ಮೂರನೆ ಅಲೆ ಸನಿಹವಾಗುತ್ತಿದೆ.. ಆದ್ರೆ ರಾಜ್ಯದಲ್ಲಿ ಮಕ್ಕಳಿಗೆ ಚಿಕಿತ್ಸೆಗೆ ವೈದ್ಯರ ಕೊರತೆ.. 6 ಸಾವಿರ ಮಕ್ಕಳಿಗೆ ಒಬ್ಬ ವೈದ್ಯ

ಸದ್ಯ 3 ಸಾವಿರ ಮಕ್ಕಳ ವೈದ್ಯರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಮಕ್ಕಳ ತಜ್ಞರ ಕೊರತೆ ಇದೆ. ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. ಇದರಲ್ಲಿ ಶೇಕಡಾ 1ರಷ್ಟು ಮಕ್ಕಳಿಗೆ ಸೋಂಕು ಹರಡಬಹುದು. ಸೋಂಕು ತೀವ್ರ ಸ್ವರೂಪ ಪಡೆದ್ರೆ 3 ಲಕ್ಷ ಕೇಸ್ ಆಗಬಹುದು.

ಮೂರನೆ ಅಲೆ ಸನಿಹವಾಗುತ್ತಿದೆ.. ಆದ್ರೆ ರಾಜ್ಯದಲ್ಲಿ ಮಕ್ಕಳಿಗೆ ಚಿಕಿತ್ಸೆಗೆ ವೈದ್ಯರ ಕೊರತೆ.. 6 ಸಾವಿರ ಮಕ್ಕಳಿಗೆ ಒಬ್ಬ ವೈದ್ಯ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇನ್ನೇನು ಏಳೆಂಟು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಲಿದೆ ಎಂದು ತಜ್ಞರ ಸಲಹೆ ನೀಡಿದ್ದಾರೆ. ಮತ್ತೊಂದು ಕಡೆ ಶಾಲೆ ತೆರೆಯಲು ಸರ್ಕಾರ ಸಿದ್ಧತೆ ಶುರು ಮಾಡಿದೆ. ಆದರೆ ಇದರ ನಡುವೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರ ಕೊರತೆ ಉಂಟಾಗಿದೆ. WHO ಪ್ರಕಾರ 1 ಸಾವಿರ ಮಕ್ಕಳಿಗೆ ಒಬ್ಬ ವೈದ್ಯನಿರಬೇಕು. ಆದರೆ ರಾಜ್ಯದಲ್ಲಿ ಮಕ್ಕಳ ವೈದ್ಯರ ಕೊರತೆ ಹೆಚ್ಚಾಗಿದೆ. ಮಕ್ಕಳ ತಜ್ಞರ ಕೊರತೆ ಕಾಡ್ತಿದೆ.

ಸದ್ಯ 3 ಸಾವಿರ ಮಕ್ಕಳ ವೈದ್ಯರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಮಕ್ಕಳ ತಜ್ಞರ ಕೊರತೆ ಇದೆ. ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. ಇದರಲ್ಲಿ ಶೇಕಡಾ 1ರಷ್ಟು ಮಕ್ಕಳಿಗೆ ಸೋಂಕು ಹರಡಬಹುದು. ಸೋಂಕು ತೀವ್ರ ಸ್ವರೂಪ ಪಡೆದ್ರೆ 3 ಲಕ್ಷ ಕೇಸ್ ಆಗಬಹುದು. ನಾರ್ಮಲ್ ಇದ್ದರೆ 1.50 ಲಕ್ಷ ಪ್ರಕರಣಗಳು ಆಗಬಹುದು. ಕನಿಷ್ಠ ಅಂದ್ರೂ 50 ಸಾವಿರದಿಂದ 1 ಲಕ್ಷ ಕೇಸ್ ಆಗಬಹುದು. ಸದ್ಯದ ಅನುಪಾತ ನೋಡಿದ್ರೆ ರಾಜ್ಯದಲ್ಲಿ 6 ಸಾವಿರ ಮಕ್ಕಳಿಗೆ ಒಬ್ಬ ವೈದ್ಯ ಮಾತ್ರ ಇದ್ದಾರೆ. ಸಾವಿರ ಮಕ್ಕಳಿಗೆ ಒಬ್ಬ ವೈದ್ಯ ಇರುವಂತೆ ನೋಡಿಕೊಳ್ಳಬೇಕು. ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ನೀಡಬೇಕು. ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿ.

7-15 ದಿನಗಳ‌ ಕ್ರಾಶ್ ಕೋರ್ಸ್ ಆರಂಭಿಸಿ ಇತರ ವೈದ್ಯರನ್ನ ಚಿಕಿತ್ಸೆ ನೀಡಲು ತಯಾರು ಮಾಡಬೇಕಿದೆ. ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಬೆಡ್ಗಳನ್ನ ICU ಮಾಡಬೇಕಿದೆ. 5000 ಮಕ್ಕಳ ICU ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಸೆಂಟಿನಲ್ ಸರ್ವೇ ಆರಂಭಿಸಲು ಆದೇಶಿಸುವಂತೆ ಸೂಚನೆ ಕೊಡಬೇಕು. ಮಕ್ಕಳು ಸೂಪರ್ ಸ್ಪ್ರೆಡರ್ಸ್ ಅಲ್ಲ, ಮಕ್ಕಳು ಕೊವಿಡ್ ಕ್ಯಾರಿಯರ್ಸ್ ಅಲ್ಲ. ಆದರೆ ಮಕ್ಕಳಿಗೆ ಸೋಂಕು ಬಂದರೆ ಮನೆಯವರಿಂದಲೇ ಬರಬಹುದಾದ ಸಾಧ್ಯತೆಯೇ ಹೆಚ್ಚಿದೆ. ಸದ್ಯ ಮಕ್ಕಳಿಗೆ ಸೋಂಕು ತಗುಲಿದರೂ ಅನಾಹುತ ಸೃಷ್ಟಿ ಮಾಡಿರೋದು ಕಡಿಮೆ.

ಮಕ್ಕಳಲ್ಲಿ ಆಗುತ್ತಿರುವ ಸಾವಿನ ಪ್ರಮಾಣ ಕೂಡ ಕಡಿಮೆ ಇದೆ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ಒಂದಷ್ಟು ತಯಾರಿಗಳನ್ನ ಮಾಡಿಕೊಳ್ಳಬೇಕು . ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ಮುನ್ನವೇ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡು ಮುಂದುವರಿಯಬೇಕು.

ಇದನ್ನೂ ಓದಿ: ಒಂದೆಡೆ ಮೂರನೇ ಅಲೆ ಎಚ್ಚರಿಕೆ, ಮತ್ತೊಂಡೆ ಶಾಲೆ ಆರಂಭದ ಸಲಹೆ; ತಜ್ಞರ ವರದಿಯಿಂದ ಗೊಂದಲದಲ್ಲಿ ಸರ್ಕಾರ.. ಮುಂದೇನು?

Click on your DTH Provider to Add TV9 Kannada