ಆ್ಯಂಬುಲೆನ್ಸ್‌ಗಳ ಸುಗಮ‌ ಸಂಚಾರಕ್ಕೆ ನಿಗದಿಪಡಿಸಿದ್ದ ₹ 1800 ಕೋಟಿ ಟೆಂಡರ್ ರದ್ದು

ಆ್ಯಂಬುಲೆನ್ಸ್‌ಗಳ ಸುಗಮ‌ ಸಂಚಾರಕ್ಕೆ ನಿಗದಿಪಡಿಸಿದ್ದ ₹ 1800 ಕೋಟಿ ಟೆಂಡರ್ ಅ​ನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಲಾಗಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂಲ ಕಡತದಲ್ಲಿ ಮಾಹಿತಿ ಲಭ್ಯವಾಗಿದೆ.

  • TV9 Web Team
  • Published On - 19:07 PM, 18 Jan 2021
ಆ್ಯಂಬುಲೆನ್ಸ್‌ಗಳ ಸುಗಮ‌ ಸಂಚಾರಕ್ಕೆ ನಿಗದಿಪಡಿಸಿದ್ದ ₹ 1800 ಕೋಟಿ ಟೆಂಡರ್ ರದ್ದು
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆ್ಯಂಬುಲೆನ್ಸ್‌ಗಳ ಸುಗಮ‌ ಸಂಚಾರಕ್ಕೆ ವ್ಯವಸ್ಥೆ ರೂಪಿಸಲು ನಿಗದಿಪಡಿಸಿದ್ದ ₹ 1800 ಕೋಟಿ ಟೆಂಡರ್ ಅ​ನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಲಾಗಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂಲ ಕಡತದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸಂಚಾರ ನಿರ್ವಹಣೆ ಟೆಂಡರ್ ರದ್ದತಿಗೆ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ಟೆಂಡರ್‌ನಲ್ಲಿ ಯಾರೋ ಆಸಕ್ತಿ ಹೊಂದಿರುವಂತಿದೆ. ಹಿಂದಿನ ಟೆಂಡರ್‌ನಲ್ಲಿ ಅಕ್ರಮವಿದ್ದರೆ ಕ್ರಮಕೈಗೊಳ್ಳಲಿ. ಅದರ ಹೊರತಾಗಿ, ತಜ್ಞರ ಅಭಿಪ್ರಾಯ ಪಡೆಯದೇ ಟೆಂಡರ್ ರದ್ದುಪಡಿಸಿದ್ದೇಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಫೆಬ್ರವರಿ 1ರ ಒಳಗೆ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಸಂಚಾರ ದಟ್ಟಣೆಯ ಮಧ್ಯೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ನಂತರ ಸುಗಮ ಸಂಚಾರ ವ್ಯವಸ್ಥೆಯ ಟೆಂಡರ್ ರದ್ದುಪಡಿಸಲಾಗಿತ್ತು. ಬದಲಿಗೆ, ಸರ್ಕಾರ ಉನ್ನತ ಮಟ್ಟದ‌ ಸಮಿತಿ ನೇಮಿಸಿತ್ತು. ಟೆಂಡರ್ ರದ್ಧತಿ ಹಿಂದೆ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಭಾರತ್ ಪುನರುತ್ಥಾನ ಟ್ರಸ್ಟ್ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು.

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಯಡಿಯೂರಪ್ಪ