ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ಅಪರಾಧ ಪ್ರಕರಣ ಇಳಿಕೆ, ಆನ್ಲೈನ್ ಚೀಟಿಂಗ್ ಏರಿಕೆ

ಜನವರಿ, ಫೆಬ್ರವರಿಗೆ ಹೋಲಿಸಿದ್ರೆ ಮೂರು ಪಟ್ಟು ಕಡಿಮೆಯಾಗಿದೆ. ಶೇಕಡಾವಾರು ಅರ್ಧದಷ್ಟು ಆನ್ಲೈನ್ ಚೀಟಿಂಗ್ ಕೇಸ್ಗಳು ದಾಖಲಾಗಿವೆ. ಕೊರೊನಾ ಲಾಕ್ಡೌನ್ನಿಂದಾಗಿ ಆನ್ ಲೈನ್ ವ್ಯವಹಾರ ಹೆಚ್ಚಾಗಿದ್ದು ಮೋಸ ಮಾಡುವವರೂ ಕೂಡ ಹೆಚ್ಚಾಗಿದ್ದಾರೆ.

ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ಅಪರಾಧ ಪ್ರಕರಣ ಇಳಿಕೆ, ಆನ್ಲೈನ್ ಚೀಟಿಂಗ್ ಏರಿಕೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾಮಾರಿ ಕೊರೊನಾ ಲಾಕ್ಡೌನ್ನಿಂದ ಬೆಂಗಳೂರಲ್ಲಿ ಅಪರಾಧ ಪ್ರಕರಣ ಇಳಿಕೆಯಾಗಿದೆ. ಮೇ ತಿಂಗಳಲ್ಲಿ ಅಪರಾಧ ಪ್ರಕರಣಗಳು ಭಾರಿ ಇಳಿಕೆ ಕಂಡಿದೆ. ಬೆಂಗಳೂರಲ್ಲಿ ಮೇ ತಿಂಗಳಲ್ಲಿ ಕೇವಲ 1966 ಕೇಸ್ಗಳು ದಾಖಲಾಗಿವೆ. ಜನವರಿ, ಫೆಬ್ರವರಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದ್ದವು.

ಜೂನ್ ತಿಂಗಳ ಮೊದಲ ವಾರದಲ್ಲಿ ಕೇವಲ 496 ಪ್ರಕರಣಗಳು ದಾಖಲಾಗಿದ್ದವು. ಜನವರಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳು 6,526, ಫೆಬ್ರವರಿ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣಗಳು 5,642, ಮಾರ್ಚ್ ತಿಂಗಳಲ್ಲಿ ದಾಖಲಾದ ಕೇಸ್ಗಳ ಸಂಖ್ಯೆ 3358 ಹಾಗೂ ಏಪ್ರಿಲ್ ತಿಂಗಳಲ್ಲಿ 2028 ಪ್ರಕರಣಗಳಷ್ಟೇ ದಾಖಲಾಗಿವೆ. ಜನವರಿ, ಫೆಬ್ರವರಿಗೆ ಹೋಲಿಸಿದ್ರೆ ಮೂರು ಪಟ್ಟು ಕಡಿಮೆಯಾಗಿದೆ. ಶೇಕಡಾವಾರು ಅರ್ಧದಷ್ಟು ಆನ್ಲೈನ್ ಚೀಟಿಂಗ್ ಕೇಸ್ಗಳು ದಾಖಲಾಗಿವೆ.

ಕೊರೊನಾ ಲಾಕ್ಡೌನ್ನಿಂದಾಗಿ ಆನ್ ಲೈನ್ ವ್ಯವಹಾರ ಹೆಚ್ಚಾಗಿದ್ದು ಮೋಸ ಮಾಡುವವರೂ ಕೂಡ ಹೆಚ್ಚಾಗಿದ್ದಾರೆ. ದಾಖಲಾದ ಕೇಸ್ಗಳ ಪೈಕಿ ಅರ್ಧದಷ್ಟು ಆನ್ಲೈನ್ ಚೀಟಿಂಗ್ ಕೇಸ್ಗಳೇ ಇವೆ. ಮನೆಗಳ್ಳತನ, ರಾಬರಿ, ಡಕಾಯಿತಿ, ಸರಗಳ್ಳತನ, ಕೊಲೆ ಪ್ರಕರಣಗಳು ಅಷ್ಟೇನು ನಡೆದಿಲ್ಲ. ಲಾಕ್ಡೌನ್‌ ವೇಳೆಯೂ ಸೈಬರ್ ಕ್ರೈಂ ಆಕ್ಟೀವ್ ಇತ್ತು.

ಇದನ್ನೂ ಓದಿ: ಫ್ಯಾಬಿಫ್ಲೂ ದಾಸ್ತಾನು ಮಾಡಿ ವಿತರಿಸಿದ ಪ್ರಕರಣದಲ್ಲಿ ಗೌತಮ್ ಗಂಭೀರ್ ಫೌಂಡೇಶನ್ ಅಪರಾಧಿ: ಔಷಧ ನಿಯಂತ್ರಕ