AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

ಟ್ರಾಫಿಕ್ ಸಿಗ್ನಲ್​ ಸಮಯದ ಮಾಹಿತಿ ಲೈವ್ ಆಗಿ ಆ್ಯಪ್​ನಲ್ಲಿ ಸಿಗುವಂತಿದ್ದರೆ ಹೇಗಿರಬಹುದು? ನಾವು ಸಂಚಾರ ಮಾಡುವ ರಸ್ತೆಯಲ್ಲಿರುವ ಮುಂದಿನ ಸಿಗ್ನಲ್​ ಟೈಮಿಂಗ್ಸ್ ಕುರಿತ ಲೈವ್ ಮಾಹಿತಿ ನಮಗೆ ಮೊದಲೇ ದೊರೆತರೆ? ಇಂಥದ್ದೊಂದು ವ್ಯವಸ್ಥೆಯನ್ನು ಇದೀಗ ಮ್ಯಾಪಲ್ಸ್ ಆ್ಯಪ್ ಬೆಂಗಳೂರು ಸಂಚಾರ ಪೊಲೀಸರ ಸಹಯೋಗದೊಂದಿಗೆ ಪರಿಚಯಿಸಿದೆ. ಅಂದಹಾಗೆ, ಮ್ಯಾಪಲ್ಸ್ ಆ್ಯಪ್​ನ ಈ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ.

ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು
ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತದೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ!
Ganapathi Sharma
|

Updated on: Oct 13, 2025 | 8:04 AM

Share

ಬೆಂಗಳೂರು, ಅಕ್ಟೋಬರ್ 13: ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಮ್ಯಾಪಲ್ಸ್ ಆ್ಯಪ್ (Mappls app) ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್, ಕೌಂಟ್​ಡೌನ್​​​ನ ಲೈವ್ ಮಾಹಿತಿ ನೀಡಲು ಆರಂಭಿಸಿದೆ. ಇದು ಪ್ರಯಾಣಿಕರಿಗೆ ಸಂಚಾರದ ವೇಳೆ ಟ್ರಾಫಿಕ್ ಸಿಗ್ನಲ್ ಸಮಯ, ಇನ್ನೆಷ್ಟು ಸೆಕೆಂಡ್​ಗಳ ಕಾಲ ಸಿಗ್ನಲ್ ಇರಲಿದೆ ಎಂಬ ರಿಯಲ್​ ಟೈಮ್ ಮಾಹಿತಿ ನೀಡುತ್ತದೆ. ಬೆಂಗಳೂರು ನಗರ ಸಂಚಾರ ಪೊಲೀಸ್ (Bengaluru Traffic Police), ಅರ್ಕಾಡಿಸ್ ಇಂಡಿಯಾ (Arcadis India) ಮತ್ತು ಮ್ಯಾಪಲ್ಸ್ (ಮ್ಯಾಪ್‌ಮೈಇಂಡಿಯಾದಿಂದ ನಡೆಸಲ್ಪಡುತ್ತಿದೆ) ತಾಂತ್ರಿಕ ತಂಡಗಳು ಜಂಟಿಯಾಗಿ ಈ ಉಪಕ್ರಮವನ್ನು ಆರಂಭಿಸಿವೆ. ಬಳಕೆದಾರರು ಟ್ರಾಫಿಕ್ ಸಿಗ್ನಲ್ ಸಮೀಪಿಸುತ್ತಿದ್ದಂತೆಯೇ ಮ್ಯಾಪಲ್ಸ್ ಆ್ಯಪ್ ಟ್ರಾಫಿಕ್ ಸಿಗ್ನಲ್ ಲೈಟ್‌ನ ಲೈವ್ ಕೌಂಟ್‌ಡೌನ್ ಮಾಹಿತಿ ನೀಡಲು ಶುರುಮಾಡುತ್ತದೆ. ಸಿಗ್ನಲ್ ಬದಲಾಗಲು ಎಷ್ಟು ಸೆಕೆಂಡುಗಳು ಉಳಿದಿವೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ.

ಹೇಗೆ ಕೆಲಸ ಮಾಡುತ್ತೆ ಮ್ಯಾಪಲ್ಸ್ ಆ್ಯಪ್?

ಈಗ ಮ್ಯಾಪಲ್ಸ್ ಅಪ್ಲಿಕೇಶನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಸಮಯ ಲೈವ್ ಅಪ್​ಡೇಟ್ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು. ಟ್ರಾಫಿಕ್ ಸಿಗ್ನಲ್ ಕೌಂಟ್​ಡೌನ್ ಆಗುತ್ತಿದ್ದಂತೆಯೇ ಅಪ್ಲಿಕೇಶನ್‌ನ ಒಳಗಿನ ನಕ್ಷೆಯಲ್ಲಿ ನೀವು ಅದನ್ನು ನೋಡುತ್ತೀರಿ. ಇದೊಂದು ಅದ್ಭುತವಾಗಿದ್ದು, ವಾಹನ ಸವಾರರಿಗೆ ಪ್ರಯೋಜನವಾಗಲಿದೆ ಎಂದು ಎಂದು ಮ್ಯಾಪ್‌ಮೈ ಇಡಿಯಾ ನಿರ್ದೇಶಕ ರೋಹನ್ ವರ್ಮಾ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಈ ಉಪಕ್ರಮ ಆರಂಭಿಸಲು ಸಹಕರಿಸಿದ ಬೆಂಗಳೂರು ಸಂಚಾರ ಪೊಲೀಸ್, ಅರ್ಕಾಡಿಸ್ ಇಂಡಿಯಾ ಹಾಗೂ ಮ್ಯಾಪ್‌ಮೈ ಇಡಿಯಾ ತಂಡಕ್ಕೆ ಧನ್ಯವಾದಗಳು. ಇಂಥದ್ದೊಂದು ಉಪಕ್ರಮ ಆರಂಭಿಸಿರುವುದು ಭಾರತದಲ್ಲೇ ಮೊದಲು! ಇದು ಮತ್ತು ಇಂಥ ಇನ್ನೂ ಹಲವು ಆವಿಷ್ಕಾರಗಳನ್ನು ಮ್ಯಾಪ್‌ಮೈ ಇಡಿಯಾ ಮಾಡಿದ್ದು, ಎಲ್ಲ ಭಾರತೀಯರಿಗೂ ನೆರವಾಗುತ್ತಿದೆ ಎಂದು ಎಕ್ಸ್ ಸಂದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.

ರೋಹನ್ ವರ್ಮಾ ಎಕ್ಸ್ ಸಂದೇಶ

ರೋಹನ್ ವರ್ಮಾ ಎಕ್ಸ್ ಸಂದೇಶಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ. ಆಗಾಗ್ಗೆ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರು ನಗರದಲ್ಲಿ ಈ ಪ್ರಯೋಗ ಮಾಡಿರುವುದು ಉತ್ತಮ. ಇಲ್ಲಿ ಇದು ಯಶಸ್ವಿಯಾದರೆ, ಮುಂಬರುವ ತಿಂಗಳುಗಳಲ್ಲಿ ಇತರ ಮೆಟ್ರೋ ನಗರಗಳಲ್ಲಿಯೂ ಇದನ್ನು ಪರಿಚಯಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆದರೆ, ‘‘ಇದರ ಉಪಯೋಗವೇನು ಎಂಬುದೇ ನಿಜವಾದ ಪ್ರಶ್ನೆ’’ ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವರ್ಮಾ, ಉದಾಹರಣೆಗೆ; ನೀವು 500 ಮೀಟರ್ ದೂರದಲ್ಲಿರುವಾಗ ಟ್ರಾಫಿಕ್ ಲೈಟ್ ಕೆಂಪು/ಹಸಿರು ಬಣ್ಣಕ್ಕೆ ತಿರುಗಲು ಎಷ್ಟು ಸಮಯ ಉಳಿದಿದೆ ಎಂಬುದು ಆ್ಯಪ್​ನಿಂದ ನಿಮಗೆ ತಿಳಿಯುತ್ತದೆ. ದೈನಂದಿನ ವಾಹನ ಚಾಲನೆಯ ಜೊತೆಗೆ, ಅನೇಕ ತುರ್ತು ಸಂದರ್ಭಗಳಲ್ಲಿ ಇದು ನೆರವಿಗೆ ಬರಬಹುದು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 50 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ!

‘‘ಈ ವೈಶಿಷ್ಟ್ಯವು ಗೂಗಲ್‌ನಲ್ಲಿಯೂ ಲಭ್ಯವಿಲ್ಲ ಎಂಬುದಾಗಿ ಭಾವಿಸುತ್ತೇನೆ’’ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ