ಕೊರೊನಾ ಟೆಸ್ಟ್ ಕಳ್ಳಾಟ ಪ್ರಕರಣ: ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆಯ ಡಾ.ಪ್ರೇಮಾನಂದ್ ಅಮಾನತು

ಕೊವಿಡ್ ಟೆಸ್ಟ್​ಗೆ ನಿಗದಿಯಂತೆ ಗಂಟಲು ದ್ರವ ಸಂಗ್ರಹಿಸಿ ಕಳಿಸಬೇಕು. ಆದ್ರೆ ಲಿಕ್ವಿಡ್​ಗೆ ಖಾಲಿ ಕಡ್ಡಿ ಹಾಕಿ ಟೆಸ್ಟಿಂಗ್​ಗೆ ಕಳಿಸಿದ ಸಿಬ್ಬಂದಿಯ ಕಳ್ಳಾಟ ನಿನ್ನೆ ಬೆಳಕಿಗೆ ಬಂದಿತ್ತು.

  • TV9 Web Team
  • Published On - 17:16 PM, 11 Apr 2021
ಕೊರೊನಾ ಟೆಸ್ಟ್ ಕಳ್ಳಾಟ ಪ್ರಕರಣ: ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆಯ ಡಾ.ಪ್ರೇಮಾನಂದ್ ಅಮಾನತು
ಕೊವಿಡ್ ಟೆಸ್ಟ್​ನ ಕಳ್ಳಾಟದ ವಿಡಿಯೋದ ದೃಶ್ಯಗಳು

ಬೆಂಗಳೂರು: ನಗರದ ಯಲಹಂಕ ವಲಯದ ಕೊಡಿಗೆಹಳ್ಳಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ವೇಳೆ ಸ್ವ್ಯಾಬ್ ಟೆಸ್ಟ್​ ಕಿಟ್​ಗಳನ್ನ ದುರ್ಬಳಕೆ ಮಾಡಿದ್ದ ಆರೋಪದಡಿ ಇದೀಗ ವೈದ್ಯಾಧಿಕಾರಿ ಡಾ.ಪ್ರೇಮಾನಂದ್ ಅವರನ್ನೂ ಅಮಾನತು ಮಾಡಲಾಗಿದೆ. ಸ್ವ್ಯಾಬ್ ಕಲೆಕ್ಟರ್​​ಗಳಾದ ನಾಗರಾಜು, ಹೇಮಂತ್ ಅವರನ್ನು ಸೇವೆಯಿಂದ ವಜಾಗೊಳಿಸಿಸಲಾಗಿತ್ತಾದರೂ, ಇಂದು ವೈದ್ಯಾಧಿಕಾರಿ ಡಾ.ಪ್ರೇಮಾನಂದ್​ರನ್ನು ಸಹ ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಆದೇಶಿಸಿದ್ದಾರೆ.

ಕೊವಿಡ್ ಟೆಸ್ಟ್​ಗೆ ನಿಗದಿಯಂತೆ ಗಂಟಲು ದ್ರವ ಸಂಗ್ರಹಿಸಿ ಕಳಿಸಬೇಕು. ಆದ್ರೆ ಲಿಕ್ವಿಡ್​ಗೆ ಖಾಲಿ ಕಡ್ಡಿ ಹಾಕಿ ಟೆಸ್ಟಿಂಗ್​ಗೆ ಕಳಿಸಿದ ಸಿಬ್ಬಂದಿಯ ಕಳ್ಳಾಟ ನಿನ್ನೆ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಲಹಂಕ ವಲಯದ ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ಟೆಸ್ಟಿಂಗ್ ಮಾಡದೇ ಯಾರದೋ ಹೆಸರು ಹಾಕಿ ಲ್ಯಾಬ್​ಗೆ ರವಾನೆ ಮಾಡುತ್ತಿರುವ ಎಡವಟ್ಟು ನಿನ್ನೆ ಬಯಲಾಗಿತ್ತು. ಕೋಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ಖಾಲಿ ಕಡ್ಡಿಯನ್ನು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಕಳ್ಳಾಟ ಆಡಿ ಆತಂಕ ಸೃಷ್ಟಿಸಿದ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿತ್ತು.

ಕೊವಿಡ್ ಟೆಸ್ಟ್‌ ವೇಳೆ ಬಿಬಿಎಂಪಿ ಸಿಬ್ಬಂದಿ ಕಳ್ಳಾಟವಾಡಿದ ವಿಚಾರವಾಗಿ ನಿನ್ನೆಯೇ ಸಿಬ್ಬಂದಿಯನ್ನು ವಜಾಗೊಳಿಸಿದ್ದೇವೆ. ಎಫ್‌ಐಆರ್ ಸಹ ಹಾಕಲಾಗಿದೆ, ತನಿಖೆ ನಡೆಸಲಾಗುತ್ತಿದೆ. ಇಂತಹ ಘಟನೆ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಈ ಘಟನೆಯನ್ನು ನಾವು ಸಮರ್ಥಿಸಿಕೊಳ್ಳಲು ಆಗಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೆಲಸದಿಂದ ಕೂಡಲೇ ಆತನನ್ನು ವಜಾಗೊಳಿಸಲಾಗಿದೆ. ಮಾಹಿತಿ ಬಂದ ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಕೊವಿಡ್ ಟೆಸ್ಟ್ ವೇಳೆ ಕಳ್ಳಾಟ ಆಡಿ ಆತಂಕ ಸೃಷ್ಟಿಸಿದ್ದ ಸಿಬ್ಬಂದಿಗಳನ್ನು ವಜಾಮಾಡಿದ್ದರು. ಇದೀಗ ಕಳ್ಳಾಟವಾಡಿದ ಸಿಬ್ಬಂದಿಗಳ ಜತೆ ವೈದ್ಯಾಧಿಕಾರಿ. ಡಾ.ಪ್ರೇಮಾನಂದ್​ರನ್ನೂ ಅಮಾನತು ಮಾಡಲಾಗಿದೆ.

ಹೆಚ್ಚುತ್ತಿದೆ ಕೊರೊನಾ ಸೋಂಕು
ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ಎರಡನೇ ಅಲೆ ಪ್ರಾರಂಭಗೊಂಡಿದೆ. ಕರ್ನಾಟಕದಲ್ಲಿ ಹರಡುತ್ತಿರುವ ಕೊರೊನಾ ಅಲೆಯನ್ನು ಮುಂದಿನ ದಿನಗಳಲ್ಲಿ ಹೇಗೆ ನಿಯಂತ್ರಿಸುವುದು ಎಂಬುದರ ಕುರಿತಾಗಿ ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು.

ಸಭೆಯ ಬಳಿಕ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಎಲ್ಲಾ ತಾಂತ್ರಿಕ ಸಲಹಾ ಸಮಿತಿ ಹಾಗೂ ಸರ್ಕಾರದ ವಿಷನ್ ಗ್ರೂಪ್ ಪರಿಣಿತರ ಜತೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಎರಡನೇ ಅಲೆಯಿಂದ ಮುಂದಿನ ದಿನಗಳಲ್ಲಿ ಹೇಗೆ ಹೆಚ್ಚಾಗುತ್ತದೆ ಹೇಗೆ ನಿಯಂತ್ರಣ ಮಾಡಬೇಕು ಎಂಬುದರ ಕುರಿತಾಗಿ ಸವಿಸ್ತಾರವಾಗಿ ಚರ್ಚೆ ನಡೆಸಿದ್ದೇವೆ. ಕೊರೊನಾ ಒಂದು ಅಲೆ 80-120 ದಿನ ಇರುತ್ತದೆ ಎಂದು ಹೇಳಿದ್ದಾರೆ. ಇದು ಇನ್ನೂ ಪ್ರಾರಂಭ. ಇನ್ನು ಎರಡು ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಮೇ 2ನೇ ವಾರದಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ಸೋಂಕಿತನಿಗೆ ಬೆಡ್ ನೀಡದಿದ್ದಕ್ಕೆ ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ

ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್​ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್

(Bengaluru Kodigehalli Covid 19 swab fraud test viral video Dr Premanand suspended)