ದೊಡ್ಡಬಳ್ಳಾಪುರ: ಮಾಜಿ ಡಿವೈ,ಎಸ್ಪಿ ಕೋನಪ್ಪರೆಡ್ಡಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಈ ಸಂಬಂಧ, ದೊಡ್ಡಬಳ್ಳಾಪುರ ಬಳಿ ಇರುವ ಕೊನಪ್ಪರೆಡ್ಡಿ ಲೇಔಟ್ನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸಲಾಗುತ್ತಿದೆ. ಆರೋಪ ಮಾಡಿರುವ ಕುಟುಂಬಸ್ಥರು ಸಂಜೆಯಾದರೂ ಟ್ಯಾಂಕ್ನಿಂದ ಕೆಳಗಿಳಿದಿಲ್ಲ. ಬೆಳಗ್ಗೆ 10 ಗಂಟೆಯಿಂದ ಒವರ್ ಹೆಡ್ ಟ್ಯಾಂಕ್ ಮೇಲೆಯೇ, ಪೆಟ್ರೋಲ್ ಹಿಡಿದು ಕುಳಿತು ಧರಣಿ, ನಡೆಸ್ತಿದ್ದಾರೆ. ಚಿಂತಾಮಣಿ ಮೂಲದ ಕೋನಪ್ಪರೆಡ್ಡಿ ಕುಟುಂಬಸ್ಥರು ಈ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾರೆ.
ಈ ಮಧ್ಯೆ ಸ್ಥಳಕ್ಕೆ ಮಾಜಿ ಡಿವೈಎಸ್ಪಿ ಕೋನಪ್ಪರೆಡ್ಡಿ ಮಗನನ್ನ ಕರೆಸಿ ಸಂಧಾನಕ್ಕೆ ಯತ್ನಿಸಲಾಯಿತು. ಆದರೆ ನಮಗೆ ಹಣದ ಸೆಟ್ಲಮೆಂಟ್ ಮಾಡಲಿಲ್ಲವೆಂದರೆ ನಾವು ಕೆಳಗಿಳಿದು ಬರಲ್ಲ ಅಂತಾ ಆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ, ಕೆಲ ಕಾಲ ಪೊಲೀಸರು ಕುಟುಂಬಸ್ಥರ ನಡುವೆಯೂ ವಾಗ್ವಾದ ನಡೆಯಿತು. ನ್ಯಾಯ ಕೊಡಿಸುತ್ತೇವೆ, ಕೆಳಗೆ ಬನ್ನಿ. ಅಂದರೂ ಬರೋಲ್ಲವೆದು ವಾಗ್ವಾದ ನಡೆಸಿದರು. ಜೀವ ಹೋದರೂ ನಾವು ಕೆಳಗಿಳಿಯಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಹೂವಿನಹಡಗಲಿ: ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು ವಿಜಯನಗರ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕಾಗನೂರು ಸಮೀಪ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಕಾಗನೂರು ಗ್ರಾಮದ ಎಲಿಗಾರ ಮಲ್ಲಣ್ಣ(16) ಮತ್ತು ಜಗದೀಶ್(12) ನೀರು ಪಾಲಾದವರು. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಸಾವು: ವಿಜಯಪುರ: ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ಜಗದೀಶ್ ಹಣಮಂತ ಸತ್ತಿಗೇರಿ (35) ಎಂಬ ರೈತ ಸಿಡಿಲಿಗೆ ಬಲಿಯಾಗಿದ್ದಾರೆ. ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಅಸುನೀಗಿದ್ದಾರೆ. ಸಿಡಿಲು ಬಡಿದು ರೈತ ಸ್ಥಳದಲ್ಲಿಯೇ ಮೃತಪಟ್ಟರು. ಸ್ಥಳಕ್ಕೆ ತಹಶೀಲ್ದಾರ್ ಎಸ್ ಬಿ ಮುರಾಳ ಹಾಗೂ ಕೂಡಗಿ ಎನ್ ಟಿ ಪಿ ಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೂಡಗಿ ಎನ್ ಟಿ ಪಿ ಸಿ ಪೊಲೀ್ಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಜಲ ಸಮಾಧಿ: ಹಾವೇರಿ: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ನಿಖಿಲ್ ಕಿಲಾರಿ(14) ಮತ್ತು ಸಂಜಯ ಚಳಗೇರಿ(14) ನೀರುಪಾಲಾದವರು. ಐದಾರು ಗೆಳೆಯರು ಸೇರಿಕೊಂಡು ನದಿಗೆ ಈಜಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರೂ ನೀರಲ್ಲಿ ಮುಳುಗುತ್ತಿದ್ದಂತೆ ಉಳಿದ ಬಾಲಕರು, ಓಡಿ ಬಂದು ಮನೆಯವರಿಗೆ ವಿಷಯ ತಿಳಿಸಿದ್ದರು.