ್ ಎಂಬ ಬಗ್ಗೆ ಪೊಲೀಸರೇ ಸರ್ಟಿಫಿಕೇಟ್ ಕೊಡಬೇಕು. ಪೊಲೀಸರು ವಿಡಿಯೋದಲ್ಲಿದ್ದ ಯುವತಿಗೆ ನೋಟಿಸ್ ಕೊಟ್ಟು ಕರೆಯಿಸಿಕೊಳ್ಳಬೇಕು. ಆ ಯುವತಿಯ ಹೇಳಿಕೆಯೂ ಬಹಳ ಮುಖ್ಯ ಎಂದಿದ್ದಾರೆ.

  • TV9 Web Team
  • Published On - 16:27 PM, 4 Mar 2021
ಅಳಿಯ ಅಂಬಿರಾವ್ ಪಾಟೀಲ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನೂ ರಮೇಶ್​ ಕೇಳಲ್ಲ: ಸತೀಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ, ಸತೀಶ್​ ಜಾರಕಿಹೊಳಿ

ಬೆಳಗಾವಿ: ರಾಸಲೀಲೆ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್​ನಲ್ಲಿ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ‌ ಸಹೋದರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ನಾವು ರಮೇಶ್ ಜಾರಕಿಹೊಳಿ‌ಗೆ ಏನೂ ಹೇಳೋಕೆ ಹೋಗಲ್ಲ. ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ ಎನ್ನುವುದು ನಮಗೆ ಗೊತ್ತಿದೆ. ಜಾರಕಿಹೊಳಿ‌ ಕುಟುಂಬ ಒಂದೇ ಅಂತಾ ಹೇಳಕ್ಕಾಗಲ್ಲ. ಗೋಕಾಕ್‌ದಲ್ಲಿ ಏನು ಪರಿಸ್ಥಿತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾತು ಕೇಳೋದಾಗಿದ್ರೆ ಹೇಳ್ತಿದ್ವಿ. ಆದರೆ, ಅವರು ಯಾರ ಮಾತೂ ಕೇಳಲ್ಲ ಎಂದು ತಿಳಿಸಿದ್ದಾರೆ.

ಅವರು ಇಂಡಿಪೆಂಡೆಂಟ್ ಇದ್ದಾರೆ, ಇಂಡಿಪೆಂಡೆಂಟ್ ಆಗಿಯೇ ನಡೆಸುತ್ತಾರೆ. ನಮ್ಮ ಪಕ್ಷ ಕೂಡ ಇಂಡಿಪೆಂಡೆಂಟ್, ಹೀಗಾಗಿ ನಮ್ಮ ವಿಚಾರ ಕೂಡ ಇಂಡಿಪೆಂಡೆಂಟ್. ಸದ್ಯಕ್ಕೆ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಬಿಟ್ಟು ಬೇರೆಯವರ ಮಾತು ಕೇಳೋ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆ ಮೂಲಕ ರಮೇಶ್ ಅಳಿಯ ಅಂಬಿರಾವ್ ಪಾಟೀಲ್ ಅವರ ಹೆಸರನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ.

ವಿಡಿಯೋ ಬಗ್ಗೆ ಮಾತನಾಡಿರುವ ಸತೀಶ್​ ಜಾರಕಿಹೊಳಿ, ಆ ವಿಡಿಯೋ ಓರಿಜನಲ್ ಅಥವಾ ಫೇಕ್ ಎಂಬ ಬಗ್ಗೆ ಪೊಲೀಸರೇ ಸರ್ಟಿಫಿಕೇಟ್ ಕೊಡಬೇಕು. ಪೊಲೀಸರು ವಿಡಿಯೋದಲ್ಲಿದ್ದ ಯುವತಿಗೆ ನೋಟಿಸ್ ಕೊಟ್ಟು ಕರೆಯಿಸಿಕೊಳ್ಳಬೇಕು. ಆ ಯುವತಿಯ ಹೇಳಿಕೆಯೂ ಬಹಳ ಮುಖ್ಯ. ಯಾರೇ ದೂರು ಕೊಟ್ಟರೂ ಯುವತಿ ಮುಂದೆ ಬಂದು ಹೇಳಿಕೆ ಕೊಟ್ಟಾಗ ಅದಕ್ಕೆ ಮಹತ್ವ. ಹೀಗಾಗಿ ಪೊಲೀಸರು ತನಿಖೆ ಮಾಡುವುದೊಂದೇ ಈಗ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:
ರಮೇಶ್​ ಜಾರಕಿಹೊಳಿ ಬೆಳವಣಿಗೆ ಸಹಿಸಲಾಗದೆ ಬಿಜೆಪಿಯವರೇ ಬ್ರೇಕ್​ ಹಾಕಿರಬಹುದು: ಸತೀಶ್​ ಜಾರಕಿಹೊಳಿ

ಈ ಘಟನೆಯಿಂದ ರಮೇಶ್ ಜಾರಕಿಹೊಳಿ‌ಗೆ ಹೊಡೆತ ಬಿದ್ದಿದೆ, ಸುಧಾರಿಸಿಕೊಳ್ಳಲು ಸಮಯ ಬೇಕು: ಸಹೋದರ ಸತೀಶ್ ಜಾರಕಿಹೊಳಿ‌