Bengaluru: ತಮ್ಮ ಏರಿಯಾದ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಮಾದರಿಯಾದ ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು

ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ತಮ್ಮದೇ ಆದ ಪಾರ್ಕಿಂಗ್ ಸ್ಥಳವನ್ನು ಮಾಡಿಕೊಂಡಿದ್ದಾರೆ.

Bengaluru: ತಮ್ಮ ಏರಿಯಾದ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಮಾದರಿಯಾದ ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು
ಸಾಂದರ್ಭಿಕ ಚಿತ್ರ
Follow us
|

Updated on:Apr 12, 2023 | 9:12 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇಲ್ಲ. ಪ್ರತಿಯೊಬ್ಬರ ಮನೆ ಮುಂದೆ ವಾಹನಗಳು ನಿಂತಿರುತ್ತವೆ. ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ತಮ್ಮದೇ ಆದ ಪಾರ್ಕಿಂಗ್ ಸ್ಥಳವನ್ನು ಮಾಡಿಕೊಂಡಿದ್ದಾರೆ. ನಗರದಲ್ಲಿ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ಬರುವ ದೂರುಗಳು ಸಾಮಾನ್ಯವಾಗಿದ್ದರೂ, ಬ್ರೂಕ್‌ಫೀಲ್ಡ್ ಲೇಔಟ್‌ನ ನಿವಾಸಿಗಳು ಇತ್ತೀಚೆಗೆ ತಮ್ಮದೇ ಆದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇನ್ನು ಕಿರಿದಾದ, ದಟ್ಟಣೆಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಕಾರುಗಳು ಮತ್ತು ಇತರ ವಾಹನಗಳೇ ಸಮಸ್ಯೆಗೆ ಮೂಲ ಕಾರಣವೆಂದು ಗಮನಿಸಿದ ಕೆಲವರು ಖಾಲಿ ಸೈಟ್‌ನಲ್ಲಿ ಪಾರ್ಕಿಂಗ್ ಸ್ಥಳವನ್ನು ಮಾಡಿದ್ದಾರೆ, ಅದಕ್ಕಾಗಿ ತಿಂಗಳಿಗೆ ₹ 35,000 ಬಾಡಿಗೆ ಕಟ್ಟುತ್ತಿದ್ದಾರೆ.

ಬ್ರೂಕ್‌ಫೀಲ್ಡ್ ಲೇಔಟ್​ನಲ್ಲಿ ದೊಡ್ಡ ಶಾಲೆ ಇದೆ. ಶಾಲೆ ಒಳಗೆ ಪೋಷಕರ ವಾಹನಗಳನ್ನು ನಿಲ್ಲಿಸಲು ಅನುಮತಿ ಇಲ್ಲ. ಹೀಗಾಗಿ ಪೋಷಕರು ತಮ್ಮ ಕಾರುಗಳನ್ನು ರಸ್ತೆಯ ಬದಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಹೀಗಾಗಿ ಶಾಲೆಯ ಎದುರಿನ ಖಾಲಿ ಜಾಗದ ಮಾಲೀಕರೊಂದಿಗೆ ಮಾತನಾಡಿ, ಜಾಗವನ್ನು ಶುಚಿಗೊಳಿಸಿ ಸುಮಾರು 20 ಕಾರುಗಳನ್ನು ಏಕಕಾಲಕ್ಕೆ ನಿಲ್ಲಿಸಲು ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಗೆ ಬರುವ ವಾಹನಗಳಷ್ಟೇ ಅಲ್ಲ, ಸಮೀಪದ ವಾಣಿಜ್ಯ ಮಳಿಗೆಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ಗೆ ಬರುವವರಿಗೂ ಜಾಗ ಬಳಸಲು ಉತ್ತೇಜನ ನೀಡುತ್ತಿದ್ದೇವೆ ಎಂದು ಬ್ರೂಕ್‌ಫೀಲ್ಡ್‌ ಬಡಾವಣೆ ನಿವಾಸಿಗಳಾದ ಶಾಂತನು ಎಂಬುವವರು ತಿಳಿಸಿದರು.

ಇದನ್ನೂ ಓದಿ: E-Autos: ಇ-ಆಟೋ ಖರೀದಿಗೆ ಬೇಕಿದೆ ಮತ್ತಷ್ಟು ಉತ್ತೇಜನ, ಎಲೆಕ್ಟ್ರಿಕ್ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳೇನು?

ಕ್ರೌಡ್ ಫಂಡಿಂಗ್ ಮೂಲಕ ಈ ಯೋಜನೆಗೆ 13 ಲಕ್ಷ ಸಂಗ್ರಹಿಸಲಾಗಿದೆ”. ಚನಾ ಫಲಕಗಳ ಅಳವಡಿಕೆಯ ಜೊತೆಗೆ, ಸ್ಥಳೀಯ ಸ್ವಯಂಸೇವಕರು ದಿನಕ್ಕೆ ಮೂರು ಬಾರಿ ಅಂದರೆ ಶಾಲೆಯ ಪೀಕ್ ಅವರ್‌ನಲ್ಲಿ ಬಂದು ಇಲ್ಲಿ ಪರಿಶೀಲಿಸುತ್ತಾರೆ. ಹಾಗೂ ಈ ಜಾಗದಲ್ಲಿ ಕಾರುಗಳನ್ನು ನಿಲ್ಲಿಸಲು ಮಾರ್ಗದರ್ಶನ ಮಾಡುತ್ತಾರೆ. ಎರಡು ತಿಂಗಳ ಹಿಂದೆ ಪ್ರಾರಂಭವಾದ ಈ ಯೋಜನೆಯು ಉತ್ತಮ ಫಲಿತಾಂಶವನ್ನು ನೀಡಿದೆ. ಶಾಲೆಯ ಬಳಿಯ ರಸ್ತೆ ತುಂಬಾ ಕಿರಿದಾಗಿದ್ದು, ಪೀಕ್ ಅವರ್‌ಗಳಲ್ಲಿ, ವಿಶೇಷವಾಗಿ ಬೆಳಿಗ್ಗೆ 7-8.30 ರ ಸುಮಾರಿಗೆ, ಇಲ್ಲಿ ಸಂಚಾರ ಪರಿಸ್ಥಿತಿ ಅಸ್ತವ್ಯಸ್ತವಾಗುತ್ತೆ. ಟ್ರಾಫಿಕ್ ಜಾಮ್‌ನಿಂದ ತೆರಳಲು ಜನರು 10-15 ನಿಮಿಷಗಳ ಕಾಲ ಕಾಯಬೇಕಾಗುತ್ತೆ. ಸದ್ಯ ಈಗ, ಶಾಲೆಯ ಬಳಿ ವಾಹನ ನಿಲುಗಡೆ ಮಾಡದಂತೆ ಈ ಹೊಸ ಯೋಜನೆ ಜಾರಿ ಮಾಡಿದ್ದು, ಇಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಅಪರೂಪವಾಗಿದೆ ಎಂದು ಇನ್ನೊಬ್ಬ ನಿವಾಸಿ ವಿದ್ಯಾ ರಾವ್ ತಿಳಿಸಿದರು.

ಟ್ರಾಫಿಕ್ ಸಮಸ್ಯೆ ಬಗೆಹರಿಸಿದ ಇದೇ ನಿವಾಸಿಗಳು ಕಳೆದ ವರ್ಷ ಅಕ್ಟೋಬರ್‌ನಲ್ಲಿ, ತಮ್ಮ ರಸ್ತೆಗಳಲ್ಲಿ ಅಗೆದ ಹಾಘೂ ಹಾಳಾಗಿದ್ದ ರಸ್ತೆಯನ್ನು ಸರಿಪಡಿಸಿದ್ದರು. ಈ ಬಗ್ಗೆ ಅವರು ಟ್ರಾಫಿಕ್ ಪೊಲೀಸ್ ಅಥವಾ ಇತರ ಅಧಿಕಾರಿಗಳನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಕೇಳಿದಾಗ, BLR ನ ಸದಸ್ಯ ಅರವಿಂದ್ ಕೀರ್ತಿ ಮಾತನಾಡಿ, ನಾವು ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅವರು ಎಲ್ಲಾ ಸಮಸ್ಯೆಗಳಿಗೂ ಪ್ರಮಾಣಿತ ಕ್ರಮಗಳನ್ನು ಹೊಂದಿದ್ದಾರೆ. ಹಾಗೂ ಬೇಗ ಪರಿಹಾರ ಸಿಗುವುದಿಲ್ಲ. ಚಿಕ್ಕ ಪುಟ್ಟ ಸಮಸ್ಯೆಗಳು ಅಧಿಕಾರಿಗಳ ಕಣ್ಣಿಗೆ ಸಮಸ್ಯೆಯಂತೆ ಕಾಣುವುದಿಲ್ಲ. ಹೀಗಾಗಿ ಅವರು ಹೆಚ್ಚು ಗಮನಹರಿಸುವುದಿಲ್ಲ. ಆದ್ರೆ ಸ್ಥಳೀಯ ಮಟ್ಟದಲ್ಲಿ ಅದೊಂದು ಗಂಭೀರ ಸಮಸ್ಯೆಯಾಗಿರುತ್ತದೆ. ಆದ್ದರಿಂದ ಸ್ಥಳೀಯ ನಿವಾಸಿಗಳು ಒಗ್ಗೂಡಿ ಇಂತಹ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:12 am, Wed, 12 April 23