ದೊಡ್ಡಬಳ್ಳಾಪುರ: ರೌಂಡ್ಸ್​ನಲ್ಲಿದ್ದಾಗ ಇನ್ಸ್​ಪೆಕ್ಟರ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯ!

snake in police jeep | ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್​ ಇನ್ಸ್​ಪೆಕ್ಟರ್ ನವೀನ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯವಾಗಿದೆ. ಇನ್ಸ್​ಪೆಕ್ಟರ್​​ ರೌಂಡ್ಸ್​ನಲ್ಲಿದ್ದಾಗ ಚಲಿಸುತ್ತಿದ್ದ ಪೊಲೀಸ್ ಜೀಪ್​ ಡಿಕ್ಕಿಯಿಂದ ಹಾವು ಹೊರ ಬಂದಿದೆ.

  • Publish Date - 5:37 pm, Mon, 1 March 21 Edited By: KUSHAL V
ದೊಡ್ಡಬಳ್ಳಾಪುರ: ರೌಂಡ್ಸ್​ನಲ್ಲಿದ್ದಾಗ ಇನ್ಸ್​ಪೆಕ್ಟರ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯ!
ರೌಂಡ್ಸ್​ನಲ್ಲಿದ್ದಾಗ ಇನ್ಸ್​ಪೆಕ್ಟರ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯ!

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್​ ಇನ್ಸ್​ಪೆಕ್ಟರ್ ನವೀನ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯವಾಗಿದೆ. ಇನ್ಸ್​ಪೆಕ್ಟರ್​​ ರೌಂಡ್ಸ್​ನಲ್ಲಿದ್ದಾಗ ಚಲಿಸುತ್ತಿದ್ದ ಪೊಲೀಸ್ ಜೀಪ್​ ಡಿಕ್ಕಿಯಿಂದ ಹಾವು ಹೊರ ಬಂದಿದೆ. ಹಾವನ್ನ ಮೊದಲು ನೋಡಿದ ಪಾದಾಚಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೆ ಪೊಲೀಸರು ಕೆಳಗಿಳಿದು,‌ ಸ್ಥಳಿಯರ ಮೂಲಕ ಹಾವನ್ನ ಹಿಡಿದು ಕಾಡಿಗೆ ಬಿಡಿಸಿ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಪೊಲೀಸ್ ಜೀಪ್​ನಲ್ಲಿ ಹಾವು ಕಂಡುಬಂದಾಗ ಸುತ್ತಮುತ್ತಲ ವಾಹನ ಸವಾರರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಭೀಕರ ಅಪಘಾತ: ಟ್ಯಾಂಕರ್ ಲಾರಿಗೆ ಸಿಲುಕಿ ದಿನಗೂಲಿ ನೌಕರ ಸ್ಥಳದಲ್ಲೇ ಸಾವು