Drinking Water: ದಕ್ಷಿಣ ಬೆಂಗಳೂರು ವ್ಯಾಪ್ತಿಯ ಹೆಚ್ಚಿನ ಕಡೆಗಳ ನೀರು ಕುಡಿಯಲು ಯೋಗ್ಯವಲ್ಲ; ಬಿಬಿಎಂಪಿ ಸಮೀಕ್ಷೆ

ಬಿಬಿಎಂಪಿ ಅಧಿಕಾರಿಗಳು ಆರ್​​​ಒ ವಾಟರ್ ಪ್ಲಾಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳ ಟ್ಯಾಪ್‌ಗಳಿಂದ ಮಾದರಿಗಳನ್ನು ಪರೀಕ್ಷಿಸಿದ್ದಾರೆ. ಯೋಗ್ಯವಲ್ಲದ ನೀರು ಇರುವ ಕಡೆ ಕ್ಲೋರಿನ್ ಹಾಕುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ.

Drinking Water: ದಕ್ಷಿಣ ಬೆಂಗಳೂರು ವ್ಯಾಪ್ತಿಯ ಹೆಚ್ಚಿನ ಕಡೆಗಳ ನೀರು ಕುಡಿಯಲು ಯೋಗ್ಯವಲ್ಲ; ಬಿಬಿಎಂಪಿ ಸಮೀಕ್ಷೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jul 17, 2023 | 8:54 PM

ಬೆಂಗಳೂರು, ಜುಲೈ 17: ಮುಂಗಾರು ಮಳೆಯ ಋತುವಿನಲ್ಲಿ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಅತಿಸಾರ (Diarrhoea) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನೀರಿನ ಗುಣಮಟ್ಟದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪರಿಶೀಲನೆ ನಡೆಸಿದೆ. ದಕ್ಷಿಣ ಬೆಂಗಳೂರಿನ ಬಹುತೇಕ ಕಡೆಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಈ ಪರಿಶೀಲನೆ ವೇಳೆ ಕಂಡುಬಂದಿದೆ ಎಂದು ವರದಿಯಾಗಿದೆ. ಜೂನ್ ತಿಂಗಳ ನೀರಿನ ಮಾದರಿ ವಿಶ್ಲೇಷಣೆ ಮಾಡಲಾಗಿದ್ದು, ಒಟ್ಟು 692 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 59 (ಶೇ. 9) ಕಡೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿದೆ. ಈ ಪೈಕಿ 31 ದಕ್ಷಿಣ ಬೆಂಗಳೂರಿದ್ದಾಗಿವೆ.

ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವುದರಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಕಣ್ಗಾವಲು ಹೆಚ್ಚಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಎಎಸ್ ಬಾಲಸುಂದರ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಮಾಡಿದೆ. ಬಿಬಿಎಂಪಿ ಅಧಿಕಾರಿಗಳು ಆರ್​​​ಒ ವಾಟರ್ ಪ್ಲಾಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳ ಟ್ಯಾಪ್‌ಗಳಿಂದ ಮಾದರಿಗಳನ್ನು ಪರೀಕ್ಷಿಸಿದ್ದಾರೆ. ಯೋಗ್ಯವಲ್ಲದ ನೀರು ಇರುವ ಕಡೆ ಕ್ಲೋರಿನ್ ಹಾಕುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

ನೀರಿನ ಪರೀಕ್ಷೆಯನ್ನು ತಿಂಗಳಿಗೊಮ್ಮೆ ಎಂಬಂತೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾರೆ. ಸಾಮಾನ್ಯವಾಗಿ 2-3 ರಷ್ಟು ಮಾದರಿಗಳು ಕುಡಿಯಲು ಯೋಗ್ಯವಲ್ಲ ಎಂಬುದು ಕಂಡುಬರುತ್ತವೆ. ಆದದರೆ, ಮಳೆಗಾಲದಲ್ಲಿ ಇದು ಶೇಕಡಾ 10 ರಷ್ಟು ಏರಿಕೆಯಾಗುತ್ತದೆ. ಕುಡಿಯುವ ನೀರಿನ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಹೆಚ್ಚಳವು ಆಸ್ಪತ್ರೆಗಳಾದ್ಯಂತ ಕಂಡುಬರುತ್ತಿದೆ. ಆದರೆ ಅನೇಕರು ಖಾಸಗಿ ವೈದ್ಯರನ್ನು ಸಂಪರ್ಕಿಸುವುದರಿಂದ ನಿಖರವಾದ ಮಾಹಿತಿಯಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಏರಿಕೆ: ಕಳೆದ 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ

ಜನರು ಅತಿಸಾರದಿಂದ ಬಳಲುತ್ತಿರುವ ವಾರಕ್ಕೆ 18-20 ರಷ್ಟು ಪ್ರಕರಣಗಳು ನಮ್ಮಲ್ಲಿ ಇತ್ತೀಚೆಗೆ ದಾಖಲಾಗಿವೆ. ಅವುಗಳಲ್ಲಿ ಹೆಚ್ಚಿನವು ಕಲುಷಿತ ನೀರಿನ ಸೇವನೆ ಮತ್ತು ಆಗಾಗ್ಗೆ ಹೊರಗೆ ತಿನ್ನುವುದರಿಂದ ಸಂಭವಿಸಿದವು ಎಂಬ ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ ಡಾ. ಪರಿಮಳಾ ವಿ ತಿರುಮಲೇಶ್ ಪ್ರತಿಕ್ರಿಯನ್ನು ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಉಲ್ಲೇಖಿಸಿದೆ.

ಮಳೆಗಾಲದ ಸಂದರ್ಭದಲ್ಲಿ ಅಂತರ್ಜಲವು ಸ್ವತಃ ಕಲುಷಿತಗೊಳ್ಳುತ್ತದೆ ಮತ್ತು ಟೈಫಾಯಿಡ್ ಅಥವಾ ಅತಿಸಾರದಂತಹ ಸೋಂಕನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Mon, 17 July 23