ಟ್ಯಾಂಕರ್ ಮೂಲಕ ನೀರು ತುಂಬಿಸುವಾಗ ಸಂಪ್​ಗೆ ಬಿದ್ದ ಮಗು.. ಒಂದೂವರೆ ನಿಮಿಷದ ಬಳಿಕ ರಕ್ಷಣೆ

ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಫೇಸ್ ಟು ಬಳಿ ಈ ಘಟನೆ ನಡೆದಿದೆ. ಸಾಯಿ ಬಾಲಾಜಿ ಆಂಧ್ರ ಮೆಸ್ ಹೋಟೆಲ್​ನ ಮುಂಭಾಗವಿದ್ದ ನೀರಿನ ಸಂಪ್​ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಈ ವೇಳೆ ನಡೆದುಕೊಂಡು ಬಂದ ಪುಟ್ಟ ಮಗು ಓಪನ್ ಇದ್ದ ಸಂಪ್​ಗೆ ಬಿದ್ದಿದೆ.

  • TV9 Web Team
  • Published On - 11:14 AM, 13 Apr 2021
ಟ್ಯಾಂಕರ್ ಮೂಲಕ ನೀರು ತುಂಬಿಸುವಾಗ ಸಂಪ್​ಗೆ ಬಿದ್ದ ಮಗು.. ಒಂದೂವರೆ ನಿಮಿಷದ ಬಳಿಕ ರಕ್ಷಣೆ
ಸಂಪ್​ಗೆ ಬಿದ್ದ ಮಗು

ಬೆಂಗಳೂರು: ಟ್ಯಾಂಕರ್ ನೀರು ಸಂಪಿಗೆ ತುಂಬಿಸುವಾಗ ಓಪನ್ ಇದ್ದ ಸಂಪ್​ಗೆ ಪುಟ್ಟ ಮಗು ಬಿದ್ದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. ಈ ಘಟನೆಯ ದೃಶ್ಯಗಳನ್ನು ನೋಡಿದ್ರೆ ಎಂತವರಿಗೂ ಆತಂಕವಾಗುತ್ತದೆ. ಹೊರಗಡೆ ಆಟವಾಡುತ್ತಿದ್ದ ಪುಟ್ಟ ಮಗು ಸಂಪ್ ತೆರೆದಿರುವುದನ್ನು ನೋಡದೆ ಸಂಪಿಗೆ ಬಿದ್ದಿದೆ. ಅದೃಷ್ಟವಶಾತ್ ತಕ್ಷಣವೇ ಮಗುವನ್ನು ಸಂಪಿನಿಂದ ಹೊರ ತೆಗೆದು ರಕ್ಷಣೆ ಮಾಡಲಾಗಿದೆ.

ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಫೇಸ್ ಟು ಬಳಿ ಈ ಘಟನೆ ನಡೆದಿದೆ. ಸಾಯಿ ಬಾಲಾಜಿ ಆಂಧ್ರ ಮೆಸ್ ಹೋಟೆಲ್​ನ ಮುಂಭಾಗವಿದ್ದ ನೀರಿನ ಸಂಪ್​ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಈ ವೇಳೆ ನಡೆದುಕೊಂಡು ಬಂದ ಪುಟ್ಟ ಮಗು ಓಪನ್ ಇದ್ದ ಸಂಪ್​ಗೆ ಬಿದ್ದಿದೆ. ಸಂಪ್ ರಸ್ತೆ ಬದಿ ಇದ್ದು ಅಕ್ಕ ಪಕ್ಕದಲ್ಲೇ ಜನ, ವಾಹನಗಳು ಓಡಾಡುತ್ತಿದ್ದವು. ಆದರೆ ಮಗು ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ. ಮಗು ಸಂಪ್​ಗೆ ಬಿದ್ದು ಸುಮಾರು ಒಂದೂವರೆ ನಿಮಿಷದ ನಂತರ ಮಗುವಿನ ತಂದೆ ಆಚೆ ಬಂದಿದ್ದಾರೆ. ಈ ವೇಳೆ ಮಗುವನ್ನು ಹುಡುಕಾಡುವಾಗ ಮಗು ಸಂಪಿಗೆ ಬಿದ್ದಿರುವುದು ಅರಿವಿಗೆ ಬಂದಿದೆ.

ಬಳಿಕ ತಕ್ಷಣ ಚಪ್ಪಲಿ ಬಿಚ್ಚಿ ಸಂಪ್​ನೊಳಗೆ ಇಳಿದಿದ್ದಾರೆ. ಮಗುವನ್ನ ಹೊರಕ್ಕೆ ತೆಗೆದಿದ್ದಾರೆ. ಇದೇ ವೇಳೆ ಮಗು ತಾಯಿ ಹೊರಕ್ಕೆ ಬಂದಿದ್ದು ಮಗುವನ್ನು ಎತ್ತಿಕೊಂಡು ಅದಕ್ಕೆ ಆರೈಕೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಪ್ರಾಣ ಹಾನಿ ಸಂಭವಿಸಿಲ್ಲ. ಚಿಕ್ಕ ಪುಟ್ಟ ಗಾಯಗಳಾಗಿವೆ. ನಿನ್ನೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Child Fall in open sump

ಸಂಪ್​ಗೆ ಬಿದ್ದ ಮಗು ರಕ್ಷಿಸಿದ ತಂದೆ

Child Fall in open sump

ಸಂಪ್​ಗೆ ಬಿದ್ದ ಮಗು

ಇದನ್ನೂ ಓದಿ: ನೀರಿನ ಸಂಪಿಗೆ ಬಿದ್ದು 3 ವರ್ಷದ ಬಾಲಕಿ ಸಾವು

(Child Fall in Open Sump in Electronic City Bengaluru)