ಬೆಂಗಳೂರು: ಜನವರಿ 21 ಮತ್ತು 22ರಂದು ನಡೆಯುವ ಮೊಳೆಮುಕ್ತ ಮರ ಅಭಿಯಾನದ ಪ್ರಯುಕ್ತ ಕುಮಾರಸ್ವಾಮಿ ಲೇಔಟ್ ಮತ್ತು ಬಸವನಗುಡಿಯಲ್ಲಿ ಇಂದು ‘ಬೆಂಗಳೂರು ಹುಡುಗರು’ ತಂಡದಿಂದ ಅಭಿಯಾನ ನಡೆಸಲಾಯಿತು.
ಈ ಮೊಳೆಮುಕ್ತ ಮರ ಅಭಿಯಾನಕ್ಕೆ ಟ್ರಾಫಿಕ್ ಎಸಿಪಿ ಕೆ.ಎನ್. ರಮೇಶ್ ಮತ್ತು ನಿವೃತ್ತ ಎಸಿಪಿ ನಾರಾಯಣ, ಕುಮಾರಸ್ವಾಮಿ ಲೇಔಟ್ನಲ್ಲಿ ಚಾಲನೆ ನೀಡಿದ್ದು, ಹಲವಾರು ಮರಗಳ ಮೇಲಿನ ಕಾನೂನು ಬಾಹಿರ ಭಿತ್ತಿಪತ್ರಗಳು, ಮೊಳೆ ಹಾಗೂ ಪಿನ್ಗಳನ್ನು ತೆಗೆದರು.
ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿಯೂ 30ಕ್ಕೂ ಹೆಚ್ಚು ಮರಗಳ ಮೇಲಿನ ಸಾವಿರಾರು ಮೊಳೆ, ಪಿನ್ ಹಾಗೂ ಅನಧಿಕೃತ ಜಾಹಿರಾತು ಭಿತ್ತಿಪತ್ರಗಳನ್ನು ತೆಗೆಯಲಾಯಿತು.
ಅನಧಿಕೃತ ಜಾಹೀರಾತುದಾರರ ವಿರುದ್ಧ ಕೇಸ್
ಈ ರೀತಿ ಭಿತ್ತಿಚಿತ್ರಗಳನ್ನು ಶಾಶ್ವತವಾಗಿ ತೆಗೆದುಹಾಕುವ ಸಲುವಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮತ್ತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅನಧಿಕೃತ ಜಾಹೀರಾತುದಾರ ವಿರುದ್ಧ ದೂರು ನೀಡಲಾಯಿತು.
ಎಫ್ಐಆರ್ ಪ್ರತಿ
ಹೊನ್ನಾವರದ ಕಾಂಡ್ಲಾ ವಾಕ್ ಬೋರ್ಡ್ಗೆ ಫಿದಾ.. ಸುಂದರ ಪರಿಸರದ ಮಧ್ಯೆ ಜನರ ವಾಕಿಂಗ್