ಕೊರೊನಾ ಹೆಚ್ಚಳ: ತಾಂತ್ರಿಕ ಸಲಹಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ 16 ಅಂಶಗಳ ಶಿಫಾರಸು

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಚರ್ಚೆ ನಡೆಸಿದ್ದಾರೆ. ಚರ್ಚಿಸಿದ 16 ಅಂಶಗಳನ್ನು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ನೀಡಿದೆ. 16 ಅಂಶಗಳ ಶಿಫಾರಸಿನಲ್ಲಿ ಲಾಕ್​ಡೌನ್ ಪ್ರಸ್ತಾಪವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ರಾಜ್ಯದ ಮುಖ್ಯಮಂತ್ರಿಗೆ ಮರು ಮಾಹಿತಿ ನೀಡಿದೆ.

  • TV9 Web Team
  • Published On - 15:19 PM, 13 Apr 2021
ಕೊರೊನಾ ಹೆಚ್ಚಳ: ತಾಂತ್ರಿಕ ಸಲಹಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ 16 ಅಂಶಗಳ ಶಿಫಾರಸು
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಮತ್ತೊಮ್ಮೆ ಲಾಕ್​ಡೌನ್​ ಆಗುತ್ತಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್​ಡೌನ್​ ಮಾಡಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಚರ್ಚೆ ನಡೆಸಿದ್ದಾರೆ. ಚರ್ಚಿಸಿದ 16 ಅಂಶಗಳನ್ನು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ನೀಡಿದೆ. 16 ಅಂಶಗಳ ಶಿಫಾರಸಿನಲ್ಲಿ ಲಾಕ್​ಡೌನ್ ಪ್ರಸ್ತಾಪವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮರು ಮಾಹಿತಿ ನೀಡಿದೆ.

ತಾಂತ್ರಿಕ ಸಲಹಾ ಸಮಿತಿ ಹೇಳಿದ ಅಂಶಗಳು

  • ಜನಸಂದಣಿ ನಿಯಂತ್ರಣಕ್ಕಾಗಿ 144 ಸೆಕ್ಷನ್ ಜಾರಿ ಮಾಡಬೇಕು.
  • ಬಿಬಿಎಂಪಿ ಪ್ರತಿ ವಾರ್ಡ್​ನಲ್ಲಿ 2 ಆ್ಯಂಬುಲೆನ್ಸ್ ನಿಯೋಜನೆ ಮಾಡಬೇಕು.
  • ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ರೆಮ್ಡಿಸಿವಿರ್ ಲಸಿಕೆ ಪೂರೈಕೆ ಮಾಡಬೇಕು.
  • ಹೋಮ್ ಐಸೋಲೇಷನ್​ನಲ್ಲಿರುವವರಿಗೆ ಮೆಡಿಕಲ್ ಕಿಟ್, ಆಕ್ಸಿಮೀಟರ್ ಒದಗಿಸಿ ಸೂಕ್ತ ನಿಗಾ ಇರಿಸಬೇಕು.
  • ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಸೋಂಕಿತರನ್ನು ಕೊವಿಡ್ ಕೇರ್ ಸೆಂಟರ್​ಗಳಿಗೆ ಸ್ಥಳಾಂತರಿಸಬೇಕು.
  • ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್, ಬೆಡ್​ಗಳು, ಔಷಧಗಳ ಪೂರೈಕೆ ಮತ್ತು ದಾಸ್ತಾನು ಮಾಡುವುದು.
  • ನಕಲಿ ಆಕ್ಸಿಮೀಟರ್​​ಗಳನ್ನು ನಿಷೇಧ ಮಾಡುವುದು.
  • ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳಿಗೆ ಟೆಲಿ ಟ್ರೀಟ್​ಮೆಂಟ್ ಸೇವೆ ಪೂರೈಸಬೇಕೆಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿ 16 ಅಂಶಗಳ ಶಿಫಾರಸನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಶಿಫಾರಸು ಮಾಡಿದೆ.

ಇದನ್ನೂ ಓದಿ

Karnataka Lockdown: ಸದ್ಯಕ್ಕೆ ಲಾಕ್​ಡೌನ್​ ಮಾಡಲ್ಲ.. ತಾಂತ್ರಿಕ ಸಲಹಾ ಸಮಿತಿ ಲಾಕ್​ಡೌನ್​ಗೆ ಸೂಚಿಸಿಯೂ ಇಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಸಂಸ್ಕೃತ ಕಲಿಕೆಗಾಗಿ ಲಿಟಲ್ ಗುರು ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ