ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ತ್ರಿಬಲ್ ರೈಡಿಂಗ್ ಮಾಡ್ತಿದ್ದ ಯುವಕರಿಗೆ ಕಪಾಳಮೋಕ್ಷ, ಬೈಕ್ ಸೀಜ್

ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತ ಸುಖಾಸುಮ್ಮನೆ ಅಡ್ಡಾಡಲು ಬಂದ ಯುವಕರಿಗೆ ಪುರಸಭೆಯ ಮುಖ್ಯ ಅಧಿಕಾರಿ ಕಾಪಾಳಮೊಕ್ಷ ಮಾಡಿದ್ದಾರೆ.

ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ತ್ರಿಬಲ್ ರೈಡಿಂಗ್ ಮಾಡ್ತಿದ್ದ ಯುವಕರಿಗೆ ಕಪಾಳಮೋಕ್ಷ, ಬೈಕ್ ಸೀಜ್
ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ತ್ರಿಬಲ್ ರೈಡಿಂಗ್ ಮಾಡ್ತಿದ್ದ ಯುವಕರಿಗೆ ಕಪಾಳಮೋಕ್ಷ, ಬೈಕ್ ಸೀಜ್

ದೇವನಹಳ್ಳಿ: ರಾಜ್ಯದಲ್ಲಿ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಈ ನಡುವೆ ತ್ರಿಬಲ್ ರೈಡಿಂಗ್ ಮಾಡಿದ ಯುವಕರಿಗೆ ಪುರಸಭೆಯ ಮುಖ್ಯ ಅಧಿಕಾರಿ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.

ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತ ಸುಖಾಸುಮ್ಮನೆ ಅಡ್ಡಾಡಲು ಬಂದ ಯುವಕರಿಗೆ ಪುರಸಭೆಯ ಮುಖ್ಯ ಅಧಿಕಾರಿ ಕಾಪಾಳಮೊಕ್ಷ ಮಾಡಿದ್ದಾರೆ. ಮೊದಲಿಗೆ ಬೈಕ್ ನಿಲ್ಲಿಸಿದ ಪುರಸಭೆಯ ಮುಖ್ಯ ಅಧಿಕಾರಿ ಯುವಕರಿಗೆ ಮಾಸ್ಕ್ ಹಾಕಲು ಸೂಚಿಸಿದ್ದಾರೆ. ಆಗ ಯುವಕರು, ನಾವು ಮಾಸ್ಕ್ ಹಾಕಲ್ಲ ಏನು ಮಾಡುತ್ತೀಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದ ಯುಕನಿಗೆ ಪುರಸಭೆ ಮುಖ್ಯ ಅಧಿಕಾರಿ ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಪೊಲೀಸರು ಯುವಕನ ಬೈಕ್ ಸೀಜ್ ಮಾಡಿದ್ದಾರೆ.

Municipal Chief Officer slaps boy 1

ವೀಕೆಂಡ್ ಕರ್ಫ್ಯೂ ನಡುವೆ ಮಾಸ್ಕ್ ಹಾಕದೇ ತ್ರಿಬಲ್ ರೈಡಿಂಗ್ ಮಾಡ್ತಿದ್ದ ಯುವಕರಿಗೆ ಕಪಾಳಮೋಕ್ಷ, ಬೈಕ್ ಸೀಜ್

ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ, ಏನಿರಲ್ಲ? ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆ ವರೆಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರದ ದಿನಗಳಲ್ಲಿ 50:50 ರೂಲ್ಸ್‌ನಲ್ಲಿ ನಡೀತಿದ್ದ ಶಾಪಿಂಗ್ ವೀಕೆಂಡ್‌ನಲ್ಲಿ ಬಂದ್ ಆಗಲಿದೆ. ಇಂದು, ನಾಳೆ ಶಾಪಿಂಗ್ ಮಾಡ್ತಿದ್ದ ಶಾಪಿಂಗ್ ಪ್ರಿಯರಿಗೆ ಶಾಕ್ ಆಗಿದೆ. ಇನ್ನೂ ವಾರಂತ್ಯದಲ್ಲಿ ಫಿಲ್ಮ್ ನೋಡೋಣ ಅಂತಾ ಪ್ಲ್ಯಾನ್ ಮಾಡಿದ್ದವರಿಗೂ ನಿರಾಸೆಯಾಗಿದೆ. ಇಂದು, ನಾಳೆ, ಥಿಯೇಟರ್ ಕಂಪ್ಲೀಟ್ ಬಂದ್ ಆಗಿರುತ್ತೆ. ಇನ್ನೂ ಪಾರ್ಕ್‌ ಕೂಡಾ ಎರಡು ದಿನ ಕ್ಲೋಸ್ ಆಗಿರಲಿದ್ದು, ಮನೆಯಲ್ಲೇ ವ್ಯಾಯಾಮ ಮಾಡಿಕೊಳ್ಳಬೇಕಿದೆ. ಇನ್ನೂ ಪಬ್‌ನಲ್ಲಿ ಮಸ್ತಿ, ಕ್ಲಬ್‌ನಲ್ಲಿ ಹರಟೆ ಹೊಡೆಯೋದಕ್ಕೂ ಇಂದು ನಾಳೆ ಅವಕಾಶವಿಲ್ಲ. ಹಾಗೆಯೇ ರೆಸ್ಟೋರೆಂಟ್‌ಗಳ ಬಾಗಿಲೂ 2 ದಿನ ಕ್ಲೋಸ್ ಆಗಿರುತ್ತೆ. ಇನ್ನೂ ರೆಸಾರ್ಟ್‌ಗಳು ಸಹ ಕ್ಲೋಸ್ ಇರಲಿದೆ. ಅಲ್ಲದೇ ವರ್ಕೌಟ್ ಮಾಡೋದಕ್ಕೆ ಜಿಮ್‌ಗಳು ಓಪನ್ ಇರಲ್ಲ. ಸ್ವಿಮ್ಮಿಂಗ್ ಪೂಲ್‌ಗಳು ಬಂದ್ ಆಗಿರಲಿದ್ದು, ಸಲೂನ್‌ಗಳ ಬಾಗಿಲು ಬಂದ್ ಆಗಿರುತ್ತೆ. ಇನ್ನೂ ರಾಜ್ಯಾದ್ಯಂತ ಶಾಲೆ ಕಾಲೇಜುಗಳ ಬಾಗಿಲು ಓಪನ್ ಇರಲ್ಲ. ಕೋಚಿಂಗ್ ಸೆಂಟರ್‌ಗಳು ಕ್ಲೋಸ್ ಆಗಿರಲಿದ್ದು, ದರ್ಶನಕ್ಕೆ ಅವಕಾಶವಿದ್ದ ದೇವಸ್ಥಾನಗಳಲ್ಲೂ ದೇವರ ದರ್ಶನವೂ ಇರಲ್ಲ. ಮಸೀದಿ, ಚರ್ಚೆನಲ್ಲೂ ಪಾರ್ಥನೆಗೆ ಅವಕಾಶವಿಲ್ಲ.

ಇದನ್ನೂ ಓದಿ: Forest Stories : ತಿಂಗಳ ಕೊನೆಯ ಅಕ್ಕಿಯೂ ಕೋಳಿ ಗೊಜ್ಜೂ ಆ ಢಂ ಢಮಾರ್ ಎನ್ನುವ ಆ ಗುಂಡಿನ ಶಬ್ದವೂ…

Click on your DTH Provider to Add TV9 Kannada