ಸ್ವಿಗ್ಗಿ ಫುಡ್​ ಡೆಲಿವರಿಗೆ ತೆರಳಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಸಾವು

ಕಾರು ಮತ್ತು ಬೈಕ್​ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮರಣ ಹೊಂದಿದ್ದಾರೆ. ಮಂಗಳವಾರ ತಡರಾತ್ರಿ ನಡೆದಿರುವ ಘಟನೆಯಲ್ಲಿ ಮೃತಪಟ್ಟ ಯುವಕರು ಗೌತಮ್​ ಮತ್ತು ಶ್ರೀಕಾಂತ್​ ಎಂದು ತಿಳಿದುಬಂದಿದೆ.

  • TV9 Web Team
  • Published On - 11:05 AM, 24 Feb 2021
ಸ್ವಿಗ್ಗಿ ಫುಡ್​ ಡೆಲಿವರಿಗೆ ತೆರಳಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಸಾವು
ಕಾರು ಮತ್ತು ಬೈಕ್​ ಡಿಕ್ಕಿ ಇಬ್ಬರು ಯುವಕರ ಸಾವು

ಬೆಂಗಳೂರು: ಕಾರು ಮತ್ತು ಬೈಕ್​ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮರಣ ಹೊಂದಿದ್ದಾರೆ. ಮಂಗಳವಾರ ತಡರಾತ್ರಿ ನಡೆದಿರುವ ಘಟನೆಯಲ್ಲಿ ಮೃತಪಟ್ಟ ಯುವಕರು ಗೌತಮ್​ ಮತ್ತು ಶ್ರೀಕಾಂತ್​ ಎಂದು ತಿಳಿದುಬಂದಿದೆ. ಗೌತಮ್​ ಮತ್ತು ಶ್ರೀಕಾಂತ್​ ಸ್ವಿಗ್ಗಿ ಡೆಲಿವರಿ ಬಾಯ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಹಕರು ಆರ್ಡರ್​ ಮಾಡಿದ್ದ ಊಟವನ್ನು ನೀಡಲೆಂದು ಜಾಲಹಳ್ಳಿ ಬಳಿಯ ಅಪಾರ್ಟ್ಮೆಂಟ್​ಗೆ ತೆರಳಿದ್ದರು. ಊಟ ಕೊಟ್ಟು ವಾಪಾಸ್​ ಆಗುವ ವೇಳೆ ಅಪಘಾತ ಸಂಭವಿಸಿದೆ.

ವೇಗವಾಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಯುವಕರ ಬೈಕ್​ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕ್​ ಸವಾರರಾದ ಗೌತಮ್​ ಮತ್ತು ಶ್ರೀಕಾಂತ್​​ ಮರಣ ಹೊಂದಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾವೇರಿಯಲ್ಲಿ ಅಪಘಾತ:
ರಸ್ತೆ ಪಕ್ಕದಲ್ಲಿದ್ದ ಡಿವೈಡರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇದೇ ತಿಂಗಳ 16 ನೇ ತಾರೀಕಿನಂದು ನಡೆದಿದೆ. ನಗರದ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೂರೂವರೆ ವರ್ಷದ ನಯನಾ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇನ್ನು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಬೈಕ್​ನಲ್ಲಿದ್ದ ನಯನಾಳ ತಾಯಿ ಯಶೋಧಾ(21), ತಮ್ಮ ಸಾಯಿರಾಮ(1.5 ವರ್ಷ) ಹಾಗೂ ಮಾವ ಅಣ್ಣಪ್ಪ ಲಮಾಣಿಗೆ(25) ಗಾಯಗಳಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದರು. ಬೈಕ್​ನಲ್ಲಿದ್ದವರು ಶಿಗ್ಗಾಂವಿಯಿಂದ ಮೊಟೇಬೆನ್ನೂರು ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಬೈಕ್​ಗೆ ಹಿಂದಿನಿಂದ ಕಾರ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಇದನ್ನೂ ಓದಿ: Accident | ಬೆಳಗಿನ ಜಾವ ಆಕ್ಸಿಡೆಂಟ್​: ನಿಂತಿದ್ದ ತೈಲ ಟ್ಯಾಂಕರ್​ಗೆ ಕಾರ್​ ಡಿಕ್ಕಿ, ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳ ಸಾವು