ಅನ್​ಲಾಕ್ ಘೋಷಣೆಯಾಗುತ್ತಿದ್ದಂತೆ ಜನರ ನಿರ್ಲಕ್ಷ್ಯ.. ಪೊಲೀಸರಿಗೆ ಎದುರಾಗಿದೆ ದೊಡ್ಡ ಸವಾಲು

ಅನ್ಲಾಕ್ ಪ್ರಕ್ರಿಯೆ ಸೋಮವಾರದಿಂದ ಜಾರಿಯಾಗಲಿದ್ದು ನಗರದಲ್ಲಿ ಜನರು ಇಂದಿನಿಂದಲೇ ರಸ್ತೆಗೆ ಇಳಿಯುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮರೆತು ಜನ ನಿರ್ಲಕ್ಷ್ಯತೋರುತ್ತಿರುವಂತಹ ದೃಶ್ಯಗಳು ಇಂದು ಕಂಡು ಬಂದಿದೆ. ಇದರ ನಡುವೆ ಪೊಲೀಸರಿಗೆ ನಿರ್ವಾಹಣೆ ಕಾರ್ಯ ಮತ್ತಷ್ಟು ಕಠಿಣವಾಗಿದೆ. ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೆ ಪೊಲೀಸರ ಮುಂದೆ ಈಗ ಅನೇಕ ಸವಾಲುಗಳು ಎದುರಾಗಿವೆ.

ಅನ್​ಲಾಕ್ ಘೋಷಣೆಯಾಗುತ್ತಿದ್ದಂತೆ ಜನರ ನಿರ್ಲಕ್ಷ್ಯ.. ಪೊಲೀಸರಿಗೆ ಎದುರಾಗಿದೆ ದೊಡ್ಡ ಸವಾಲು

ಬೆಂಗಳೂರು: ಮಹಾಮಾರಿ ಕೊರೊನಾ ಪ್ರಭಾವ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 11 ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಅನ್ಲಾಕ್ ಘೋಷಣೆ ಮಾಡಲಾಗಿದೆ. ಆದರೆ ಅನ್ಲಾಕ್ ಪ್ರಕ್ರಿಯೆ ಸೋಮವಾರದಿಂದ ಜಾರಿಯಾಗಲಿದ್ದು ನಗರದಲ್ಲಿ ಜನರು ಇಂದಿನಿಂದಲೇ ರಸ್ತೆಗೆ ಇಳಿಯುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮರೆತು ಜನ ನಿರ್ಲಕ್ಷ್ಯತೋರುತ್ತಿರುವಂತಹ ದೃಶ್ಯಗಳು ಇಂದು ಕಂಡು ಬಂದಿದೆ. ಇದರ ನಡುವೆ ಪೊಲೀಸರಿಗೆ ನಿರ್ವಾಹಣೆ ಕಾರ್ಯ ಮತ್ತಷ್ಟು ಕಠಿಣವಾಗಿದೆ. ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೆ ಪೊಲೀಸರ ಮುಂದೆ ಈಗ ಅನೇಕ ಸವಾಲುಗಳು ಎದುರಾಗಿವೆ.

ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೆ ಪೊಲೀಸರಿಗೆ ಎದುರಾದ ಸವಾಲುಗಳು
ಸರ್ಕಾರ ಗಾರ್ಮೆಂಟ್ಸ್, ಬೀದಿ ಬದಿ ವ್ಯಾಪಾರ ಮತ್ತು ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ನಗರದಲ್ಲಿ ವಾಹನಗಳು ರಸ್ತೆಗೆ ಇಳಿಯಲಿವೆ. ಗಾರ್ಮೆಟ್ಸ್ ಮತ್ತು ಕಾರ್ಖಾನೆಗಳು ಓಪನ್ ಆಕ್ತಿದ್ದಂತೆ ವಾಹನ ದಟ್ಟಣೆ ಹೆಚ್ಚಾಗುತ್ತೆ. ಸಾರ್ವಜನಿಕರಿಗೆ ಸಾರಿಗೆ ಲಭ್ಯವಿಲ್ಲದ ಕಾರಣ ಖಾಸಗಿ ವಾಹನಗಳ ಬಳಕೆ ಅನಿವಾರ್ಯವಾಗುತ್ತೆ. ಸ್ವಂತ ವಾಹನಗಳು, ಕ್ಯಾಬ್, ಆಟೋಗಳ ಸಂಚಾರ ಹೆಚ್ಚಾಗಿ ವಾಹನಗಳ ತಪಾಸಣೆ ವೇಳೆ ಪೊಲೀಸರಿಗೆ ತಲೆ ಬಿಸಿ ಉಂಟಾಗಲಿದೆ. ಖಾಲಿ ಖಾಲಿಯಿಂದ ರಸ್ತೆಗಳಲ್ಲಿ ಮತ್ತೆ ಟ್ರಾಫಿಕ್ ಬಿಸಿ ಏರಲಿದೆ. ಕೊವಿಡ್ ನಿಯಮಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಿದೆ.

ಮಾರುಕಟ್ಟೆ, ಅಂಗಡಿಗಳ ಬಳಿ ಗುಂಪು ಸೇರಲು ಬ್ರೇಕ್
ಮಧ್ಯಾಹ್ನದವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಳದಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಧರಿಸುವಿಕೆ ಪರಿಶೀಲನೆ ಮಾಡುವುದು. ಜನಜಂಗುಳಿ, ಗುಂಪುಗೂಡದಂತೆ ನೋಡಿಕೊಳ್ಳುವುದು. ಅಂಗಡಿಗಳ ಬಳಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವುದು. ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳ ಪರಿಶೀಲನೆ. ವ್ಯಾಪಾರ, ಕೆಲಸ ಅಂತ ಓಡಾಡುವ ಜನರ ಮೇಲೆ ತೀವ್ರ ನಿಗಾ ಇಡುವುದು ಸೇರಿದಂತೆ ಮತ್ತೆ ಜನರ ನಿರ್ವಾಹಣೆಯ ತಲೆ ನೋವು ಎದುರಾಗಲಿದೆ.

ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ರಾತ್ರಿ ಬಂದೋಬಸ್ತ್ ಮಾಡುವುದು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಲಾಕ್ ಮಾಡುವುದು. ರಾತ್ರಿ ವೇಳೆ ಅನಗತ್ಯ ಓಡಾಡುವ ವಾಹನಗಳ ತಪಾಸಣೆ. ಸುಮ್ಮನೆ ಓಡಾಡುವ ಮಂದಿಗೆ ಬ್ರೇಕ್ ಹಾಕುವುದು. ರಾತ್ರಿ 7 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿಗಾ ಇಡುವ ಕಾರ್ಯ ಪೊಲೀಸರ ಹೆಗಲ ಮೇಲಿದೆ.

ಇನ್ನೂ ವೀಕೆಂಡ್ ಕರ್ಪ್ಯೂ ಇಂಪ್ಲಿಮೆಂಟ್ ಮಾಡುವುದು. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ನಿಗಾ ಇಡುವುದು. ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳಿಗೆ ಬ್ರೇಕ್ ಹಾಕುವುದು. ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ವಾಹನ ತಪಾಸಣೆ ಮಾಡುವ ಸವಾಲು ಎದುರಾಗಿದೆ. ಇಷ್ಟು ದಿನ ಲಾಕ್ಡೌನ್ ನಿರ್ವಾಹಣೆಯಲ್ಲಿ ತೊಡಗಿದ್ದ ಪೊಲೀಸರಿಗೆ ಮತ್ತಷ್ಟು ಸವಾಲುಗಳು ಎದುರಾಗಿವೆ.

ಇದನ್ನೂ ಓದಿ: ಕಲಾವಿದ ರಚಿಸಿದ ಡಾ. ರಾಜ್​ ಅವರ ಈ ಅದ್ಭುತ ಚಿತ್ರದಲ್ಲಿದೆ ಬೆರಗಾಗುವಂತಹ ವಿಶೇಷ; ಗುರುತಿಸಬಲ್ಲಿರಾ?