Bengaluru Weather: ಶಿಮ್ಲಾಗಿಂತಲೂ ಬೆಂಗಳೂರೇ ಕೂಲ್!; ದಾಖಲೆಯ ಚಳಿಗೆ ನಡುಗಿದ ಸಿಲಿಕಾನ್ ಸಿಟಿ

Bengaluru Weather: ಶಿಮ್ಲಾಗಿಂತಲೂ ಬೆಂಗಳೂರೇ ಕೂಲ್!; ದಾಖಲೆಯ ಚಳಿಗೆ ನಡುಗಿದ ಸಿಲಿಕಾನ್ ಸಿಟಿ
ಬೆಂಗಳೂರು ಹವಾಮಾನ

Bangalore Temperature: ಹವಾಮಾನ ಬ್ಲಾಗರ್‌ಗಳ ಪ್ರಕಾರ, ಮಹಾಬಲೇಶ್ವರ ಮತ್ತು ಶಿಮ್ಲಾ ಸೇರಿದಂತೆ ಭಾರತದ ಅನೇಕ ಗಿರಿಧಾಮಗಳಿಗಿಂತ ಬೆಂಗಳೂರಿನ ವಾತಾವರಣ ತಂಪಾಗಿದೆ.

TV9kannada Web Team

| Edited By: Sushma Chakre

May 13, 2022 | 6:13 PM

ಬೆಂಗಳೂರು: ಬೇಸಿಗೆಯ ಹಾಲಿ ಡೇ ಕಳೆಯಲೆಂದು ಎಲ್ಲರೂ ಹಿಲ್ ಸ್ಟೇಷನ್​ (Hill Stations), ಶಿಮ್ಲಾ (Shimla), ಕೊಡಗು, ಚಿಕ್ಕಮಗಳೂರು, ಕುಲು-ಮನಾಲಿ ಮುಂತಾದ ಸ್ಥಳಗಳಿಗೆ ಹೋಗುತ್ತಾರೆ. ಈ ಸೆಖೆಯನ್ನು ತಡೆಯಲಾರದೆ ವೀಕೆಂಡ್​ಗೆ ತಂಪಾದ ಸ್ಥಳಗಳಿಗೆ ಹೋಗುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ, ಬೆಂಗಳೂರು (Bengaluru Climate) ಈಗ ಯಾವ ಶಿಮ್ಲಾಗೂ ಕಡಿಮೆಯಿಲ್ಲ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ತಾಪಮಾನ (Bangalore Weather) ಭಾರೀ ಕುಸಿತವಾಗಿದ್ದು, ಇಲ್ಲಿನ ವಾತಾವರಣ ಶಿಮ್ಲಾವನ್ನೂ ಮೀರಿಸುವಂತಿದೆ. ಬೆಂಗಳೂರಿನಲ್ಲಿ 23 ಡಿಗ್ರಿ ಸೆಲ್ಸಿಯಸ್​ಗಿಂತಲೂ ತಾಪಮಾನ ಕುಸಿತವಾಗಿದ್ದು, ಹಲವು ಹಿಲ್ ಸ್ಟೇಷನ್​ಗಳಿಗಿಂತಲೂ ಬೆಂಗಳೂರಿನಲ್ಲೇ ಕಡಿಮೆ ತಾಪಮಾನವಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ಮೋಡ ಮುಸುಕಿದ ವಾತಾವರಣವಿದ್ದು, ಚುಮುಗುಡುವ ಚಳಿಗೆ ಬೆಂಗಳೂರಿಗರು ಗಡಗಡ ನಡುಗುತ್ತಿದ್ದಾರೆ.

ಗುರುವಾರ ತಾಪಮಾನವು 11 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದ್ದರಿಂದ ಕಳೆದ 50 ವರ್ಷಗಳಲ್ಲಿ ಮೇ ತಿಂಗಳಲ್ಲಿ ಬೆಂಗಳೂರು ಎರಡನೇ ಅತಿ ಚಳಿಯ ದಿನವನ್ನು ದಾಖಲಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ನಿಂದ 23 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. 1972ರ ಮೇ 14ರಂದು ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ತಂಪಾದ ದಿನವನ್ನು ದಾಖಲಿಸಿತ್ತು. ಇಲ್ಲಿನ ತಾಪಮಾನವು 22.2 ಡಿಗ್ರಿ ಸೆಲ್ಸಿಯಸ್ ಇತ್ತು.

ಅಸಾನಿ ಚಂಡಮಾರುತ ಪರಿಣಾಮ: ಈಶಾನ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಕಳೆದ 10 ದಿನಗಳಿಂದ ಭಾರೀ ಮಳೆಯಾಗುತ್ತಿತ್ತು. ಆದರೆ, ಇದೀಗ ಮಳೆ ಕಡಿಮೆಯಾಗಿದ್ದರೂ ಚಳಿಯ ವಾತಾವರಣ ಹೆಚ್ಚಾಗಿದೆ. ಈ ತಂಪಾದ ವಾತಾವರಣಕ್ಕೆ ಅಸಾನಿ ಚಂಡಮಾರುತ ಕಾರಣ ಎನ್ನಲಾಗಿದೆ. ಇಂದು ಬೆಳಿಗ್ಗೆ 8.30ಕ್ಕೆ 23 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ತಾಪಮಾನವನ್ನು ದಾಖಲಿಸಿದ ಬೆಂಗಳೂರು ಕಳೆದ 50 ವರ್ಷಗಳಲ್ಲಿ 2ನೇ ಅತಿ ಕಡಿಮೆ ವಾತಾವರಣ ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿದೆ. ಹವಾಮಾನ ಬ್ಲಾಗರ್‌ಗಳ ಪ್ರಕಾರ, ಮಹಾಬಲೇಶ್ವರ ಮತ್ತು ಶಿಮ್ಲಾ ಸೇರಿದಂತೆ ಭಾರತದ ಅನೇಕ ಗಿರಿಧಾಮಗಳಿಗಿಂತ ಬೆಂಗಳೂರು ವಾತಾವರಣ ತಂಪಾಗಿದೆ.

ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24.3 ಡಿಗ್ರಿ ಸೆಲ್ಸಿಯಸ್ ಮತ್ತು ಶುಕ್ರವಾರ ಬೆಳಿಗ್ಗೆ 23 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಇದೇ ರೀತಿ ಮೋಡ ಕವಿದ ವಾತಾವರಣ ಇರಲಿದೆ ಎಂದು IMD ಮುನ್ಸೂಚನೆ ನೀಡಿರುವುದರಿಂದ ಚಳಿಯ ವಾತಾವರಣವು ಮುಂದುವರಿಯುವ ಸಾಧ್ಯತೆಯಿದೆ. ರಾಜ್ಯದ ಇತರ ಭಾಗಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ. ಗುರುವಾರ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ.

ಮುಂದಿನ 48 ಗಂಟೆಗಳಲ್ಲಿ, ಕರ್ನಾಟಕದ ದಕ್ಷಿಣ ಒಳನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮತ್ತು ಕರಾವಳಿ ಕರ್ನಾಟಕದ ಹಲವು ಸ್ಥಳಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada