ಅಭಿಮಾನಿಗಳ ಒತ್ತಾಯದ ಮೇರೆಗೆ.. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜಬರ್​ದಸ್ತ್​ ಡ್ಯಾನ್ಸ್​!

Vijayanand Kashappanavar: ಸತತ ಪಾದಯಾತ್ರೆಯಿಂದ ದಣಿವಾದ ಬೆನ್ನಲ್ಲೇ ಕೊಂಚ ರಿಲಾಕ್ಸ್​ ಆಗಲು ಸಮುದಾಯದವರು ಇಂದು ಸಾಯಂಕಾಲ ಕಲ್ಯಾಣ ಮಂಟಪದಲ್ಲಿ ಡ್ಯಾನ್ಸ್​ ಮಾಡಿದರು. ಅದರಲ್ಲೂ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ಸ್ಟೆಪ್ಸ್ ಅಂತೂ ಸೆಂಟರ್​ ಆಫ್​ ಅಟ್ರಾಕ್ಷನ್​!

  • TV9 Web Team
  • Published On - 22:37 PM, 14 Feb 2021
ಅಭಿಮಾನಿಗಳ ಒತ್ತಾಯದ ಮೇರೆಗೆ.. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜಬರ್​ದಸ್ತ್​ ಡ್ಯಾನ್ಸ್​!
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜಬರ್​ದಸ್ತ್​ ಡ್ಯಾನ್ಸ್​!

ನೆಲಮಂಗಲ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಈ ನಡುವೆ, ಸಮುದಾಯಕ್ಕೆ ಸೇರಿದ ರಾಜಕೀಯ ಮುಖಂಡರು ಹಾಗೂ ಇತರೆ ನಾಯಕರ ಮಧ್ಯೆ ಉದ್ಭವಿಸಿರುವ ವಾಕ್ಸಮರ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಮತ್ತು ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಮಧ್ಯೆ ನಿನ್ನೆ ನಡೆದ ಪರಸ್ಪರ ವಾಗ್ದಾಳಿ ಅಂತೂ ಸಿಕ್ಕಾಪಟ್ಟೆ ಅಟೆನ್ಷನ್​ ಪಡೆದಿದೆ.

ಈ ನಡುವೆ, ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರು ಬೆಂಗಳೂರಿನತ್ತ ಪಾದಯಾತ್ರೆ ಬೆಳೆಸಿದ್ದು ಸದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ತಲುಪಿದ್ದಾರೆ. ಪಟ್ಟಣದಲ್ಲಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಪಾದಯಾತ್ರಿಗಳು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸತತ ಪಾದಯಾತ್ರೆಯಿಂದ ದಣಿವಾದ ಬೆನ್ನಲ್ಲೇ ಕೊಂಚ ರಿಲಾಕ್ಸ್​ ಆಗಲು ಸಮುದಾಯದವರು ಇಂದು ಸಾಯಂಕಾಲ ಕಲ್ಯಾಣ ಮಂಟಪದಲ್ಲಿ ಡ್ಯಾನ್ಸ್​ ಮಾಡಿದರು. ಅದರಲ್ಲೂ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ಸ್ಟೆಪ್ಸ್ ಅಂತೂ ಸೆಂಟರ್​ ಆಫ್​ ಅಟ್ರಾಕ್ಷನ್​!

ಹೌದು, ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಶಪ್ಪನವರ್ ಡ್ಯಾನ್ಸ್​ ಮಾಡಿದರು. ತಮಟೆ ಸದ್ದಿಗೆ ಜಬರ್​ದಸ್ತ್​ ಸ್ಟೆಪ್ಸ್​ ಹಾಕಿದರು. ಪಾದಯಾತ್ರೆಯ ಸಾರಥ್ಯ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಮತ್ತು ಅವರ ಅಭಿಮಾನಿಗಳ ಕುಣಿತ ಎಲ್ಲರ ಗಮನ ಸೆಳೆಯಿತು. ಈ ಮೂಲಕ, ಸತತ ಕಾಲ್ನಡಿಗೆಯಿಂದ ಆಯಾಸವಾಗಿದ್ದ ವಿಜಯಾನಂದ ಕಾಶಪ್ಪನವರ್ ಮತ್ತು ಅವರು ಬೆಂಬಲಿಗರು ದಣಿವು ನೀಗಿಸಿಕೊಂಡರು.

BNG VIJAYANAND KASHAPPANAVAR

ಬೆಂಬಲಿಗರ ಜೊತೆ ಕುಣಿತ ಹಾಕಿದ ಶಾಶಕ ವಿಜಯಾನಂದ ಕಾಶಪ್ಪನವರ್​

BNG VIJAYANAND KASHAPPANAVAR

ತಮಟೆ ಸದ್ದಿಗೆ ಮಾಜಿ ಶಾಸಕರ ಜಬರ್​ದಸ್ತ್​ ಸ್ಟೆಪ್ಸ್

ಇದನ್ನೂ ಓದಿ: Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’