ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್​ನಂತೆ: ಟ್ವಿಟರ್​ನಲ್ಲಿ ಕಾಂಗ್ರೆಸ್ ಆರೋಪ

ಮಸ್ಕಿಯ ಮತದಾರರಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಣ ಹಂಚಿಕೆ ಮಾಡುವ ವಿಡಿಯೋವನ್ನು ಟ್ಯಾಗ್ ಮಾಡಿ ಆರೋಪಿಸಿದ ರಾಜ್ಯ ಕಾಂಗ್ರೆಸ್, ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹಣದ ಹೊಳೆ ಹರಿಸಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದೆ.

  • TV9 Web Team
  • Published On - 12:55 PM, 13 Apr 2021
ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್​ನಂತೆ:  ಟ್ವಿಟರ್​ನಲ್ಲಿ ಕಾಂಗ್ರೆಸ್ ಆರೋಪ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್​ನಂತೆ ಎಂದು ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್, ಹಣದಿಂದ ಶಾಸಕರು ಮತ್ತು ಮತಗಳನ್ನು ಖರೀದಿ ಮಾಡುತ್ತದೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ.

ಮಸ್ಕಿಯ ಮತದಾರರಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಣ ಹಂಚಿಕೆ ಮಾಡುವ ವಿಡಿಯೋವನ್ನು ಟ್ಯಾಗ್ ಮಾಡಿ ಆರೋಪಿಸಿದ ರಾಜ್ಯ ಕಾಂಗ್ರೆಸ್, ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹಣದ ಹೊಳೆ ಹರಿಸಿದೆ. ಬಿಜೆಪಿ ಹಣ ಹಂಚುವ ದೃಶ್ಯ ಇಡೀ ಜಗತ್ತಿಗೆ ಗೊತ್ತಾದರೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಣ್ಣಿಗೆ ಕಾಣಲಿಲ್ಲವೇ? ಕಂಡರೂ ಜಾಣ ಕುರುಡರಾದರೆ? ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ

ಬಸವಕಲ್ಯಾಣ ಉಪಚುನಾವಣೆ: ಪಕ್ಷದ ಪರ ಪ್ರಚಾರಕ್ಕೆ ಮುಂದಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಕಡಿಮೆ ಆಗುವ ಸಾಧ್ಯತೆಯಿದೆ: ಕೇಂದ್ರ ಸಚಿವ ಸದಾನಂದ ಗೌಡ

(Congress tweeted against BJP and tag the Money sharing video)