ಮಗಳ ಮನೆಗೆ ತೆರಳಿದಾಗ ಕಳುವಾಯ್ತು 90 ಲಕ್ಷ ಹಣ; ಬಾಂಗ್ಲಾದೇಶ ಮೂಲದ ಇಬ್ಬರು ಬಂಧನ

ಮೇ 2 ರಂದು ಬಾಗಲುಗುಂಟೆಯ ಎಮ್​ಹೆಚ್ಆರ್ ಲೇಔಟ್​ನಲ್ಲಿ ಮನೆ ಮಾಲೀಕ ಈರಪ್ಪ ಚಿಂತಾಮಣಿಯ ಮಗಳ ಮನೆಗೆ ಹೋಗಿದ್ದರು. ಈರಪ್ಪ ಮನೆಯ ರಿನೋವೇಷನ್ ಹಾಗೂ ಮೊಮ್ಮಗನನ್ನು ಎಂಬಿಬಿಎಸ್ ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು 90 ಲಕ್ಷ ಹಣವನ್ನು ಮನೆಯಲ್ಲಿಟ್ಟಿದ್ದರು.

ಮಗಳ ಮನೆಗೆ ತೆರಳಿದಾಗ ಕಳುವಾಯ್ತು 90 ಲಕ್ಷ ಹಣ; ಬಾಂಗ್ಲಾದೇಶ ಮೂಲದ ಇಬ್ಬರು ಬಂಧನ
ಬಂಧಿತ ಆರೋಪಿಗಳು

ಬೆಂಗಳೂರು: ಲಾಕ್​ಡೌನ್​ ಕಾರಣ ಮನೆ ಮಾಲೀಕ ಈರಪ್ಪ ಎಂಬುವವರು ಮಗಳ ಮನೆಗೆ ತೆರಳಿದ್ದ ವೇಳೆ ಕಳ್ಳರು ಮನೆಯಲ್ಲಿದ್ದ ಸುಮಾರು 90 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದರು. ಬಾಂಗ್ಲಾದೇಶ ಮೂಲದ ಆರೋಪಿಗಳಾದ ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಎಂಬುವವರಿಂದ ಈ ಕೃತ್ಯ ನಡೆದಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳು ಸಿಗುವವರೆಗೂ, ಮನೆ ಮಾಲೀಕನಿಗೆ ತನ್ನ ಮನೆಯಲ್ಲಿ ಹಣ ಕಳ್ಳತನವಾಗಿರುವ ಬಗ್ಗೆ ತಿಳಿದಿರಲಿಲ್ಲ.

ಮೇ 2 ರಂದು ಬಾಗಲುಗುಂಟೆಯ ಎಮ್​ಹೆಚ್ಆರ್ ಲೇಔಟ್​ನಲ್ಲಿ ಮನೆ ಮಾಲೀಕ ಈರಪ್ಪ ಚಿಂತಾಮಣಿಯ ಮಗಳ ಮನೆಗೆ ಹೋಗಿದ್ದರು. ಈರಪ್ಪ ಮನೆಯ ರಿನೋವೇಷನ್ ಹಾಗೂ ಮೊಮ್ಮಗನನ್ನು ಎಂಬಿಬಿಎಸ್ ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು 90 ಲಕ್ಷ ಹಣವನ್ನು ಮನೆಯಲ್ಲಿಟ್ಟಿದ್ದರು. ಆದರೆ ಈರಪ್ಪ ಮಗಳ ಮನೆಗೆ ತೆರಳಿದಾಗ ಮನೆಯಲ್ಲಿದ್ದ 90 ಲಕ್ಷ ಕ್ಯಾಶ್​ನ ಕಳ್ಳರು ಎಗರಿಸಿದ್ದರು.

ಹಣ ಕದ್ದು ಆರೋಪಿಗಳು ಬೆಂಗಳೂರಿನಿಂದ ಕೆ.ಆರ್.ಪುರಂಗೆ ತೆರಳಿ ಅಲ್ಲಿಂದ ಕಲ್ಕತ್ತಾಗೆ ಹೊರಟ್ಟಿದ್ದರು. ಬಾಡಿಗೆ ಸ್ವಿಫ್ಟ್ ಕಾರನ್ನು ಮಾಡಿಕೊಂಡು ಕೆ.ಆರ್.ಪುರಂನಿಂದ ಪಶ್ಚಿಮ ಬಂಗಾಳಕ್ಕೆ ಹೊರಟಿದ್ದರು. 40 ಸಾವಿರ ಬಾಡಿಗೆ ಕಾರನ್ನ ಮಾತಾಡಿಕೊಂಡು ಹಣದ ಜೊತೆ ಆರೋಪಿಗಳು ಹೊರಟಿದ್ದರು. ಲಾಕ್​ಡೌನ್​ ಹಿನ್ನೆಲೆ ಆಂಧ್ರದ ಪಲಂನೂರಿನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ 90 ಲಕ್ಷ ಹಣದ ಜೊತೆ ಆರೋಪಿಗಳು ಗಂಗಾವರಂ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾರೆ.

ನಂತರ ಪೊಲೀಸರ ವಿಚಾರಣೆ ವೇಳೆ ಬಗಲುಗುಂಟೆಯಲ್ಲಿ ಕಳವು ಮಾಡಿರುವ ವಿಚಾರ ತಿಳಿದು ಬಂದಿದೆ. ಆಂಧ್ರದ ಚಿತ್ತೂರು ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದಾಗ ಬಗಲುಗುಂಟೆಯಲ್ಲಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಇಷ್ಟೆಲ್ಲ ಆದರೂ ಮನೆ ಮಾಲೀಕ ಈರಪ್ಪರಿಗೆ ಮನೆಯಲ್ಲಿದ್ದ 90 ಲಕ್ಷ ಕಳುವಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ಬಗಲುಗುಂಟೆ ಪೊಲೀಸರು ಕರೆ ಮಾಡಿ ತಿಳಿಸಿದಾಗ ಚಿಂತಾಮಣಿಯಿಂದ ಬಂದು ಈರಪ್ಪ ದೂರನ್ನು ನೀಡಿದ್ದಾರೆ.

ಆರೋಪಿಗಳು ಮೊದಲಿಗೆ ಈರಪ್ಪನ ಮನೆ ಲಾಕ್ ಆಗಿರುವುದನ್ನು ಕಂಡು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ತಡಕಾಡಿದ ಆರೋಪಿಗಳಿಗೆ ಕಬೋರ್ಡ್ ಕೀ ಸಿಗುತ್ತದೆ. ಕೀ ತೆಗೆದು ನೋಡಿದಾಗ 90 ಲಕ್ಷ ಕ್ಯಾಶ್ ಇರುವುದು ಕಂಡಿದೆ. ಹಣ ಸಿಗುತ್ತಿದ್ದಂತೆ ಬೇರೆ ಯಾವ ವಸ್ತುವನ್ನು ಮುಟ್ಟದೇ ಹಣ ತೆಗೆದುಕೊಂಡು ಹೋಗಿದ್ದಾರೆ. ಮನೆಯ ಮುಖ್ಯ ದ್ವಾರ ಮುಟ್ಟದೆ ನಕಲಿ ಕೀ ಬಳಸಿ ಹಿಂದಿನ ಬಾಗಿಲಿನ ಮೂಲಕ ಆರೋಪಿಗಳು ಒಳಗೆ ಹೋಗಿದ್ದರು. ಎರಡು ದಿನಗಳ ಕಾಲ 90 ಲಕ್ಷ ಹಣ ಇದ್ದರೂ ಆರೋಪಿಗಳು ಕೇವಲ 1,600 ರೂಪಾಯಿ ಮಾತ್ರ ಖರ್ಚು ಮಾಡಿದ್ದರು.

ಇದನ್ನೂ ಓದಿ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು

ಹಳೇ ದ್ವೇಷ; ಪಾರ್ಟಿಗೆ ಕರೆದು ಚಿಕ್ಕಬಳ್ಳಾಪುರದಲ್ಲಿ ಯುವಕನ ಕೊಲೆ

(Bagalagunte man lost 90 lakh rupees when he went to daughter home 2 Bangladesh citizens arrested in Bengaluru)