ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ

ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್‌ನ ಆಟೋಗಳಲ್ಲಿ ಹೆಚ್ಚುವರಿ ದರ ವಿಧಿಸುವುದನ್ನು ತಡೆಯಲು "ನಗರ ಮೀಟರ್" ಎಂಬ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಆರ್‌ಟಿಒ ನಿಯಮಗಳ ಪ್ರಕಾರ ದರವನ್ನು ನಿಗದಿಪಡಿಸುತ್ತದೆ ಮತ್ತು ಸಾವಿರಾರು ಆಟೋ ಚಾಲಕರು ಈಗಾಗಲೇ ಇದನ್ನು ಬಳಸುತ್ತಿದ್ದಾರೆ. ಪ್ರಯಾಣಿಕರು ಮತ್ತು ಚಾಲಕರಿಬ್ಬರಿಗೂ ನ್ಯಾಯಯುತ ದರವನ್ನು ಒದಗಿಸುವುದು ಆ್ಯಪ್‌ನ ಉದ್ದೇಶ.

ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ
ನಗರ ಮೀಟರ್​ ಆಟೋ
Follow us
Kiran Surya
| Updated By: ವಿವೇಕ ಬಿರಾದಾರ

Updated on: Dec 02, 2024 | 8:50 AM

ಬೆಂಗಳೂರು, ಡಿಸೆಂಬರ್​ 02: ಕಿಮೀಗೆ ಇಂತಿಷ್ಟೇ ದರವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಕರ್ನಾಟಕ ಸಾರಿಗೆ ಇಲಾಖೆ (Karnataka Transport) ಓಲಾ (Ola), ಊಬರ್ (Ubar)​ ಆಟೋಗಳಿಗೆ ದರ ನಿಗದಿ ಮಾಡಿದೆ. ಆದರೆ, ಈ ನಿಯಮವನ್ನು ಮೀರಿ ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ಆರ್​ಟಿಒ ರೂಲ್ಸ್ ಪ್ರಕಾರ ಆಟೋದಲ್ಲಿ ಎರಡು ಕಿಮೀಗೆ ಮಿನಿಮಮ್ ಚಾರ್ಜ್ 30 ರುಪಾಯಿ ನಂತರದ ಕಿಮೀಗೆ 15 ರೂಪಾಯಿ ಪಡೆದುಕೊಳ್ಳಬೇಕು. ಆದರೆ, ಈ ಅಗ್ರಿಗೇಟರ್ ಕಂಪನಿಗಳು ಮಳೆ ಬರುತ್ತಿರುವ ಸಮಯದಲ್ಲಿ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ಒನ್ ಟು ಡಬಲ್ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿವೆ. ಇದಕ್ಕೆ ಬ್ರೇಕ್ ಹಾಕಲು ನಿರಂಜನ್ ಮತ್ತು ಶಿವು ಎಂಬ ಇಬ್ಬರು ಯುವಕರು ಸೇರಿ ಮೀಟರ್ ಆ್ಯಪ್ ಸೃಷ್ಟಿಸಿದ್ದಾರೆ. ಆಟೋ ಮತ್ತು ಕ್ಯಾಬ್​ ಚಾಲಕರು ಮೀಟರ್ ಹಾಕಿಕೊಂಡು ಡ್ಯೂಟಿ ಮಾಡಬಹದು.

ಇದರಿಂದ ಅಗ್ರಿಗೇಟರ್ ಕಂಪನಿಗಳ ಕಳ್ಳಾಟಕ್ಕೆ ಇನ್ಮುಂದೆ ಬ್ರೇಕ್ ಬೀಳಬಹುದು. ಆರ್​ಟಿಒ ನಿಯಮದ ಪ್ರಕಾರವೇ ನಗರ ಮೀಟರ್ ಆ್ಯಪ್ ಪ್ರಯಾಣಿಕರಿಂದ ದರವನ್ನು ಪಡೆದುಕೊಳ್ಳುತ್ತದೆ. ನಗರದ ಆರೂವರೆ ಸಾವಿರ ಆಟೋದವರು ಈ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಓಲಾ, ಊಬರ್​ ಆಟೋಗಳಿಗೆ ದರ ನಿಗದಿ ಪಡಿಸಿದ ಸಾರಿಗೆ ಇಲಾಖೆ, ಪ್ರಯಾಣಿಕರೇ ಗಮನಿಸಿ

ಮೀಟರ್ ಆ್ಯಪ್ ಬಗ್ಗೆ ಮಾತನಾಡಿದ ಆಟೋ ಚಾಲಕ ಶಾಂತಗೌಡ, ನಾವು ಈಗಾಗಲೇ ಓಲಾ, ಉಬರ್, ರ್‍ಯಾಪಿಡೋ ಮತ್ತು ನಮ್ಮ ಯಾತ್ರಿ ಆ್ಯಪ್​ಗಳನ್ನು ಉಪಯೋಗಿಸಿದ್ದೇವೆ. ಚಾಲಕರಿಗೆ ಮೊದಲು ಇನ್ಸೆಂಟಿವ್ ಕೊಡುತ್ತಿದ್ದರೂ, ಪ್ರಯಾಣಿಕರಿಗೂ ರಿಯಾತಿ ನೀಡುತ್ತಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ದರ ಹೆಚ್ಚಳ ಮಾಡಿದ್ದಾರೆ. ಒನ್ ಟು ಡಬಲ್ ಹಣವನ್ನು ತೆಗೆದುಕೊಳ್ಳುತ್ತಾರೆ. ನಮಗೆ ಹಣ ಕಡಿಮೆ ಕೊಡುತ್ತಿದ್ದಾರೆ. ಈಗ ಇನ್ಸೆಂಟಿವ್ ಬೇಕು ಅಂದರೆ ದಿನಕ್ಕೆ 30 ಬಾಡಿಗೆ ಹೋಗಬೇಕು, ಒಂದು ಬಾಡಿಗೆ ಕಮ್ಮಿ ಆದರೂ ಇನ್ಸೆಂಟಿವ್ ಸಿಗುವುದಿಲ್ಲ. ಮೀಟರ್ ಆ್ಯಪ್​ ಸರ್ಕಾರದ ನಿಯಮದ ಪ್ರಕಾರವೇ ಇದೆ. ನಗರ ಮೀಟರ್ ಆ್ಯಪ್​ನಲ್ಲಿ ತೋರಿಸುವ ಅಷ್ಟೂ ಹಣವು ಚಾಲಕರಿಗೆ ದೊರೆಯುತ್ತದೆ. ಇದರಲ್ಲಿ ಆ್ಯಪ್​​ನವರು ನಮಗೆ ಯಾವುದೇ ಆಮಿಷಗಳನ್ನು ತೋರಿಸುತ್ತಿಲ್ಲ. ಇನ್ಸೆಂಟಿವ್ ಕೊಡುತ್ತಿಲ್ಲ. ಮೀಟರ್​ ಆ್ಯಪ್ ನಿಂದ ಬಾಡಿಗೆಗಳು ಸಿಗುತ್ತಿವೆ. ಪ್ರಾಮಾಣಿಕತೆಗೆ ಬೆಲೆ ಇದೆ. ಗ್ರಾಹಕರಿಂದ ಮೀಟರ್​ನಲ್ಲಿ ತೋರಿಸುವಷ್ಟು ಮಾತ್ರ ಹಣವನ್ನು ಪಡೆಯುತ್ತಿದ್ದೇವೆ ಎಂದು ಹೇಳಿದರು.

ಅಗ್ರಿಗೇಟರ್ ಲೈಸೆನ್ಸ್ ಪಡೆದುಕೊಂಡಿರುವ ಕಂಪನಿಗಳು, ಆರ್​ಟಿಒ ನಿಯಮದ ಪ್ರಕಾರ ಪ್ರಯಾಣಿಕರಿಂದ ದರವನ್ನು ಪಡೆದುಕೊಳ್ಳಬೇಕು. ಆದರೆ ದುಪ್ಪಟ್ಟು ದರವನ್ನು ಪಡೆದುಕೊಳ್ಳಲು ಮುಂದಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಆರ್​ಟಿಒ ಮೇಲೆ ಕೋರ್ಟ್ ಮೂಲಕ ಸ್ಟೇ ತಂದು ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ನೋಡಿಕೊಂಡಿದೆ. ಇನ್ನೂ ಅಗ್ರಿಗೇಟರ್ ಆ್ಯಪ್​ನಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರು ಡ್ಯೂಟಿ ಮಾಡಿದರೂ, ಮಾಡದೆ ಇದ್ದರೂ ಪ್ರತಿದಿನ ಐವತ್ತು ರುಪಾಯಿ ಪಾವತಿ ಮಾಡಬೇಕು.

ಮೀಟರ್​ ಆ್ಯಪ್​ನಲ್ಲಿ ಸದ್ಯ ಚಾಲಕರಿಂದ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಚಾಲಕರು ಈ ಆ್ಯಪ್ ಮೂಲಕ ಡ್ಯೂಟಿ ಮಾಡಲು ಮುಂದಾಗುತ್ತಿದ್ದಾರೆ. ಮತ್ತು ಗ್ರಾಹಕರು ಹೆಚ್ಚಿನ ಹಣ ನೀಡದೆ ಈ ಆ್ಯಪ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತಾನಾಡಿದ ಮೀಟರ್​ ಆ್ಯಪ್ ಮೂಲಕ ಆಟೋದಲ್ಲಿ ಪ್ರಯಾಣ ಮಾಡಿದ ಯುವತಿ, ಈ ಆ್ಯಪ್ ತುಂಬಾ ಚೆನ್ನಾಗಿ ಇದೆ. ಈಗ ನಾನು ಬೇರೆ ಆ್ಯಪ್​ನಲ್ಲಿ ನೋಡಿದರೆ ಆಟೋದರ ಕ್ಯಾಬ್​ ದರಕ್ಕಿಂತ ಹೆಚ್ಚಾಗಿ ಇತ್ತು. ಈ ಮೀಟರ್​ ಆ್ಯಪ್​ನಲ್ಲಿ ಕಡಿಮೆ ಇದೆ. ಇದರಿಂದ ನಮಗೆ ತುಂಬಾ ಸಹಾಯ ಆಗುತ್ತದೆ. ನಾನು ಹೋಗುವ ಜಾಗಕ್ಕೆ ಊಬರ್​ನಲ್ಲಿ ನೂರು ರುಪಾಯಿ ತೋರಿಸುತ್ತದೆ. ಆದರೆ ನಗರ ಆ್ಯಪ್ ನಲ್ಲಿ 75 ರುಪಾಯಿ ಮಾತ್ರ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಪ್ರಯಾಣಿಕರಿಗೆ ಆರ್​​ಟಿಒ ದರದಲ್ಲಿ ಒಳ್ಳೆಯ ಸೇವೆ ಕೊಡುತ್ತೇಚೆ ಎಂದು ನಗರಕ್ಕೆ ಕಾಲಿಟ್ಟಿರುವ ಅಗ್ರಿಗೇಟರ್ ಕಂಪನಿಗಳು, ದುಪ್ಪಟ್ಟು ದರವನ್ನು ವಸೂಲಿ ಮಾಡಲು ಮುಂದಾಗಿವೆ. ಆದರೆ ಇದಕ್ಕೆ ಈ ನಗರ ಆ್ಯಪ್ ಬ್ರೇಕ್ ಹಾಕಲು ಮುಂದಾಗಿರುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ