ನಾವು ಕೊಟ್ಟಾಗ ಲಸಿಕೆ ತಗೊಂಡ್ರೆ ಮಾತ್ರ ಉಚಿತ: ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ

ಕೋವಿಡ್ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಸ್ವಂತ ಹಣದಿಂದ ಲಸಿಕೆ ಪಡೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

  • TV9 Web Team
  • Published On - 18:42 PM, 15 Feb 2021
ನಾವು ಕೊಟ್ಟಾಗ ಲಸಿಕೆ ತಗೊಂಡ್ರೆ ಮಾತ್ರ ಉಚಿತ: ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ
ಬಿಬಿಎಂಪಿ ಸಭೆ

ಬೆಂಗಳೂರು: ಸರ್ಕಾರ ಸೂಚಿಸಿದಾಗ ಜನರು ಕೊರೊನಾ ಲಸಿಕೆ ಪಡೆಯಬೇಕು. ಆಗ ಮಾತ್ರ ಬಿಬಿಎಂಪಿ ಉಚಿತವಾಗಿ ಲಸಿಕೆ ನೀಡುತ್ತದೆ. ಸರ್ಕಾರ ಸೂಚಿಸಿದಾಗ ಲಸಿಕೆ ಪಡೆಯದಿದ್ದರೆ ಸರ್ಕಾರ ವೆಚ್ಚ ಭರಿಸುವುದಿಲ್ಲ. ಜನರು ಲಸಿಕೆಯ ವೆಚ್ಚ ಪಾವತಿಸಬೇಕು ಎಂದು ಬಿಬಿಎಂಪಿ ಹೇಳಿದೆ.

ಸರ್ಕಾರ ಸೂಚನೆ ಹೊರಡಿಸಿದಾಗ ಲಸಿಕೆ ಪಡೆಯದವರ ವಿರುದ್ಧ ಬಿಬಿಎಂಪಿ ಹೊಸ ಅಸ್ತ್ರ ಹೆಣೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಸ್ವಂತ ಹಣದಿಂದ ಲಸಿಕೆ ಪಡೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕೊವಿಡ್ ಪ್ರಾರಂಭದಲ್ಲಿ ಲಸಿಕೆ ಸಿಗಲ್ಲ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿತ್ತು. ಆದ್ರೆ ಈಗ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಜನರು ಮುಂದೆ ಬರುತ್ತಿಲ್ಲ. ಹಾಗಾಗಿ ಇನ್ನು ಮುಂದೆ ನಾವು ವೆಚ್ಚ ಭರಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸ್ವಂತ ಹಣದಿಂದ ಲಸಿಕೆ ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?