ನಗರ ಪೊಲೀಸರಿಂದ ಭಾರಿ ಕಾರ್ಯಾಚರಣೆ, ರೂ 5.5 ಕೋಟಿ ಮೌಲ್ಯದ ಚಿನ್ನಾಭರಣ ವಶ | City police nab thieves, recover jewellery worth Rs 5.5-crores

  • TV9 Web Team
  • Published On - 21:21 PM, 5 Nov 2020
ನಗರ ಪೊಲೀಸರಿಂದ ಭಾರಿ ಕಾರ್ಯಾಚರಣೆ, ರೂ 5.5 ಕೋಟಿ ಮೌಲ್ಯದ ಚಿನ್ನಾಭರಣ ವಶ | City police nab thieves, recover jewellery worth Rs 5.5-crores

ಬೆಂಗಳೂರು ಕೇಂದ್ರ ವಿಭಾಗದ ಅಶೋಕ ನಗರ, ವಿವೇಕ್ ನಗರ, ಮತ್ತು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಇಂದು ಭರ್ಜರಿಯೆನ್ನುವಂಥ ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ ರೂ 3 ಕೋಟಿಗೂ ಹೆಚ್ಚು ಮೌಲ್ಯದ 5.5 ಕೆಜಿ‌ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ನವರತನ್ ಜ್ಯುವೆಲ್ಲರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಲಂಬೋಧರ್ ಎನ್ನುವ ಆರೋಪಿ ಬಿಲ್​ಗಳನ್ನು ತಿದ್ದಿ ಒಟ್ಟು 2 ಕಿಲೋಗ್ರಾಂ ಚಿನ್ನಾಭರಣ ಕದ್ದಿದ್ದ. ಅವನನ್ನು ಬಂಧಿಸಿರುವ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ರೂ 1 ಕೋಟಿ ಮೌಲ್ಯದ 1.5 ಕೆಜಿ ಆಭರಣ ವಶಪಡಿಸಿಕೊಂಡಿದ್ದಾರೆ.

ಅಶೋಕ ನಗರ ಪೊಲೀಸರು ತೌಸಿಫ್​ ಅಲಿಯಾಸ್​ ಪೆಟ್ರೋಲ್ ಹೆಸರಿನ ಕುಖ್ಯಾತ ಮನೆಗಳ್ಳನನ್ನು ಸೆರೆಹಿಡಿದಿದ್ದು ಅವನಿಂದ 2.5 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾಗೆಯೇ, ಬಾಬು ಮತ್ತು ಆತನ ಪತ್ನಿ ಜಯಂತಿಯನ್ನು ಬಂಧಿಸಿರುವ ಇದೇ ಠಾಣೆಯ ಪೊಲೀಸರು ಅವರಿಂದ 2.1 ಕೋಟಿ ಮೌಲ್ಯದ 2.465 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿವೇಕ್ ನಗರ ಪೊಲೀಸರು ಶೇಖ್ ಷಾವಲಿ ಹೆಸರಿನ ಕಳ್ಳನನ್ನು ಬಂಧಿಸಿ ಅವನಿಂದ ರೂ 12 ಲಕ್ಷ ಮೌಲ್ಯದ 355 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.