ಆರೋಪಿಗಳಿಗೆ ಜಾಮೀನು ನೀಡಲು ಸುಳ್ಳು ದಾಖಲೆ ಸೃಷ್ಟಿ: ವಂಚಕಿ ಮಹಿಳೆಗೆ 50 ಸಾವಿರ ದಂಡ ವಿಧಿಸಿದ ಕೋರ್ಟ್​

ಕೊಲೆ, ಸುಲಿಗೆ ಮಾಡಿ ಜೈಲು ಸೇರಿದ್ದ ಅರೋಪಿಗಳಿಗೆ ಸುಳ್ಳು ದಾಖಲೆ ನೀಡಿ ಜಾಮೀನು ನೀಡಿದ್ದ ಮಹಿಳೆಗೆ, ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯ 50ಸಾವಿರ ನಗದು ದಂಡ ಹಾಗೂ ಅರೋಪಿಗಳನ್ನ ಒಂದು ತಿಂಗಳ ಒಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶ ಹೊರಡಿಸಿದೆ

  • TV9 Web Team
  • Published On - 10:20 AM, 5 Mar 2021
ಆರೋಪಿಗಳಿಗೆ ಜಾಮೀನು ನೀಡಲು ಸುಳ್ಳು ದಾಖಲೆ ಸೃಷ್ಟಿ: ವಂಚಕಿ ಮಹಿಳೆಗೆ 50 ಸಾವಿರ ದಂಡ ವಿಧಿಸಿದ ಕೋರ್ಟ್​
ವಂಚಕಿ ಮಹಿಳೆ ಸಾವಿತ್ರಮ್ಮ

ನೆಲಮಂಗಲ: ಕೊಲೆ, ಸುಲಿಗೆ ಮಾಡಿ ಜೈಲು ಸೇರಿದ್ದ ಅರೋಪಿಗಳಿಗೆ ಸುಳ್ಳು ದಾಖಲೆ ನೀಡಿ ಜಾಮೀನು ನೀಡಿದ್ದ ಮಹಿಳೆಗೆ, ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯ 50 ಸಾವಿರ ನಗದು ದಂಡ ಹಾಗೂ ಅರೋಪಿಗಳನ್ನ ಒಂದು ತಿಂಗಳ ಒಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶ ಹೊರಡಿಸಿದೆ.

ರಾಮನಗರ ಮೂಲದ ಸಾವಿತ್ರಮ್ಮ(36), ಕೋರ್ಟ್ ದಂಡ ವಿಧಿಸಿದ ಮಹಿಳೆಯಾಗಿದ್ದು, ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯದ ನ್ಯಾಯಾಧೀಶರಾಗಿರುವ ವೆಂಕಟೇಶ್ ನಾಯ್ಕ ಈ ಅದೇಶ ಹೊರಡಿಸಿದ್ದಾರೆ. 2015ರಲ್ಲಿ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹಣಕಾಸಿನ ವಿಚಾರವಾಗಿ ಉಮೇಶ್, ಮಂಜುನಾಥ್ ಎಂಬುವವರ ಕೊಲೆಯಾಗಿತ್ತು. ಮಾಚೋಹಳ್ಳಿಯಲ್ಲಿ ಚೇತನ್, ನಾಗರಾಜು ಎಂಬ ಇಬ್ಬರು ಅರೋಪಿಗಳು ಸೇರಿ ಕೊಲೆಗೈದಿದ್ದರು.

ಹೀಗಾಗಿ ಅರೋಪಿಗಳನ್ನ ಬಿಡಿಸಲು ಸಾವಿತ್ರಮ್ಮ ನಕಲಿಯಾಗಿ ಪಹಣಿ ಸೃಷ್ಟಿಸಿದ್ದರು. ಲಕ್ಷ್ಮೀ ಹೆಸರಿನ ಗುರುತಿನ ಚೀಟಿಗೆ ಪೋಟೋ ಅಂಟಿಸಿ ನ್ಯಾಯಾಲಯಕ್ಕೆ ಸುಳ್ಳು ದಾಖಲಾತಿ ನೀಡಿದ್ದರು. ಜೊತೆಗೆ ಬನ್ನೇರುಘಟ್ಟ, ಹಲಸೂರು ಗೇಟ್, ಪೀಣ್ಯಾ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಸೇರಿದಂತೆ 8ಕ್ಕೂ ಹೆಚ್ಚು ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ ಮಾಡಿದ್ದ ಅರೋಪಿಗಳಿಗೆ ಬೇರೆ ಬೇರೆ ಹೆಸರಿನಲ್ಲಿ ಜಾಮೀನು ನೀಡಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ವಂಚಕಿ ಸಾವಿತ್ರಮ್ಮಗೆ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚಾಲಾಕಿ ವಂಚಕಿಯರಿಗೆ ಮಹಿಳೆಯರ ಗೂಸಾ..! ಕೆಲಸ ಕೊಡಿಸೋದಾಗಿ ಹೇಳಿ ಹಣ ಪಡೆದು ಕೈಕೊಟ್ಟವರಿಗೆ ಗೂಸಾ