ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರ ಆರಂಭ: ಇಲ್ಲಿದೆ ವಿವರ

Bannerghatta Biological Park Leopard Safari: ದೇಶದ ಅತಿದೊಡ್ಡ ಚಿರತೆ ಸಫಾರಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆರಂಭವಾಗಲಿದೆ. ಸಫಾರಿ ಆರಂಭಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಚಿರತೆಗಳಿಗೆ ಸಹಬಾಳ್ವೆ ತರಬೇತಿ ನೀಡುವುದೂ ಸೇರಿದಂತೆ ಇನ್ನೂ ಏನೇನು ಸಿದ್ಧತೆ ನಡೆಯುತ್ತಿವೆ? ಸಫಾರಿ ಯಾವಾಗ ಆರಂಭವಾಗಬಹುದು? ಇಲ್ಲಿದೆ ಮಾಹಿತಿ.

ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರ ಆರಂಭ: ಇಲ್ಲಿದೆ ವಿವರ
ಬನ್ನೇರುಘಟ್ಟ ಜೈವಿಕ ಉದ್ಯಾನವನ
Follow us
Ganapathi Sharma
|

Updated on: Feb 20, 2024 | 8:55 AM

ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಮೊದಲ ಮತ್ತು ದೇಶದಲ್ಲೇ ಅತಿದೊಡ್ಡ ಚಿರತೆ ಸಫಾರಿ (Leopard Safari) ಬೆಂಗಳೂರಿನ (Bengaluru) ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಶೀಘ್ರದಲ್ಲೇ ಆರಂಭವಾಗಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿಯನ್ನು ಶೀಘ್ರ ಆರಂಭಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಮತ್ತು ಮೃಗಾಲಯ ನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಚಿರತೆ ಸಫಾರಿ ಶೀಘ್ರ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

ಯಾವಾಗಿನಿಂದ ಆರಂಭ?

ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಒಂದೂವರೆ ತಿಂಗಳಲ್ಲಿ ಸಫಾರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಬಹುದು. ಆದರೆ, ಲೋಕಸಭೆ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಮೇ ನಂತರವಷ್ಟೇ ಸಫಾರಿಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬಹುದು ಎಂದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿರತೆಗಳಿಗೆ ಬೇಕು ಸಹಬಾಳ್ವೆ ತರಬೇತಿ

ಬೇರೆ ಬೇರೆ ಕಡೆಯಿಂದ ತಂದಿರುವ ಚಿರತೆಗಳು ಇರುವ ಕಾರಣ ಸಹಬಾಳ್ವೆ ಬಗ್ಗೆ ಅವುಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಅವುಗಳ ನಡುವೆ ಹೊಂದಾಣಿಕೆ ಮೂಡಿಸಬೇಕಿದೆ. ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೋ ರಕ್ಷಿತಾರಣ್ಯಕ್ಕೆ ತರಲಾದ ಚಿರತೆಗಳ ವಿಷಯದಲ್ಲಿ ಅವುಗಳು ಸಹಬಾಳ್ವೆ ನಡೆಸದೆ ಸಮಸ್ಯೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿರತೆ ಸಫಾರಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರದೇಶದಲ್ಲಿ 20 ಹೆಕ್ಟೇರ್‌ಗಳನ್ನು ಗುರುತಿಸಲಾಗಿದೆ. ಚಿರತೆಗಳು ತಪ್ಪಿಸಿಕೊಳ್ಳಲು ಅವಕಾಶ ಆಗದಂತೆ ಎತ್ತರದ ಮೆಶ್ ಅನ್ನು ಹಾಕಲಾಗಿದ್ದು, ಬೇಲಿಗಳನ್ನೂ ಹಾಕಲಾಗಿದೆ.

ಮೃಗಾಲಯದ ಅಧಿಕಾರಿಗಳು ನಿರ್ವಹಿಸುವ ಚಿರತೆ ಸಫಾರಿಗಳು ಈಗಾಗಲೇ ಮಹಾರಾಷ್ಟ್ರದ ನಾಗ್ಪುರ ಮತ್ತು ಬಿಹಾರದ ರಾಜ್‌ಗಿರ್‌ನಲ್ಲಿ ತೆರೆದಿವೆ. ಆದರೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಸಫಾರಿ ಅವುಗಳಿಗಿಂತ ದೊಡ್ಡದಾಗಿರಲಿದೆ.

ಈಗ ಗುರುತಿಸಿರುವ ಪ್ರದೇಶದಲ್ಲಿ 20 ಚಿರತೆಗಳನ್ನು ಇಡಬಹುದು. ಸದ್ಯ 12 ಇವೆ. ಅವುಗಳು ಪರಸ್ಪರ ಒಗ್ಗಿಕೊಳ್ಳುವಂತೆ ಮಾಡಲಾಗುತ್ತಿದೆ. ಈ ಚಿರತೆಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ಎಂಟ್ರಿ ಕೊಟ್ಟ ಒಂಟಿ ಸಲಗ, ಭಯಭೀತರಾದ ಗ್ರಾಮಸ್ಥರು

ಹುಲಿಗಳು ಮತ್ತು ಸಿಂಹಗಳಿಗಿಂತ ಭಿನ್ನವಾಗಿ, ಚಿರತೆಗಳು ಬಹಳ ಚುರುಕುಬುದ್ಧಿಯವು. ತಪ್ಪಿಸಿಕೊಳ್ಳಲು ಸಾಧ್ಯವಿರುವ ಯಾವುದೇ ಮಾರ್ಗವನ್ನು ಕಂಡುಕೊಳ್ಳುತ್ತವೆ. ಆದ್ದರಿಂದ ಆವರಣವನ್ನು ರಚಿಸುವಾಗ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಲಾಗಿದೆ.

ಸದ್ಯ ಸಫಾರಿ ಪ್ರದೇಶದಲ್ಲಿ ಇಡಲಾಗುವ ಎಲ್ಲಾ ಚಿರತೆಗಳು ಕಡಿಮೆ ವಯಸ್ಸಿನವು ಮತ್ತು ಮೃಗಾಲಯದಲ್ಲೇ ಸಾಕಿರುವಂಥವು. ಅವು ಚಿಕ್ಕ ಮರಿಗಳಾಗಿದ್ದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಅಥವಾ ವ್ಯಕ್ತಿಗಳು ಹೊಲಗಳಿಂದ ರಕ್ಷಿಸಿ ತಂದವುಗಳಾಗಿವೆ. ದಾಖಲೆಗಳ ಪ್ರಕಾರ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 70 ಚಿರತೆಗಳು, 19 ಹುಲಿಗಳು ಮತ್ತು 19 ಸಿಂಹಗಳು ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್