‘ಅಧಿಕಾರಿಗಳಿಂದ ಬೇಜವಾಬ್ದಾರಿ; ಕೋಟಿ ಕೋಟಿ ಆಸ್ತಿ ಕಾಪಾಡಿಕೊಳ್ಳಲು BDA ವಿಫಲ’

ಕೋಟಿ ಕೋಟಿ ಬೆಲೆಬಾಳುವ ಆಸ್ತಿ ಕಾಪಾಡಿಕೊಳ್ಳಲು ಬಿಡಿಎ ವಿಫಲಗೊಂಡಿದ್ದು, ಆಸ್ತಿ ಕಾಪಾಡಿಕೊಳ್ಳಲು ಬಿಡಿಎ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

  • TV9 Web Team
  • Published On - 13:16 PM, 15 Feb 2021
‘ಅಧಿಕಾರಿಗಳಿಂದ ಬೇಜವಾಬ್ದಾರಿ; ಕೋಟಿ ಕೋಟಿ ಆಸ್ತಿ ಕಾಪಾಡಿಕೊಳ್ಳಲು BDA ವಿಫಲ’
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೋಟಿ ಕೋಟಿ ಬೆಲೆಬಾಳುವ ಆಸ್ತಿ ಕಾಪಾಡಿಕೊಳ್ಳಲು ಬಿಡಿಎ ವಿಫಲಗೊಂಡಿದ್ದು, ಆಸ್ತಿ ಕಾಪಾಡಿಕೊಳ್ಳಲು ಬಿಡಿಎ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಬೇಕೆಂದೇ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗ ಯಾರದ್ದೋ ಪಾಲಾಗಿದ್ದರೂ ಕೈಕಟ್ಟಿ ಕುಳಿತಿರುವ ಆರೋಪ ಕೇಳಿಬರುತ್ತಿದೆ.

ಅಕ್ರಮ ನಡೆಯುತ್ತಿದ್ದರೂ ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಉಳಿಸಿಕೊಳ್ಳಲು ಬಿಡಿಎ ವಿಫಲಗೊಂಡಿದೆ. ನಾಗರಬಾವಿಯಲ್ಲಿ ಕರ್ನಾಟಕ ಐಟಿ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘಕ್ಕೆ 2015ರಲ್ಲಿ ಬಿಡಿಎನಿಂದ 1 ಎಕರೆ 1 ಗುಂಟೆ ಜಾಗ ಅಲಾಟ್ ಮಾಡಲಾಗಿತ್ತು. ಅಲಾಟ್​ ಮಾಡಿದ ಜಾಗವನ್ನು ಮುನಿರಾಜು ಪಾಲುದಾರಿಕೆಯ ಎಸ್​ಎಸ್​ ಮತ್ತು ಎಸ್​ವಿ ಡೆವಲಪರ್ಸ್​ಗೆ ಜಿಪಿಎ ಮಾಡಿಕೊಟ್ಟಿತ್ತು. ಕಾನೂನು ಬಾಹಿರವಾಗಿ ಜಿಪಿಎ ಮಾಡಿಕೊಟ್ಟಿದ್ದರೂ ಬಿಡಿಎ ನಿರ್ಲಕ್ಷ್ಯ ತೋರಿದೆ. ಬಿಡಿಎ 2017ರಿಂದ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

ಇದನ್ನೂ ಓದಿ: TV9 Kannada Digital Live: ಬಿಡಿಎ ವಿಸರ್ಜನೆಯಿಂದಲೇ ಭ್ರಷ್ಟಾಚಾರ ತಡೆಯಲು ಸಾಧ್ಯ; ತಜ್ಞರ ಅಭಿಮತ

ಬಿಲ್ಡರ್ ಜೊತೆ ಶಾಮೀಲಾಗಿ ಡೀಲ್ ಏನಾದರೂ ಮಾಡಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಉಪಕಾರ್ಯದರ್ಶಿಯಾಗಿದ್ದ ಸುಧಾ, ಎಂಎಸ್ಎನ್ ಬಾಬು, ಚಿದಾನಂದ, ಹರೀಶ್ ನಾಯಕ್ ಚಿದಾನಂದ, ಆಯುಕ್ತರಾಗಿದ್ದ ಮಂಜುಳಾ, ಮಹದೇವ್, ಅಂದಿನ ಬಿಡಿಎ ಕಾರ್ಯದರ್ಶಿಗಳಾಗಿದ್ದ ಬಸವರಾಜ್ ಜಗದೀಶ್ ಮತ್ತು ವಾಸಂತಿ ಅಮರ್ ಎಲ್ಲರಿಗೂ ಮಾಹಿತಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬಿಡಿಎಗೆ ಸೇರಿದ ಕೋಟಿ ಕೋಟಿ ಆಸ್ತಿಯನ್ನು ಕಣ್ಣ ಮುಂದೆಯೇ ಲೂಟಿ ಹೊಡೆಯುತ್ತಿದ್ದರು ಕಣ್ಮುಚ್ಚಿ ಕೂತಿರುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ.