ಕಾರ್ಯಕ್ರಮಕ್ಕೆ ಲೈಟಿಂಗ್ಸ್ ಅಳವಡಿಕೆ ವೇಳೆ ವಿದ್ಯುತ್ ತಂತಿ ತಗುಲಿ ಆನೇಕಲ್​ನಲ್ಲಿ ನಾಲ್ವರ ಸಾವು

ಮೃತರು ನಾಳೆ ಗೃಹಪ್ರವೇಶವಿದ್ದ ಅಪಾರ್ಟ್ಮೆಂಟ್​ಗೆ ಲೈಟಿಂಗ್ಸ್ ಹಾಕುತ್ತಿದ್ದರು. ಲೈಟಿಂಗ್ಸ್ ಹಾಕುವಾಗ ಕರೆಂಟ್ ಕಂಬದಿಂದ ಕರೆಂಟ್ ಲೈನ್ ಎಳೆದುಕೊಂಡು ಟೆಸ್ಟ್ ಮಾಡುವಾಗ ವಿದ್ಯುತ್ ಪ್ರವಹಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  • TV9 Web Team
  • Published On - 16:38 PM, 7 Apr 2021
ಕಾರ್ಯಕ್ರಮಕ್ಕೆ ಲೈಟಿಂಗ್ಸ್ ಅಳವಡಿಕೆ ವೇಳೆ ವಿದ್ಯುತ್ ತಂತಿ ತಗುಲಿ ಆನೇಕಲ್​ನಲ್ಲಿ ನಾಲ್ವರ ಸಾವು
ಗೃಹಪ್ರವೇಶಕ್ಕೆ ಲೈಟಿಂಗ್ಸ್ ಹಾಕುತ್ತಿದ್ದ ವೇಳೆಗೆ ದುರ್ಘಟನೆ ನಡೆದಿದೆ

ಆನೇಕಲ್: ವಿದ್ಯುತ್ ತಂತಿ ತಗುಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಳಬೆಲೆಯಲ್ಲಿ ಸಂಭವಿಸಿದೆ. ಕಾರ್ಯಕ್ರಮಕ್ಕೆ ಲೈಟಿಂಗ್ಸ್ ಅಳವಡಿಕೆ ವೇಳೆ ಈ ದುರ್ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸಿ ಆಕಾಶ್(30), ಮಹದೇವ್(35), ವಿಷಕಂಠ(35), ವಿಜಯ್ ಸಿಂಗ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ನಾಳೆ ಗೃಹಪ್ರವೇಶವಿದ್ದ ಅಪಾರ್ಟ್ಮೆಂಟ್​ಗೆ ಲೈಟಿಂಗ್ಸ್ ಹಾಕುತ್ತಿದ್ದರು. ಲೈಟಿಂಗ್ಸ್ ಹಾಕುವಾಗ ಕರೆಂಟ್ ಕಂಬದಿಂದ ಕರೆಂಟ್ ಲೈನ್ ಎಳೆದುಕೊಂಡು ಟೆಸ್ಟ್ ಮಾಡುವಾಗ ವಿದ್ಯುತ್ ಪ್ರವಹಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್, ಬೆಸ್ಕಾಂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ಆರೋಪಿ ಬಂಧನ
ಬೆಂಗಳೂರು: ಕಳ್ಳತನದ ಆರೋಪಿಯಾದ ಪ್ರಶಾಂತ್ ಎಂಬಾತನನ್ನು ವಿಜಯನಗರ ಉಪವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4.8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 2 ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ.

ಮೊಬೈಲ್​ ಕಳ್ಳ ಸೆರೆ
ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದವನನ್ನು ಬೆಂಗಳೂರಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿ ಮಹಮದ್ ಸೂಫಿಯಾನ್ ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ನಡೆಯುವಾಗ ಮೊಬೈಲ್​ನಲ್ಲಿ ಮಾತಾಡುತಿದ್ದ ವೇಳೆ ಮೊಬೈಲ್​ನ ಕಿತ್ತು ಪರಾರಿಯಾಗುತ್ತಿದ್ದ ಆರೋಪಿ ಡಿಯೋ ಸ್ಕೂಟರ್ ಸಹಾಯದಿಂದ ಕಳ್ಳತನ ಮಾಡುತ್ತಿದ್ದನಂತೆ. ಬಂಧಿತನಿಂದ ಒಂದು ಬೈಕ್​ ಮತ್ತು 5 ಮೊಬೈಲ್​ ಫೋನ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ಚಾಮರಾಜನಗರ: ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಆನೆ ಸಾವು

ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ವೃದ್ಧ ಸಾವು
(4 people dead after electric lines short circuit during light arrangement in Anekal )