ಮೇಲಣಗವಿ ಮಠದ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ; ಕಿಚ್ಚ ಸುದೀಪ್​ಗೂ ಆತಂಕ?

ಮೇಲಣಗವಿ ಮಠದ ಪೀಠಾಧ್ಯಕ್ಷ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್​ ಅಭಿಮಾನಿಗಳಿಗೂ ಆತಂಕ ಶುರುವಾಗಿದೆ. ಏಪ್ರಿಲ್​ 4 ರಂದು ನಡೆದ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್​ಗೆ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು.

  • TV9 Web Team
  • Published On - 9:13 AM, 9 Apr 2021
ಮೇಲಣಗವಿ ಮಠದ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ; ಕಿಚ್ಚ ಸುದೀಪ್​ಗೂ ಆತಂಕ?
ಪ್ರಾತಿನಿಧಿಕ ಚಿತ್ರ

ನೆಲಮಂಗಲ: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನೆಲಮಂಗಲ ತಾಲ್ಲೂಕು ಶಿವಗಂಗೆಯ ಮೇಲಣಗವಿ ಮಠದ ಪೀಠಾಧ್ಯಕ್ಷ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ ಪಾಸಿಟಿವ್​ ದೃಢವಾಗಿದೆ. ಜಿಲ್ಲೆಯಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದರೂ ನಡೆದಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದು, ಇದೀಗ ಅವರಿಗೆ ಕೊರೊನಾ ಪಾಸಿಟಿವ್​ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾವಿರಾರು ಜನ ಸೇರಿದ್ದ ಕಾರ್ಯಕ್ರಮ ನೆರವೇರಿದ ಎರಡು ದಿನಗಳ ನಂತರ ಅಂದರೆ ಏಪ್ರಿಲ್​ 6ಕ್ಕೆ ಮೇಲಣಗವಿ ಮಠದ ಪೀಠಾಧ್ಯಕ್ಷರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಶ್ರೀಗಳಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಹೋಂ ಐಸೋಲೇಷನ್​ನಲ್ಲಿ ಇರುವಂತೆ ವೈದ್ಯರು ಸಲಹೆ ನೀಡಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ.

ಕಿಚ್ಚ ಸುದೀಪ್​ಗೂ ಕೊರೊನಾ ಭಯ?
ಮೇಲಣಗವಿ ಮಠದ ಪೀಠಾಧ್ಯಕ್ಷ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್​ ಅಭಿಮಾನಿಗಳಿಗೂ ಆತಂಕ ಶುರುವಾಗಿದೆ. ಏಪ್ರಿಲ್​ 4 ರಂದು ನಡೆದ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್​ಗೆ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು. ಸಾವಿರಾರು ಜನ ಸೇರಿದ್ದ ಈ ಕಾರ್ಯಕ್ರಮ ಮುಗಿದ ಎರಡೇ ದಿನಕ್ಕೆ ಶ್ರೀಗಳಿಗೆ ಪಾಸಿಟಿವ್​ ಕಾಣಿಸಿಕೊಂಡಿರುವ ಕಾರಣ ನಟ ಸುದೀಪ್​ಗೂ ಕೊರೊನಾ ತಗುಲಿರಬಹುದಾ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ಕೊರೊನಾ ನಿಯಮಾವಳಿ ಪಾಲಿಸದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ದೂರು ದಾಖಲು 

ಸಿಎಂಗಳಿಗೆ ಪಿಎಂ ಕೊಟ್ಟ 5 ಟಿಪ್ಸ್​: ಕೊರೊನಾ ಸೋಂಕು ತಡೆಗೆ ರಾಜ್ಯಗಳಿಗೆ ನರೇಂದ್ರ ಮೋದಿ ಕೊಟ್ಟ ಮುಖ್ಯ ಸಲಹೆಗಳಿವು

(Melanagavi Mutt Swamiji tested positive for Corona Kichcha Sudeep was in primary contact 5 days before)