ಸರ್ಕಾರಿ ಆಸ್ಪತ್ರೆಗೆ ಬಂತು AI; ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ

ಕೊರೊನಾ ಬಂದ ಬಳಿಕ ಜನರ ಲೈಫ್ ಸ್ಟೈಲ್ ಕಂಪ್ಲೀಟ್ ಚೇಂಜ್ ಆಗಿದೆ. ಆರೋಗ್ಯದ ಸ್ಥಿತಿಗತಿ ಉಲ್ಟಾಪಲ್ಟಾ ಆಗಿದೆ. ಕೆಲವರಿಗೆ ಹೃದಯಾಘಾತ ಕಂಡು ಬಂದ್ರೆ ಹಲವರಿಗೆ ಉಸಿರಾಟದ ಸಮಸ್ಯೆ. ಇನ್ನು ಕೆಲವರಿಗೆ ಕ್ಯಾನ್ಸರ್, ಸ್ಟ್ರೋಕ್ ಸೇರಿದಂತೆ ಹಲವು ಸಮಸ್ಯೆಗಳು ಯುವಕರು, ಮಹಿಳೆಯರು ಹಾಗೂ ಪುಟಾಣಿ ಮಕ್ಕಳ ಜೀವ ತೆಗೆಯಲು ಮುಂದಾಗುತ್ತಿದೆ. ಹೀಗಾಗಿ ಹೆಮ್ಮಾರಿಗಳನ್ನ ಬಗ್ಗುಬಡೆಯಲು AI ತಂತ್ರಜ್ಞಾನ ಕಾಲಿಟ್ಟಿದೆ.

ಸರ್ಕಾರಿ ಆಸ್ಪತ್ರೆಗೆ ಬಂತು AI; ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ
ಕೆ ಸಿ ಜನರಲ್ ಆಸ್ಪತ್ರೆ
Follow us
Vinay Kashappanavar
| Updated By: ಆಯೇಷಾ ಬಾನು

Updated on: Feb 14, 2024 | 6:56 AM

ಬೆಂಗಳೂರು, ಫೆ.14: ಕೊರೊನಾ (Coronavirus) ಕಾಲಘಟ್ಟದಲ್ಲಿ ಜನರು ಸಾಮಾನ್ಯ ಕೆಮ್ಮು, ನೆಗಡಿ, ಜ್ವರಕ್ಕೆ ಬೇಚ್ಚು ಬೀಳುತಿದ್ದರು. ಆದರೆ ಈ ನಡುವೆಯೇ ಕಿಲ್ಲರ್ ಹಾರ್ಟ್ ಅಟ್ಯಾಕ್, ಕ್ಯಾನ್ಸರ್, ಬ್ರೇನ್ ಸ್ಟೋಕ್ ಸೇರಿದಂತೆ ನಾನಾ ಸಮಸ್ಯೆಗಳು ರಾಜ್ಯದಲ್ಲಿ ಏರಿಕೆ ಕಣ್ತೀದೆ. ಸದ್ದಿಲ್ಲದೆ ಮಹಿಳೆಯರು, ವಯೋವೃದ್ಧರು, ಮಕ್ಕಳಿಗೆ ಅಟ್ಯಾಕ್ ಮಾಡ್ತೀದೆ. ರಾಜ್ಯದಲ್ಲಿ ಕ್ಯಾನ್ಸರ್​ಗೆ ತುತ್ತಾಗುತ್ತಿರೊ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಕ್ಯಾನ್ಸರ್, ಹೃದಯ ಸಂಬಂಧಿ ಶ್ವಾಸಕೋಶ ಸಮಸ್ಯೆಗಳ ಪತ್ತೆಗೆ AI ತಂತ್ರಜ್ಞಾನದ ಮೊರೆ ಹೋಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಹಲವಾರು ಮಂದಿ ಸಡನ್ ಡೆತ್ ಗೆ ಕಾರಣವಗ್ತಾ ಇದ್ದಾರೆ. ಇನ್ನು ಕೆಲವರು ಜಿಮ್, ವರ್ಕೌಟ್, ವ್ಯಾಯಮ ಮಾಡಿಕೊಂಡು ಫಿಟ್ ಅ್ಯಂಡ್ ಫರ್ಪೆಕ್ಟ್ ಇರ್ತಾರೆ. ಆದ್ರೆ ಏಕಾಏಕಿ ಕುಸಿದು ಬಿದ್ದು ಜೀವ ಬೀಡ್ತಾರೆ. ಇಷ್ಟಕ್ಕೆಲ್ಲ ಪ್ರಮುಖ ಕಾರಣ ಅಂದ್ರೆ ದೇಶದಲ್ಲಿ ಬೇರು ಬಿಟ್ಟಿರುವ ಖಾಯಿಲೆ ಬೇಗ ಪತ್ತೆಯಾಗ್ದೆ ಇರುವುದು. ಕೊನೆಯ ಹಂತದಲ್ಲಿ ಕಂಡು ಬರುವುದು ಜನರ ಸಾವಿಗೆ ಕಾಣವಾಗ್ತಿದೆ. ಹೀಗಾಗಿ ಜನರ ಜೀವ ಉಳಿಸಲು. ತುರ್ತು ಖಾಯಿಲೆ ಪತ್ತೆ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲು AI ತಂತ್ರಜ್ಞಾನ ಆಸ್ಪತ್ರೆಗೆ ಲಗ್ಗೆ ಇಟ್ಟಿದೆ. ಲಂಗ್ಸ್ ಸಮಸ್ಯೆಗಳು, ಟಿಬಿ ಕೇಸ್, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಸಮಸ್ಯೆ, ಗ್ಯಾಸ್ಟ್ರೀಕ್ ಪ್ಲಾಬ್ಲಂ, ಹೃದಯ ಸಂಬಂಧಿ ಸಮಸ್ಯೆ ಏನೇ ಇದ್ರೂ ಇದು ಪತ್ತೆ ಹಚ್ಚಿ ವೈದ್ಯರಿಗೆ ಮುನ್ಸೂಚನೆ ನೀಡಲಿದೆ. AI ಕೃತಕ ಬುದ್ಧಿಮತ್ತೆಯಿಂದ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಇದು ಅನುಕೂಲವಾಗಲಿದೆ.

ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ 11 ಡಿವೈಎಸ್‌ಪಿ, 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಕ್ಯಾನ್ಸರ್‌ನ್ನು ಆರಂಭಿಕವಾಗಿ ಪತ್ತೆ ಹಚ್ಚಲಿದೆ. ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ಅಸ್ಟ್ರಾಜೆನೆಕಾ ಇಂಡಿಯಾ ಹಾಗೂ ರಾಜ್ಯ ಸರ್ಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆ ಸೇರಿದಂತೆ 29 ಜಿಲ್ಲಾ ಆಸ್ಪತ್ರೆಗಳಲ್ಲಿ AI ಬಳಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ AI ಕೆಲಸ ಶುರು ಮಾಡಿದ್ದು ಈಗಾಗಲೇ ಒಟ್ಟು 2148 ರೋಗಿಗಳ ಸ್ಕ್ಯಾನಿಂಗ್ ನಲ್ಲಿ 909 ಅಸಹಜ ಲಕ್ಷಣ ಸಮಸ್ಯೆ ಹೊಂದಿರುವವರನ್ನ ಇದು ಗುರುತಿಸಿದೆ. 328 ರೋಗಿಗಳಲ್ಲಿ TB ಲಕ್ಷಣ ಚಿಕಿತ್ಸೆಯ ಅವಶ್ಯಕತೆ ಗುರುತಿಸಿ ಸಲಹೆ ನೀಡಿದೆ. ಸದ್ಯ ಇದರಿಂದ ವೈದ್ಯರಿಗೆ ತುರ್ತು ಚಿಕಿತ್ಸೆ ನೀಡಲು ತುಂಬಾ ಸಹಾಯಕವಾಗಿದೆ. ಇನ್ನು ರೋಗಿಗಳ ಜೀವ ಉಳಿಸುವಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.

ಒಟ್ನಲ್ಲಿ ಕೊರೊನಾ ಬಳಿಕ ಸದಿಲ್ಲದೇ ಏರಿಕೆಯಾಗ್ತೀರೊ ಖಾಯಿಲೆಗಳ ಪತ್ತೆಗೆ ಎಐ ತಂತ್ರಜ್ಞಾನ ಲಗ್ಗೆ ಇಟಿದ್ದು ಆರಂಭದಲ್ಲಿಯೇ ಖಾಯಿಲೆಗಳನ್ನ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಗುರಿಯನ್ನ ಆರೋಗ್ಯ ಇಲಾಖೆ ಹೊಂದಿದ್ದು AI ತಂತ್ರಜ್ಞನದ ಮೊರೆ ಹೋಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ