ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ; 714 ಕಟ್ಟಡಗಳ ಪಟ್ಟಿ ಸಿದ್ಧ

ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯ ಕಂಡುಬರುತ್ತಿದೆ. ಸಣ್ಣ ಪುಟ್ಟ ಮಳೆಗೂ ಬೆಂಗಳೂರು ಪ್ರವಾಹ ಎದುರಿಸುತ್ತಿದೆ. ರಾಜಕಾಲುವೆ ಒತ್ತುವರಿ ಪ್ರವಾಹಕ್ಕೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ; 714 ಕಟ್ಟಡಗಳ ಪಟ್ಟಿ ಸಿದ್ಧ
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ganapathi bhat

Updated on:Nov 23, 2021 | 6:58 PM

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತೀರ್ಮಾನ ಮಾಡಿದೆ. ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ತಯಾರು ಮಾಡಿದೆ. ಒಟ್ಟು 714 ಕಟ್ಟಡಗಳ ತೆರವು ಮಾಡಲು BBMP ತೀರ್ಮಾನ ಕೈಗೊಂಡಿದೆ. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯ 59 ಕಟ್ಟಡ, ದಕ್ಷಿಣ ವಲಯ 20, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ ವಲಯ 103, ಮಹದೇವಪುರ ವಲಯ 184 ಕಟ್ಟಡ, ಬೊಮ್ಮನಹಳ್ಳಿ ವಲಯ 92, ಆರ್.ಆರ್. ನಗರ ವಲಯ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ತಯಾರಿಸಲಾಗಿದೆ.

ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯ ಕಂಡುಬರುತ್ತಿದೆ. ಸಣ್ಣ ಪುಟ್ಟ ಮಳೆಗೂ ಬೆಂಗಳೂರು ಪ್ರವಾಹ ಎದುರಿಸುತ್ತಿದೆ. ರಾಜಕಾಲುವೆ ಒತ್ತುವರಿ ಪ್ರವಾಹಕ್ಕೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಇದೀಗ, ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲು ತೀರ್ಮಾನ ಮಾಡಲಾಗಿದೆ. ಇದೀಗ ಶತಾಯಗತಾಯ ಒತ್ತುವರಿ ತೆರವಿಗೆ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿಯಿಂದ ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ.

ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿ ಕೂಡಲೇ ತೆರವು ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿಯನ್ನು ಕೂಡಲೇ ಗುರುತಿಸಿ, ಒತ್ತುವರಿಯಾದ ಪ್ರದೇಶವನ್ನು ಕೂಡಲೇ ತೆರೆವುಗೊಳಿಸಲು ಆದೇಶ ನೀಡಲಾಗಿದೆ. ಕೆರೆಗಳ ಬಗ್ಗೆ ಸರ್ವೇ ನಂತರ ಬೌಂಡರಿ ನಿಗದಿ ಮಾಡಿಸಿ, ಬೇಲಿ ಅಥವಾ ಗ್ರೀನ್ ಬೇಲಿ ಹಾಕುವ ಮೂಲಕ ಅವುಗಳ ರಕ್ಷಣೆ ಮಾಡಲು ಆದೇಶ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಮಾಹಿತಿ ನೀಡಿದ್ದರು. ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಯನ್ನು ಮಳೆ ನಿಂತ 24 ಗಂಟೆಗಳಲ್ಲಿ ಗೆ ಬೆಸ್ಕಾಂಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದರು.

ಒಟ್ಟಾರೆ ರಾಜ್ಯದಲ್ಲಿ ನವೆಂಬರ್ ನಲ್ಲಿ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಯಾಗಿದೆ. ಕೆರೆ ಕಟ್ಟೆ ಒಡೆದು,ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿರುವ ಮನೆಗಳಿಗೆ ಕೂಡಲೇ 10,000 ನೀಡಲು ಸೂಚನೆ ನೀಡಿದೆ. ನಂತರ ಹಾನಿಯಾದ ಪ್ರಮಾಣದ ಪ್ರಕಾರ ಪರಿಹಾರವನ್ನು ನೀಡಲಾಗುವುದು ಇನ್ನೂ 4 ದಿನ ಮಳೆ ಬರುವ ಸೂಚನೆ ಇದ್ದು, ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತಗಳು ಸನ್ನದ್ಧರಾಗಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು ತಿಳಿಸಿದ್ದರು.

ಈ ಅನಿರೀಕ್ಷಿತ ಮಳೆಯಿಂದ ಆಗಿರುವ ತೊಂದರೆಯಿಂದ ಜನರಿಗೆ ಕೂಡಲೇ ಪರಿಹಾರ ಹಾಗೂ ಅವರ ಸಹಾಯಕ್ಕೆ ಧಾವಿಸುವ ಮುಖಾಂತರ ಅತ್ಯಂತ ದಕ್ಷತೆ ಹಾಗೂ ಕ್ಷಮತೆಯಿಂದ ಈ ಸಂದರ್ಭವನ್ನು ನಿಭಾಯಿಸುತ್ತೇವೆ ಎಂದು ಭರವಸೆ ಇರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ರೈತರು ಪರಿಹಾರ ಮೊತ್ತ ಹೆಚ್ಚಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಚರ್ಚೆ ಆಗಿದ್ದು, ಕೇಂದ್ರ ಈ ಬಗ್ಗೆ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದರು.

ಕಳೆದ ವರ್ಷ ಬೆಳೆದ ಬೆಳೆಗಳನ್ನು ಕೆಲ ರೈತರು ದಾಸ್ತಾನು ಮಾಡಿದ್ದು, ನೀರು ನುಗ್ಗಿ ಹಾಳಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಜಮೀನನಲ್ಲಿರುವ ಬೆಳೆದು ನಿಂತ ಹಾಗೂ ಕಟಾವಾಗಿ ಜಮೀನನಲ್ಲೆ ಇರುವ ಪೈರಿಗೆ , ಪರಿಹಾರ ನೀಡಲಾಗುವುದು, ಆದರೆ ದಾಸ್ತಾನು ಮಾಡಿಕೊಂಡಿರುವ ಬೆಳೆಯ ಹಾನಿಗೆ ಪರಿಹಾರ ನಿಯಮದಂತೆ ಆಗದಿರುವ ಕಾರಣ, ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸಹಾಯ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ: ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ

ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

Published On - 6:53 pm, Tue, 23 November 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM