ಈ ಸರ್ಕಾರಿ ಆಸ್ಪತ್ರೆಯಲ್ಲಿಲ್ಲ ಸೂಕ್ತ ವ್ಯವಸ್ಥೆ; ನೆಲದ ಮೇಲೆ ಮಲಗಿರುವ ಅನಾರೋಗ್ಯ ಪೀಡಿತ ಕಂದಮ್ಮ

ಅದು ಹೇಳಿಕೊಳ್ಳೋಕೆ ಮಾತ್ರ ತಾಲ್ಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ. ದಿನನಿತ್ಯ ನಾನಾ ಭಾಗಗಳಿಂದ ಅನಾರೋಗ್ಯಕ್ಕೆ ತುತ್ತಾದ ನೂರಾರು ಮಂದಿ ರೋಗಿಗಳು ಚಿಕಿತ್ಸೆಗಾಗಿ ಬರ್ತಾರೆ. ಆದ್ರೆ ಇಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸಾ ಸೌಲಭ್ಯ ಸಿಗದೆ ರೋಗಿಗಳು ಆಸ್ಪತ್ರೆಯ ನೆಲದ ಮೇಲೆಯೇ ಮಲಗುವ ದುಸ್ಥಿತಿ ಎದುರಾಗಿದೆ.

ಈ ಸರ್ಕಾರಿ ಆಸ್ಪತ್ರೆಯಲ್ಲಿಲ್ಲ ಸೂಕ್ತ ವ್ಯವಸ್ಥೆ; ನೆಲದ ಮೇಲೆ ಮಲಗಿರುವ ಅನಾರೋಗ್ಯ ಪೀಡಿತ ಕಂದಮ್ಮ
ಆನೇಕಲ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ
Follow us
| Updated By: ಆಯೇಷಾ ಬಾನು

Updated on: Jun 17, 2024 | 8:48 AM

ಆನೇಕಲ್, ಜೂನ್.17: ಬೆಂಗಳೂರು ಹೊರವಲಯದ ಆನೇಕಲ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಉಚಿತವಾಗಿ ಒಳ್ಳೆಯ ಚಿಕಿತ್ಸೆ ಲಭಿಸುತ್ತದೆ ಅಂತ ಗ್ರಾಮೀಣ ಭಾಗದ ಬಡ ಜನರು ಸರ್ಕಾರಿ ಆಸ್ಪತ್ರೆಗೆ ಬರ್ತಾರೆ. ಆದ್ರೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ರಕ್ತ ಪರೀಕ್ಷೆಗೆಂದು ಬರುವ ಗರ್ಭಿಣಿ ಸ್ತ್ರೀಯರು, ವೃದ್ದರು, ಅನಾರೋಗ್ಯಕ್ಕೆ ತುತ್ತಾದ ಜನರು ಗಂಟೆ ಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳ ರಕ್ತದ ಮಾದರಿ ಕಲೆಕ್ಟ್ ಮಾಡುವ ಸಿಬ್ಬಂದಿ ನಾಲ್ಕೈದು ಗಂಟೆಗಳು ಕಳೆದ್ರೂ ರೋಗಿಗಳಿಗೆ ರಕ್ತ ಪರೀಕ್ಷೆಯ ರಿಪೋರ್ಟ್ ನೀಡುತ್ತಿಲ್ಲ.

ಇದರಿಂದಾಗಿ ಸೂಕ್ತ ಸಮಯಕ್ಕೆ ಬ್ಲಡ್ ರಿಪೋರ್ಟ್ ಸಿಗದೆ ಬಡ ಕುಟುಂಬದ ಪುಟ್ಟ ಬಾಲಕ ನೆಲದ ಮೇಲೆ ಸುಸ್ತಾಗಿ ಮಲಗಿರುವ ಅಮಾನವೀಯ ದೃಶ್ಯ ಕಂಡು ಬಂದಿದೆ. ತೀರಾ ಸುಸ್ತಾಗಿ ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಕನಿಷ್ಟ ಬೆಡ್ ವ್ಯವಸ್ಥೆಯನ್ನು ಸಹ ಮಾಡದೆ ಬಾಲಕ ನೆಲದ ಮೇಲೆಯೇ ಮಲಗಿದ್ರೆ, ವೃದ್ದರು, ರೋಗಿಗಳು ಎಲ್ಲೆಂದರಲ್ಲಿ ಗಂಟೆ ಗಟ್ಟಲೇ ಕುಳಿತಲ್ಲೇ ಕುಳಿತು ಸಮಸ್ಯೆ ಎದುರಿಸುವಂತಾಗಿದೆ.

ಇದನ್ನೂ ಓದಿ: ಟ್ರಾಫಿಕ್​​ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್; ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ

ಇನ್ನೂ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ಹತ್ತಾರು ಊರುಗಳಿಂದ ನೂರಾರು ಮಂದಿ ರೋಗಿಗಳು ಬರ್ತಾರೆ. ಇನ್ನೂ ರಕ್ತ ಪರೀಕ್ಷೆ, ಡಯಾಲಿಸಿಸ್ ಮಾಡಿಸಲು ಬಂದ ರೋಗಿಗಳು ದಿನವಿಡೀ ಕಾಯುವಂತ ದುಸ್ಥಿತಿ ನಿರ್ಮಾಣವಾಗಿದೆ. ಕಫ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನೂರು ರೂಪಾಯಿ ಫೀಜ್ ಕಟ್ಟಿಸಿಕೊಂಡು ಮೂರು ದಿನವಾದ್ರು ರಿಪೋರ್ಟ್ ನೀಡೋದಿಲ್ಲ. ಜೊತೆಗೆ ಕಫ ಪರೀಕ್ಷೆ, ರಕ್ತ ಪರೀಕ್ಷೆ ಮಾಡುವ ಆಸ್ಪತ್ರೆ ಸಿಬ್ಬಂದಿ ಐವತ್ತು ರೂಪಾರು ಹಣವನ್ನ ಪಡೆಯುತ್ತಾರೆ ಎನ್ನುವಂತ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ತುತ್ತಾದ ರೋಗಿಗಳು ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಗಂಟೆ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಯಿಂದ ಹೈರಾಣಾದ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಆನೇಕಲ್ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯವನ್ನ ಯಾರು ಹೇಳೋರು ಕೇಳೋರು ಇಲ್ಲದಂತಾಗಿದ್ದು, ದಿನನಿತ್ಯ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸೃಷ್ಟಿಯಾಗಿರುವ ಅವ್ಯವಸ್ಥೆಗೆ ಬ್ರೇಕ್ ಹಾಕುವಂತ ಕೆಲಸ ಮಾಡ್ತಾರ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್