ಚಂಪಾಷಷ್ಠಿ: ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರ ಮಹಾಪೂರ

ಚಂಪಾಷಷ್ಠಿ ಪ್ರಯುಕ್ತ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದ ವಿಶೇಷ ಪೂಜೆಗೆ ಭಕ್ತ ಸಾಗರವೇ ಹರಿದು ಬಂದಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸಪಟ್ಟರು.

  • Publish Date - 5:08 pm, Sun, 20 December 20 Edited By: Ghanashyam D M | ಡಿ.ಎಂ.ಘನಶ್ಯಾಮ
ಚಂಪಾಷಷ್ಠಿ: ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರ ಮಹಾಪೂರ
ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಟಿ ಪೂಜೆ.

ದೊಡ್ಡಬಳ್ಳಾಪುರ: ಚಂಪಾಷಷ್ಠಿ ಪ್ರಯುಕ್ತ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದ ವಿಶೇಷ ಪೂಜೆಗೆ ಭಕ್ತ ಸಾಗರವೇ ಹರಿದು ಬಂದಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸಪಟ್ಟರು.

ಷಷ್ಠಿ ಹಿನ್ನೆಲೆಯಲ್ಲಿ ಇಂದು ಬಹಳಷ್ಟು ಕಡೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ. ಆದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಇದನ್ನು ನೋಡಲು ಕೊರೊನಾ ಭೀತಿ ಮರೆತು ಭಕ್ತರು ಆಗಮಿಸಿದ್ದಾರೆ. ಸಾಮಾಜಿಕ ಅಂತರ ಬಗ್ಗೆ ಲಕ್ಷ ವಹಿಸದೇ ದೇವರ ದರ್ಶನದಲ್ಲಿ ನಿರತರಾದ ಜನರ ಸರತಿ ಸಾಲು ಕಿಲೋ ಮೀಟರ್​ಗಟ್ಟಲೇ ಇದೆ.

ದೀಪಾವಳಿ ವೇಳೆ ಗೂಬೆ ಪೂಜೆ: ಲಕ್ಷ್ಮೀ ವಾಹನ ಎಂದು ತಿಳಿದಿದ್ದೂ ಕೊಲ್ತಾರೆ.. ಏಕೆ ಇಂತಹ ದುಷ್ಕೃತ್ಯ?