Banashankari Temple: ಬನಶಂಕರಿ ದೇವಸ್ಥಾನದಲ್ಲಿ ಇನ್ಮುಂದೆ ಅಡಿಕೆ ತಟ್ಟೆಗಳು ಬ್ಯಾನ್
ಬನಶಂಕರಿ ದೇವಸ್ಥಾನದಲ್ಲಿ ತುಪ್ಪದ ದೀಪವನ್ನ ಹಚ್ಚುವ ಸಲುವಾಗಿ ಭಕ್ತಾಧಿಗಳು ಅಡಿಕೆ ತಟ್ಟೆಗಳನ್ನ ಬಳಕೆ ಮಾಡುತ್ತಾರೆ. ಇದರಿಂದ ದೇವಸ್ಥಾನದ ಸುತ್ತಮುತ್ತ ಘನತ್ಯಾಜ್ಯ ಉಂಟಾಗುತ್ತಿದೆ. ಹೀಗಾಗಿ ದೇವಸ್ಥಾನದಲ್ಲಿ ಅಡಿಕೆ ತಟ್ಟೆಗಳನ್ನು ಬಳಸಬೇಡಿ ಎಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಬೆಂಗಳೂರು, ಫೆ.14: ಬನಶಂಕರಿ ದೇವಸ್ಥಾನದಲ್ಲಿ (Banashankari Temple) ಅಮ್ಮನವರಿಗೆ ತುಪ್ಪದ ದೀಪ ಹಚ್ಚಲು ಅಡಿಕೆ ತಟ್ಟೆಗಳನ್ನ ಬಳಕೆ ಮಾಡಲಾಗುತ್ತಿತ್ತು. ಇದ್ರಿಂದ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು. ಇದೀಗಾ ಈ ಅಡಿಕೆ ತಟ್ಟೆಗಳನ್ನ (Areca Plate) ಬ್ಯಾನ್ ಮಾಡಿದ್ದು, ಕಸದಿಂದ ರಸಮಾಡಲು ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ.
ನಗರದ ಬನಶಂಕರಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನ ಭಕ್ತಾಧಿಗಳು ಬರ್ತಾರೆ. ಅಲ್ಲದೇ ದೇವಸ್ಥಾನದಲ್ಲಿ ಸಾವಿರಾರು ಜನ ಭಕ್ತಾಧಿಗಳು ಭಕ್ತಿಭಾವದಿಂದ ಹಲವು ನಂಬಿಕೆಗಳನ್ನ ಇಟ್ಕೊಂಡು ತಾಯಿಗೆ ತುಪ್ಪದ ದೀಪಗಳನ್ನ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ ತುಪ್ಪದ ದೀಪವನ್ನ ಹಚ್ಚುವ ಸಲುವಾಗಿ ಭಕ್ತಾಧಿಗಳು ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು. ಇನ್ನು, ಈ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿ ದೇವಸ್ಥಾನದಲ್ಲಿಯೇ ಬಿಟ್ಟು ಹೋಗುತ್ತಿದ್ರು. ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು. ಇದೀಗಾ ಈ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ನಂತಹ ವಸ್ತುಗಳನ್ನ ದೇವಸ್ಥಾನದ ಆಡಳಿತ ಮಂಡಳಿ ಬ್ಯಾನ್ ಮಾಡಿದೆ.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪ್ರತಿದಿನ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು. ಇದರಿಂದ ದೇವಸ್ಥಾನದ ಸುತ್ತಲು ಕಸ ಹೆಚ್ಚಾಗಿ ಕಂಡುಬರುತ್ತಿತ್ತು. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಮನೆಯಿಂದಲೇ ಪ್ಲೇಟ್ ಗಳನ್ನ ತಂದು ಪೂಜೆ ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಸುತ್ತಲೂ ಕಸದ ಸಮಸ್ಯೆ ನಿವಾರಣೆಯಾಗಿದೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ದೇವಸ್ಥಾನದಲ್ಲಿ ಸಂಗ್ರಹಣೆಯಾಗುವ ಕಸದಿಂದ ಗೊಬ್ಬರ ತಯಾರಿಸಲು ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.
ಇದನ್ನೂ ಓದಿ: BBMP: ಯಲಹಂಕದಲ್ಲಿ 85 ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿ ತೆರವುಗೊಳಿಸಿದ ಬಿಬಿಎಂಪಿ
ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಪೂಜೆಗೆ ಬಳಸುವ ಹೂ, ಉಳಿದ ಅನ್ನ ಸಾಂಬಾರ್, ಅನ್ನದಾಸೋಹಕ್ಕ ಬಳಕೆ ಮಾಡಿದ ನಂತರ ತರಕಾರಿಗಳ ವೇಸ್ಟೇಜ್ ಅನ್ನ ಕಸಕ್ಕೆ ಹಾಕಲಾಗುತ್ತಿತ್ತು. ಆದ್ರೀಗಾ ಉಳಿದ ಹೂವು, ಹಣ್ಣು, ಭಕ್ತಾಧಿಗಳು ಊಟ ಮಾಡಿ ಉಳಿದ ಅನ್ನ- ಸಾಂಬಾರ್, ಇವೆಲ್ಲವನ್ನ ಸಂಗ್ರಹಿಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಈ ಗೊಬ್ಬರವನ್ನ ಒಂದು ಕೆಜಿಗೆ 20 ರೂ ನಂತೆ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ದೇವಸ್ಥಾನದ ಸುತ್ತಲೂ ಸಧ್ಯ ಕಸದ ಸಮಸ್ಯೆ ಕಡಿಮೆಯಾಗಿದ್ದು ಭಕ್ತರು ಸಹ ಅಡಿಕೆ ತಟ್ಟೆಗಳನ್ನ ಬಿಟ್ಟು, ಮನೆಗಳಿಂದಲೇ ತಟ್ಟೆ, ಬಟ್ಟಲುಗಳನ್ನ ತಂದು ತಾಯಿಗೆ ತುಪ್ಪದ ದೀಪಾ ಹಚ್ಚುತ್ತಿದ್ದಾರೆ.
ಒಟ್ನಲ್ಲಿ, ದೇವಸ್ತಾನದಲ್ಲಿ ಅಡಿಕೆ ಪ್ಲೇಟ್ ಗಳಿಗೆ ಹಾಗೂ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದು, ಕಸದಿಂದ ರಸ ಮಾಡಲು ಹೊರಟಿರುವುದು ಒಳ್ಳೆಯ ಸಂಗತಿಯೇ ಹೌದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ