ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳ ಶವ ಘಟಪ್ರಭಾ ನದಿಯಲ್ಲಿ ಪತ್ತೆ

ಎರಡು ದಿನಗಳಿಂದ ಕಾಣೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರಿನಲ್ಲಿ ನಡೆದಿದೆ.

  • TV9 Web Team
  • Published On - 15:40 PM, 14 Feb 2021
ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳ ಶವ ಘಟಪ್ರಭಾ ನದಿಯಲ್ಲಿ ಪತ್ತೆ
ತಾಯಿ ಸಾವಿತ್ರಿ ಬನಾಜ ಮತ್ತು ಇಬ್ಬರು ಮಕ್ಕಳು

ಬೆಳಗಾವಿ: ಎರಡು ದಿನಗಳಿಂದ ಕಾಣೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರಿನಲ್ಲಿ ನಡೆದಿದೆ. ಇಂದು (ಫೆಬ್ರವರಿ 14) ಘಟಪ್ರಭಾ ನದಿಯಲ್ಲಿ ಶವಗಳು ಪತ್ತೆಯಾಗಿದ್ದು, ಗೋಕಾಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದುರದುಂಡಿ ಗ್ರಾಮದ ಸಾವಿತ್ರಿ ಬನಾಜ (33), ಇಬ್ಬರು ಮಕ್ಕಳಾದ ಪೂಜಾ (4) ಮತ್ತು ಸಹನಾ (2) ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು. ಸಾವಿತ್ರಿ ಬನಾಜ ಸೀರೆಯಲ್ಲಿ ತನ್ನ ಮಕ್ಕಳನ್ನು ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವಗಳು ಪತ್ತೆಯಾಗಿವೆ. ಘಟಪ್ರಭಾ ನದಿಯ ಲೋಳಸೂರ ಸೇತುವೆಯ ಬಳಿ ಮೃತ ದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: Hyderabad gang rape: ಯುವತಿಯೇ ಅತ್ಯಾಚಾರದ ಸುಳ್ಳು ಕತೆ ಸೃಷ್ಟಿಸಿದ್ದಾಳೆ ಎಂದ ರಾಚಕೊಂಡ ಪೊಲೀಸ್ ಕಮೀಷನರ್..!