ವಹ್ನಿಕುಲ ಕ್ಷತ್ರಿಯ ಕುಲದೇವತೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಹಿರಿಯ ಸಾಹಿತಿ S​​.L.ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹ

ವಹ್ನಿಕುಲ ಕ್ಷತ್ರಿಯ ಕುಲದೇವತೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಎಸ್​​.ಎಲ್.ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹ ಕೇಳಿಬಂದಿದೆ. ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್​ಶ್ರೀಗಳು ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

  • TV9 Web Team
  • Published On - 21:43 PM, 27 Feb 2021
ವಹ್ನಿಕುಲ ಕ್ಷತ್ರಿಯ ಕುಲದೇವತೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಹಿರಿಯ ಸಾಹಿತಿ S​​.L.ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹ
ಹಿರಿಯ ಸಾಹಿತಿ S.L.ಭೈರಪ್ಪ

ದೇವನಹಳ್ಳಿ: ವಹ್ನಿಕುಲ ಕ್ಷತ್ರಿಯ ಕುಲದೇವತೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಎಸ್​​.ಎಲ್.ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹ ಕೇಳಿಬಂದಿದೆ. ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್​ಶ್ರೀಗಳು ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಬಳಿಯ ಸಂಸ್ಥಾನ ಮಠದ ಶ್ರೀಗಳು ಭೈರಪ್ಪ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

ದ್ರೌಪದಿ ದೇವಿಗೆ ಸಾಹಿತಿ ಭೈರಪ್ಪ ಅವಮಾನ ಮಾಡಿದ್ದಾರೆ. ಕೂಡಲೆ ತಿಗಳ ಜನಾಂಗದ ಕ್ಷಮೆ ಯಾಚಿಸುವಂತೆ ಶ್ರೀಗಳು ಒತ್ತಾಯ ಮಾಡಿದ್ದಾರೆ. ಕ್ಷಮೆ ಕೇಳದಿದ್ರೆ ಸಮುದಾಯದವರಿಂದ ಹೋರಾಟದ ಎಚ್ಚರಿಕೆ ಸಹ ಕೊಟ್ಟಿದ್ದಾರೆ. ಎಲ್ಲಾ ತಾಲೂಕು ಕೇಂದ್ರಗಳಲ್ಲೂ ದೂರು ನೀಡಲಾಗಿದೆ. ಹೀಗಾಗಿ, ಕ್ರಮ ಕೈಗೊಳ್ಳುವಂತೆ ಶ್ರೀಗಳು ಸರ್ಕಾರಕ್ಕೂ ಒತ್ತಾಯಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ASI ಸಾವು
ಇತ್ತ, ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ASIಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆ.ಸಿ.ನಗರ ಠಾಣೆಯಲ್ಲಿ ವರದಿಯಾಗಿದೆ. ಹೃದಯಾಘಾತದಿಂದ ASI ರಂಗಸ್ವಾಮಯ್ಯ ಕೊನೆಯುಸಿರೆಳೆದಿದ್ದಾರೆ.

ಕಳೆದ 2 ದಿನದ ಹಿಂದೆ ರಜೆ ಮೇಲೆ ತೆರಳಿದ್ದ ರಂಗಸ್ವಾಮಯ್ಯ ಇಂದು ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಠಾಣೆಯಲ್ಲಿ ಕೆಲಸ ಮಾಡುವಾಗ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಂಗಸ್ವಾಮಯ್ಯ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ‘ಮಹದಾಯಿ ಸಭೆಯಲ್ಲಿ ನನಗೆ ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಿದ್ರು.. ಆಗ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ’