ಆರ್.ಟಿ. ನಗರದಲ್ಲಿ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ; ಕೊಲೆಯ ಹಿಂದಿನ ಕಾರಣ ನಿಗೂಢ

ನೆನ್ನೆ ರಾತ್ರಿ 8 ರಿಂದ 12 ಗಂಟೆ ನಡುವೆ ಈ ಕೃತ್ಯ ನಡೆದಿದ್ದು, ಪರಿಚಯಸ್ಥರೇ ಈ ಕೊಲೆ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಕೊಲೆಗೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ. ಆರ್.ಟಿ ನಗರ ಪೊಲೀಸರು ತನಿಖೆ ಶುರು ಮಾಡಿದ್ದು, ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • TV9 Web Team
  • Published On - 17:29 PM, 27 Mar 2021
ಆರ್.ಟಿ. ನಗರದಲ್ಲಿ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ; ಕೊಲೆಯ ಹಿಂದಿನ ಕಾರಣ ನಿಗೂಢ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬಾರ್ ಡ್ಯಾನ್ಸರ್ ಅನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಆರ್.ಟಿ. ನಗರದ ನೃಪತುಂಗ ಲೇಔಟ್​ನಲ್ಲಿ ನಡೆದಿದೆ. ಬಾರ್ ಡ್ಯಾನ್ಸರ್ ಜಾರಾ (28) ಕೊಲೆಯಾದ ಯುವತಿ. ರೆಸಿಡೆನ್ಸಿ ರೋಡ್​ನ ಬಾರ್​ ವೊಂದರಲ್ಲಿ ಕೆಲಸ ಮಾಡುತಿದ್ದ ಯುವತಿಯನ್ನು ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ಸಂಬಂಧ ಆರ್​.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ರಾತ್ರಿ 8 ರಿಂದ 12 ಗಂಟೆ ನಡುವೆ ಈ ಕೃತ್ಯ ನಡೆದಿದ್ದು, ಪರಿಚಯಸ್ಥರೇ ಈ ಕೊಲೆ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆರ್.ಟಿ ನಗರ ಪೊಲೀಸರು ತನಿಖೆ ಶುರು ಮಾಡಿದ್ದು, ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ದೊಣ್ಣೆಯಿಂದ ತಲೆಗೆ ಹೊಡೆದು ಮಹಿಳೆಯ ಬರ್ಬರ ಹತ್ಯೆ: ಆರೋಪಿಗಾಗಿ ಪೊಲೀಸರಿಂದ ಹುಡುಕಾಟ

ಸೂಪರ್ ಮಾರ್ಕೆಟ್​ನಿಂದ ಕರೆದೊಯ್ದು, ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ